ಇನಾಮದಾರ ಶುಗರ್ಸ ಲಿಮಿಟೆಡ್‌ ಮರಕುಂಬಿ ಹಾಗೂ ಜೈನ ಇರಿಗೇಶನ ಸಿಸ್ಟಮ್‌ ಇವರ ಸಂಯುಕ್ತ ಆಶ್ರಯದಲ್ಲಿ ಸಮಗ್ರ ಬೇಸಾಯ ಕ್ರಮಗಳ ಬಗ್ಗೆ ಒಂದು ದಿನದ ಕಾರ್ಯಾಗಾರ ...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಬೈಲಹೊಂಗಲ :- ಇಂದು ದಿನಾಂಕ 04/09/2025 ರಂದು ಬೈಲಹೊಂಗಲದ ವಿಜಯ ಸೋಶಿಯಲ ಕ್ಲಬ್‌ನಲ್ಲಿ ಇನಾಮದಾರ ಶುಗರ್ಸ ಲಿಮಿಟೆಡ್‌ ಮರಕುಂಬಿ ಹಾಗೂ ಜೈನ ಇರಿಗೇಶನ ಸಿಸ್ಟಮ್‌ ಇವರ ಸಂಯುಕ್ತ ಆಶ್ರಯದಲ್ಲಿ ಸಮಗ್ರ ಬೇಸಾಯ ಕ್ರಮಗಳ ಬಗ್ಗೆ ಒಂದು ದಿನದ ಕಾರ್ಯಾಗಾರ ಆಯೋಜಿಸಲಾಗಿತ್ತು.
ಶ್ರೀ ಸಿದ್ದಾರೂಢ ಸ್ವಾಮಿ ನೀರು ಬಳಕೆದಾರರ ಸಂಘದ ಸದಸ್ಯರು, ಕಬ್ಬು ಬೆಳೆಗಾರರು ಮತ್ತು ಸುತ್ತ ಮುತ್ತಲಿನ ರೈತರು ಪಾಲ್ಗೊಂಡಿದ್ದರು. 
ಸಭೆಯ ಮುಖ್ಯಅತಿಥಿಗಳಾಗಿ ಕೃಷಿ ರತ್ನ ಡಾ|| ಸಂಜೀವ ಮಾನೆ ಇವರು ಕಬ್ಬಿನ ಬೆಳೆಯ ಇಳುವರಿ ಹೆಚ್ಚುಸುವಲ್ಲಿ ಕಬ್ಬು ನಾಟಿ ಪದ್ಧತಿ ಮತ್ತು ಗೊಬ್ಬರಗಳ ಉಪಯೋಗ ಮುಂತಾದ ಕ್ರಮಗಳ ಬಗ್ಗೆ ರೈತರನ್ನು ಉದ್ಧೇಶಿಸಿ ಸಮಗ್ರ ಮಾಹಿತಿ ನೀಡಿದರು. ಇದರಿಂದ ರೈತರು ಪ್ರತಿ ಎಕರೆಗೆ ಸುಮಾರು 100 ರಿಂದ 150 ಮೆಟ್ರಿಕ್‌ ಟನ್‌ ಕಬ್ಬು ಬೆಳಯಲು ಅನೂಕುಲ ಆಗಬಹುದಾದ ಸಮಗ್ರ ಮಾಹಿತಿ ನೀಡಿದರು. ಅದರಂತೆ ಇನ್ನೊಬ್ಬ ಅತಿಥಿಗಳಾದ ಕಬ್ಬಿನ ಹಿರಿಯ ವಿಜ್ಞಾನಿಗಳಾದ ಶ್ರೀ ವಿಜಯ ಮಾಳಿ ಇವರು ಕಬ್ಬಿನ ಬೆಳೆಯಲ್ಲಿ ಹನಿ ನೀರಾವರಿಯ ಪ್ರಾಮುಖ್ಯತೆಯ ಬಗ್ಗೆ ತಿಳಿಸಿಕೊಟ್ಟರು. ಸಭೆಯ ಅಧ್ಯಕ್ಷತೆ ವಹಿಸಿದ ಇನಾಮದಾರ ಶುಗರ್ಸ ಲಿಮಿಟೆಡ್‌ ನಿರ್ದೆಶಕರಾದ ಶ್ರೀ ಜಯರಾಜ ಎಸ್‌ ಮೆಟಗುಡ್ಡ ಅವರು ಮಾತನಾಡಿ ಮುಂದಿನ ದಿನಗಳಲ್ಲಿ ಕಬ್ಬಿನ ಬೆಳಯಲ್ಲಿ ಹನಿ ನೀರಾವರಿ ಹಾಗೂ ಸಾವಯವ ಗೊಬ್ಬರ ಉಪಯೋಗಿಸಿ ಪ್ರತಿಯೊಬ್ಬ ರೈತರು ಎಕೆರೆಗೆ 100 ರಿಂದ 150 ಮೆಟ್ರಿಕ್‌ ಟನ್‌ ಕಬ್ಬು ಬೆಳೆಯುವ ಗುರಿ ಹೊಂದಬೇಕು, ಇದಕ್ಕೆ ಕಾರ್ಖಾನೆಯ ವತಿಯಿಂದ ಎಲ್ಲ ರೀತಿಯ ಸಹಕಾರ ಮತ್ತು ಕಾಲಕಾಲಕ್ಕೆ ಸಲಹೆಗಳನ್ನು ನೀಡಲು ಕಾರ್ಖಾನೆಯು ಸದಾ ರೈತರೊಂದಿಗೆ ಇರುತ್ತದೆ ಎಂದು ಭರವಸೆ ನೀಡಿದರು. ಕಾರ್ಖಾನೆಯ ಕಬ್ಬು ವಿಭಾಗದ ಮುಖ್ಯಸ್ಥರಾದ ಶ್ರೀ ಬಿ.ಎ. ಶೇಗುಣಸಿ ಹಾಗೂ ಕಾರ್ಖಾನೆಯ ಸಿವಿಲ್‌ ವಿಭಾಗದ ಮುಖ್ಯಸ್ಥರಾದ ಶ್ರೀ ಎ.ಕೆ.ಪಾಟೀಲ ಅವರು ಮಾತನಾಡಿ ವಿಜ್ಞಾನಿಗಳು ಹಾಗೂ ಕೃಷಿ ರತ್ನ ಶ್ರೀ ಸಂಜೀವ ಮಾನೆ ಇವರ ಮಾರ್ಗದರ್ಶನದಲ್ಲಿ ಮುಂದಿನ ದಿನಗಳಲ್ಲಿ ಕಬ್ಬು ಬೆಳೆದು ನಮ್ಮ ಭಾಗದ ರೈತರು ಸಮಾಜಕ್ಕೆ ಮಾದರಿಯಾಗುವ ನಿಟ್ಟಿನಲ್ಲಿ ಶ್ರಮವಹಿಸಿ ಕಬ್ಬಿನ ಬೆಳೆ ಬೆಳೆಯಲು ತಿಳಿಸಿದರು. ಈ ಸಂದರ್ಭದಲ್ಲಿ ಶ್ರೀ ಸಿದ್ಧಾರೂಢ ಸ್ವಾಮಿ ನೀರು ಬಳಕೆದಾರರ ಸಂಘದ ಅಧ್ಯಕ್ಷರಾದ ಶ್ರೀ ಬಸವರಾಜ ನರಸನ್ನವರ ಹಾಗೂ ಸಂಘದ ಎಲ್ಲಾ ಪದಾಧಿಕಾರಿಗಳು, ರೈತರು, ಜೈನ ಇರಿಗೇಶನ ಕಂಪನಿಯ ಸಿಬ್ಬಂದಿಗಳು ಹಾಗೂ ಕಾರ್ಖಾನೆಯ ಕಬ್ಬು ವಿಭಾಗದ ವಲಯ ಅಧಿಕಾರಿಗಳು ಮತ್ತು ಎಲ್ಲ ಸಿಬ್ಬಂದಿಗಳು ಉಪಸ್ಥಿತರಿದ್ದರು.

Post a Comment

0Comments

Post a Comment (0)