ನೇಸರಗಿ ಸಮೀಪದ ಮೇಕಲಮರಡಿ ಗ್ರಾಮದಲ್ಲಿ ನೂತನವಾಗಿ ಗ್ರಾಮೀಣ ಸಂತೆಯನ್ನು ಪ್ರಾರಂಭ ಮಾಡಲಾಯಿತು, ಬಹುದಿನಗಳ ಕನಸಾಗಿದ್ದ ಇಂದಿನ ಜನರ ಬಹು ಬೇಡಿಕೆ ವಾರದ ಸಂತೆ ಬುಧವಾರದಂದು ಗ್ರಾಮೀಣ ಗುರುಹಿರಿಯರು ಹಾಗೂ ಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದ ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ಪೂಜೆಯನ್ನು ನೆರವೇರಿಸಿದರು.
ಗ್ರಾಮದ ಸಮಸ್ತ ರೈತರು ಹಾಗೂ ಯುವಕರಿಂದ ಉತ್ಸಾಹದ ಮೂಲಕವಾಗಿ ಸಂತೆಯಲ್ಲಿ ಎಲ್ಲರೂ ಪಾಲ್ಗೊಂಡರು ಹಾಗೂ ರೈತ ಸಂಘದ ಮುಖಂಡರಾದ ಮಹಾಂತೇಶ ಹಿರೇಮಠ ಅವರು ಮಾತನಾಡಿ ರೈತ ಸಂಘಟನೆಯಿಂದ ಹಲವಾರು ಬಾರಿ ಮನವಿ ನೀಡಲಾಗಿತ್ತು, ಈ ಮನವಿಯನ್ನು ಆಲಿಸಿ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯವರು ವಾರದ ಸಂತೆಯನ್ನು ಮಾಡುವುದಾಗಿ ಆದೇಶ ಹೊರಡಿಸಿದರು. ಗ್ರಾಮೀಣ ಪ್ರದೇಶದಲ್ಲಿ ತಾವು ತಮ್ಮ ಸ್ವಂತ ಜಮೀನಿನಲ್ಲಿ ಬೆಳೆದ ತರಕಾರಿಯನ್ನು ತಮ್ಮ ಗ್ರಾಮದಲ್ಲಿ ವ್ಯಾಪಾರ ಮಾಡುವುದರ ಮುಖಾಂತರ ರೈತರು ತಮ್ಮ ಆರ್ಥಿಕವಾಗಿ ಅಭಿವೃದ್ಧಿ ಹೊಂದುವರು ಹಾಗೂ ಗ್ರಾಮೀಣ ಭಾಗದ ಜನರು ಬೇರೆ ಗ್ರಾಮಗಳಿಗೆ ಹೋಗಿ ಸಂತೆಯನ್ನು ಮಾಡುವುದರಿಂದ ಸಂಚಾರದ ವೆಚ್ಚ ಕಡಿಮೆಯಾಗಿ ತಮ್ಮ ಗ್ರಾಮದಲ್ಲಿ ಸಿಗಬೇಕಾದ ವಸ್ತುಗಳನ್ನು ನೇರವಾಗಿ ಪಡೆಯುವುದರ ಮೂಲಕ ಉಪಯೋಗವಾಗುತ್ತದೆ. ಆದ ಕಾರಣ ಗ್ರಾಮೀಣ ಜನರು ಒಕ್ಕಟ್ಟಾಗಿ ಸಂತೆಯನ್ನು ಯಶಸ್ವಿಗೊಳಿಸಬೇಕೆಂದು ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾಮದ ಹಾಗೂ ಸುತ್ತಮುತ್ತಲಿನ ರೈತರು ವ್ಯಾಪಾರಸ್ಥರು ಹುಮ್ಮಸ್ಸಿನಲ್ಲಿ ನೂತನ ಸಂತೆಯಲ್ಲಿ ಭಾಗವಹಿಸಿದರು. ಗ್ರಾಮದ ಜನತೆಯಲ್ಲಿ ಕೃಷಿ ಸಂಭ್ರಮದ ಮಣಿ ಮಾಡಿತ್ತು.
ಸಂತೆ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಗ್ರಾಮ ಅಧ್ಯಕ್ಷ ಶ್ರೀಮತಿ ಭಾರತಿ ತಿಗಡಿ ಉಪಾಧ್ಯಕ್ಷರಾದ ಕಾಶಿಮ ಜಮಾದಾರ್ ಸದಸ್ಯರಾದ ರೇಣುಕಾ ಕಡಕೋಳ ಶಾಂತವ್ವ ಹುಲಮನಿ ವಿಜಯ ಯರಡಾಲ, ರಾಜು ಹಣ್ಣಿಕೇರಿ ಮಂಜುಳಾ ಹುಲಮನಿ ಸುಧಾ ಹೊಸಮನಿ ಯಲ್ಲವ್ವ ಗುಡಿ ಶಿವಪ್ಪ ಚೋಬಾರಿ ಚಂದ್ರಯ್ಯ ಹಿರೇಮಠ ರೈತ ಸಂಘದ ಮುಖಂಡ ಮಹಾಂತೇಶ ಹಿರೇಮಠ ನೇಮಣ್ಣ ಬೆಳವಲ ಪಾರಿಸ ಟಗರಿ, ಆಜಾದ್ ಸೈಯದ್ ಮಹಾವೀರ ಅಲ್ಲಯ್ಯನವರ ಅಜ್ಜಪ್ಪ ಕಮತ ಮಹಾಂತೇಶ ಹಿರೇಮಠ ಮಹಾಂತೇಶ್ ಬಡಿಗೇರ ಬಸಯ್ಯ ಹಿರೇಮಠ ಜ್ಞಾನದೇವ ತುಮ್ಮರಗುದ್ದಿ ಹಾಗೂ ನೇಸರಗಿ ಪೊಲೀಸ್ ಠಾಣೆ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.