Vinay Kulkarni: ಯೋಗೇಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿ ದೋಷಿ , ಶೀಘ್ರದಲ್ಲೇ ಶಿಕ್ಷೆ ಪ್ರಕಟ

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಧಾರವಾಡ ಗ್ರಾಮೀಣ ಶಾಸಕ ವಿನಯ್ ಕುಲಕರ್ಣಿ ದೋಷಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದ್ದು, 2 ವರ್ಷಕ್ಕಿಂತ ಅಧಿಕ ಶಿಕ್ಷೆಯಾದರೆ ಅವರ ಶಾಸಕ ಸ್ಥಾನ ಅನರ್ಹಗೊಳ್ಳಲಿದೆ.
ಈ ಪ್ರಕರಣವು 2016 ರ ಹಿಂದಿನದು, ಧಾರವಾಡದ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಅವರನ್ನು ಹಾಡಹಗಲೇ ಬರ್ಬರವಾಗಿ ಕೊಲೆ ಮಾಡಲಾಯಿತು. ಈ ಹತ್ಯೆ ರಾಜಕೀಯ ವಿವಾದ ಮತ್ತು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿತ್ತು. ಸ್ಥಳೀಯ ಪೊಲೀಸರ ಆರಂಭಿಕ ತನಿಖೆಗಳ ನಂತರ, ಪ್ರಕರಣವನ್ನು ನಂತರ ಕೇಂದ್ರ ತನಿಖಾ ದಳ (CBI) ಕ್ಕೆ ಹಸ್ತಾಂತರಿಸಲಾಯಿತು. ನಂತರ ಘಟನೆಯ ಬಗ್ಗೆ ವಿವರವಾದ ತನಿಖೆ ನಡೆಸಿತು. ಈ ಕೊಲೆ ರಾಜಕೀಯ ದ್ವೇಷ ಮತ್ತು ಪಿತೂರಿಯ ಪರಿಣಾಮವಾಗಿದೆ ಎಂದು ಸಿಬಿಐ ತಿಳಿಸಿತ್ತು.
ಧಾರವಾಡ (ಏ.15): ಯೋಗೇಶ್‌ ಗೌಡ ಹತ್ಯೆ ಕೇಸ್‌ನಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಧಾರವಾಡ ಗ್ರಾಮೀಣ ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿ ದೋಷಿ ಎಂದು ತೀರ್ಪು ನೀಡಿದೆ. ಅದರೊಂದಿಗೆ ವಿನಯ್‌ ಕುಲಕರ್ಣಿಗೆ ನೀಡಲಿರುವ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ. ಅದರ ಮೇಲೆ ಅವರ ಶಾಸಕ ಸ್ಥಾನ ಕೂಡ ನಿರ್ಧಾರವಾಗಲಿದೆ. ಹಾಗೇನಾದರೂ ವಿನಯ್‌ ಕುಲಕರ್ಣಿಗೆ 2 ವರ್ಷಕ್ಕಿಂತ ಅಧಿಕ ಕಾಲದ ಶಿಕ್ಷೆಯಾದಲ್ಲಿ ತಕ್ಷಣವೇ ಅವರ ಶಾಸಕ ಸ್ಥಾನ ಅನರ್ಹವಾಗಲಿದೆ. ಇನ್ನೊಂದೆಡೆ ಅವರಿಗೆ 2 ವರ್ಷಕ್ಕಿಂತ ಅಧಿಕ ಶಿಕ್ಷೆ ಪ್ರಕಟವಾಗುವ ಸಾಧ್ಯತೆ ಹೆಚ್ಚಿದೆ ಎಂದೂ ವರದಿಯಾಗಿದೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಯಲದ ನ್ಯಾಯಾಧೀಶ ಸಂತೋಷ್‌ ಗಜಾನನ್‌ ಭಟ್‌, ಕೇಸ್‌ನಲ್ಲಿ ಅಂತಿಮ ತೀರ್ಪು ನೀಡಿ ಶಾಸಕ ವಿನಯ್‌ ಕುಲಕರ್ಣಿ ದೋಷಿ ಎಂದು ತೀರ್ಪು ನೀಡುತ್ತಿದ್ದಂತೆ ಕುಂತಲ್ಲೇ ಕುಸಿದ ಅವರು ಕಣ್ಣೀರಿಡಲು ಆರಂಭಿಸಿದರು. ಅಂತಿಮ ತೀರ್ಪಿಗೂ ಮುನ್ನ ಕೇಸ್‌ನಲ್ಲಿ ಖುಲಾಸೆಯಾಗುವ ಭರವಸೆಯಲ್ಲಿದ್ದ ವಿನಯ್‌ ಕುಲಕರ್ಣಿ ಇಷ್ಟು ವರ್ಷ ನಡೆಸಿದ ಪ್ರಯತ್ನವೆಲ್ಲಾ ಒಂದೇ ತೀರ್ಪಿನೊಂದಿಗೆ ಮಣ್ಣುಪಾಲಾಯಿತಲ್ಲ ಎನ್ನುವ ದುಃಖ ಅವರಲ್ಲಿ ಕಾಣುತ್ತಿತ್ತು. ಇನ್ನು ವಿನಯ್‌ ಕುಲಕರ್ಣಿ ಕಣ್ಣೀರಿಡುವಾಗ ಅವರನ್ನು ನೋಡುತ್ತಿದ್ದ ಮೂವರು ಮಕ್ಕಳು ಕೂಡ ಕೋರ್ಟ್‌ ಕಾರಿಡಾರ್‌ನಲ್ಲಿ ಕಣ್ಣೀರಿಟ್ಟರು.

ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಧಾರವಾಡ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಸೇರಿದಂತೆ ಒಟ್ಟು 19 ಆರೋಪಿಗಳನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಅಪರಾಧಿ ಎಂದು ಘೋಷಿಸಿದೆ. ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯವು ಪ್ರಕರಣದಲ್ಲಿ ಭಾಗಿಯಾಗಿರುವ ವಿನಯ್ ಕುಲಕರ್ಣಿ ಸೇರಿ 19 ಮಂದಿ ದೋಷಿಗಳು ಎಂದು ತೀರ್ಪು ನೀಡಿದೆ. ಮಾಜಿ ಸಚಿವ ವಿನಯ್ ಕುಲಕರ್ಣಿ ಅವರು ಈ ಕೊಲೆ ಪ್ರಕರಣದ ಎ15 (15ನೇ ಆರೋಪಿ) ಆಗಿದ್ದು, ಹತ್ಯೆಯ ಹಿಂದೆ ನಡೆದ 'ಒಳಸಂಚು' ಸಂಚಿನಲ್ಲಿ ಭಾಗಿಯಾಗಿರುವುದು ಸಾಬೀತಾಗಿದೆ. ಅಪರಾಧಿಗಳಿಗೆ ನೀಡಲಾಗುವ ಶಿಕ್ಷೆಯ ಪ್ರಮಾಣದ ಕುರಿತು ನಾಳೆ (ಏಪ್ರಿಲ್ 16) ನ್ಯಾಯಾಲಯದಲ್ಲಿ ವಾದ-ಪ್ರತಿವಾದ ನಡೆಯಲಿದ್ದು, ನಂತರ ಅಂತಿಮ ಶಿಕ್ಷೆ ಪ್ರಕಟವಾಗಲಿದೆ.

Post a Comment

0Comments

Post a Comment (0)