ಬೈಲಹೊಂಗಲ ತಾಲೂಕಿನ ನೇಸರಗಿ ಸಮೀಪದ ಮೇಕಲಮರಡಿ ಗ್ರಾಮದಲ್ಲಿ ಸಾರ್ವಜನಿಕರಿಗೆ ಅನುಕೂಲ ಆಗುವ ಸಲುವಾಗಿ ಬೇರೆ ಗ್ರಾಮಗಳಿಗೆ ಹೋಗಿ ಸಂತೆಯನ್ನು ತೆಗೆದುಕೊಳ್ಳುವ ಪರಿಸ್ಥಿತಿ ಇದ್ದ ಕಾರಣ ಹಲವು ದಿನಗಳಿಂದ ಸಾರ್ವಜನಿಕರಿಂದ ಬೇಡಿಕೆ ಇತ್ತು ಆದ್ದರಿಂದ ಗ್ರಾಮ ಪಂಚಾಯಿತಿಯ ಸರ್ವ ಸದಸ್ಯರು ಹಾಗೂ ಆಡಳಿತ ಮಂಡಳಿಯಿಂದ ತೀರ್ಮಾನ ಮಾಡಿದ್ದು ದಿನಾಂಕ 10.09.2025 ರಂದು ಮೇಕಲಮರಡಿ ಗ್ರಾಮದಲ್ಲಿ ಸಂತೆ ಮಾಡಲು ಗ್ರಾಮ ಪಂಚಾಯಿತಿಯವರು ತೀರ್ಮಾನಿಸಿದ್ದು ಆದ್ದರಿಂದ ದಿನಾಂಕ 10.09.2025 ಬುಧವಾರದಂದು ಮುಂಜಾನೆ 7 ಗಂಟೆಯಿಂದ ಶ್ರೀ ಬಸವೇಶ್ವರ ಗುಡಿ ಓಣಿಯಲ್ಲಿ ಪ್ರಾರಂಭ ಮಾಡಲು ತೀರ್ಮಾನ ಮಾಡಿದ್ದು, ಆದ ಕಾರಣ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ವ್ಯಾಪಾರಸ್ಥರು ಸದರಿ ಸಂತೆಗೆ ಸಹಕಾರ ನೀಡಬೇಕಾಗಿ ತಮ್ಮಲ್ಲಿ ವಿನಂತಿ ಹಾಗೂ ಗ್ರಾಮದ ಎಲ್ಲ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ತಮ್ಮಲ್ಲಿ ವಿನಂತಿಸಲಾಗಿದೆ.
*ಪ್ರಕಟನೆ...*
*ಗ್ರಾಮ ಪಂಚಾಯಿತಿ ಮೇಕಲಮರಡಿ...*