ಭಾನುವಾರ ರಕ್ತಬಣ್ಣವಾಗ್ತಾನೆ ಚಂದ್ರ.. ಇದು ಅಪಾಯವೇ? ಇದು ವರ್ಷಾಂತ್ಯದ ಖಗ್ರಾಸ ಚಂದ್ರಗ್ರಹಣ...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಖಗ್ರಾಸ ಚಂದ್ರಗ್ರಹಣ!
ಗ್ರಹಣ ಸ್ಪರ್ಶ ಕಾಲ : ರಾತ್ರಿ 9.57
ಗ್ರಹಣದ ಮಧ್ಯ ಕಾಲ: ರಾತ್ರಿ 11.41
ಗ್ರಹಣ ಮೋಕ್ಷ ಕಾಲ: ತಡರಾತ್ರಿ 1.26
ಗ್ರಹಣದ ಸಂಪೂರ್ಣ ಕಾಲಾವಧಿ: 3 ಗಂಟೆ 29 ನಿಮಿಷ

ಭಾನುವಾರ ರಕ್ತಬಣ್ಣವಾಗ್ತಾನೆ ಚಂದ್ರ.. ಇದು ಅಪಾಯವೇ? ಇದು ವರ್ಷಾಂತ್ಯದ ಖಗ್ರಾಸ ಚಂದ್ರಗ್ರಹಣ. ಯಾರಿಗೆ ಲಾಭ? ಶುರು ಎಲ್ಲಿಂದ? ಅಂತ್ಯ ಎಲ್ಲಿ? ಎಲ್ಲೆಲ್ಲಿ ಗೋಚರಿಸುತ್ತೆ ಗ್ರಹಣ? ಅನ್ನೋದರ ಫುಲ್ ಡೀಟೈಲ್ಸ್ ಈ ವರದಿಯಲ್ಲಿದೆ. 
ಗ್ರಹಣ ಬಂತು ಅಂದ್ರೆ ಕೆಲವರಿಗೆ ಭಯ, ಇನ್ನು ಕೆಲವರಿಗೆ ಕುತೂಹಲ. ಕೆಲವರು ಶಾಸ್ತ್ರದಲ್ಲಿ ಹೇಳಿದ್ದ ಸಂಪ್ರದಾಯ ಪಾಲನೆ ಮಾಡಿದ್ರೆ, ಇನ್ನು ಕೆಲವರು ಅದೆಲ್ಲ ಮೂಢನಂಬಿಕೆ ಅಂತ ತಳ್ಳಿಹಾಕ್ತಾರೆ. ಅಷ್ಟಕ್ಕೂ ನಾವು ಗ್ರಹಣಗಳ ಬಗ್ಗೆ ಮಾತಾಡೋದಕ್ಕೆ ಕಾರಣ ಸೆಪ್ಟೆಂಬರ್ 7 ರಂದು ಭಾರತದಲ್ಲಿ ಕಾಣಿಸಿಕೊಳ್ಳಲಿರೋ ಖಗ್ರಾಸ ಚಂದ್ರಗ್ರಹಣ. ಅಂದು ರಕ್ತಸಿಕ್ತವಾಗಿ ಕಾಣಿಸಿಕೊಳ್ಳುವ ಚಂದ್ರ ಕೇಡು ಮಾಡ್ತಾನಾ? ಅದಕ್ಕೆ ಪರಿಹಾರ ಏನು? ಅದೆಲ್ಲದ್ದಕ್ಕೂ ಜ್ಯೋತಿಷ್ಯ ಪಂಡಿತರು ನ್ಯೂಸ್‌ಫಸ್ಟ್‌ಗೆ ಉತ್ತರ ನೀಡಿದ್ದಾರೆ. ಅದನ್ನು ಇಲ್ಲಿ ವಿವರವಾಗಿ ತಿಳಿಸಿದ್ದೇವೆ. ಒಮ್ಮೆ ಓದಿ. 
ಸೂರ್ಯ ಗ್ರಹಣ ಆಗಿರಲಿ, ಚಂದ್ರ ಗ್ರಹಣ ಆಗಿರಲಿ, ಗ್ರಹಣ ಅಂದ್ರೇನೆ ಒಂದ್‌ ರೀತಿಯ ಭಯ ಮನೆ ಮಾಡಿರುತ್ತೆ. ತಮ್ಮ ರಾಶಿ ನಕ್ಷತ್ರದ ಮೇಲೆ ಗ್ರಹಣ ದೃಷ್ಟಿ ಹೇಗಿರುತ್ತೋ ಏನೋ? ಲಾಭ ತರುತ್ತಾ ನಷ್ಟ ಉಂಟು ಮಾಡುತ್ತಾ? ಅನ್ನೋದು ಒಂದು ಪ್ರಶ್ನೆಯಾಗಿದ್ರೆ, ದೋಷ ಇದ್ರೆ ಹೇಗೆ ಪರಿಹಾರ ಮಾಡಿಕೊಳ್ಳಬೇಕು. ಎಚ್ಚರಿಕೆಯಿಂದ ಹೇಗೆ ಇರ್ಬೇಕು ಅನ್ನೋದ್‌ ಇನ್ನೊಂದ್‌ ಟೆನ್ಷನ್‌. ಆದ್ರೆ, ಎಲ್ಲದ್ದಕ್ಕೂ ಪರಿಹಾರ ಅನ್ನೋದು ಇದ್ದೇ ಇರುತ್ತೆ. ಅಷ್ಟಕ್ಕೂ ನಾವು ಗ್ರಹಣಗಳ ಬಗ್ಗೆ ಮಾತಾಡೋಕೆ ಕಾರಣ ಸೆಪ್ಟೆಂಬರ್‌ 7 ರಂದು ಕಾಣಿಸಿಕೊಳ್ಳುತ್ತಿರೋ ಖಗ್ರಾಸ ಚಂದ್ರಗ್ರಹಣ. ಅಂದು ರಕ್ತಸಿಕ್ತನಾಗಿ ಕಾಣಿಸಿಕೊಳ್ಳುವ ಚಂದ್ರ ಯಾವ ರೀತಿಯಲ್ಲಿ ಗೋಚರಿಸ್ತಾನೆ? ಯಾರಿಗೆ ಲಾಭ, ಯಾರ ಮೇಲೆ ದುಷ್ಪರಿಣಾಮ? ಮನೆಯಲ್ಲಿ ಯಾವ ನಿಯಮ ಪಾಲನೆ ಮಾಡ್ಬೇಕು? ಅದೆಲ್ಲವನ್ನೂ ನ್ಯೂಸ್‌ಫಸ್ಟ್‌ಗೆ ಧರ್ಮಶಾಸ್ತ್ರಜ್ಞರು ತೆರೆದಿಟ್ಟಿದ್ದಾರೆ. ಅದೆಲ್ಲವನ್ನು ಡಿಟೇಟ್‌ ಹೇಳುತ್ತೇವೆ. ಅದಕ್ಕೂ ಮುನ್ನ ಗ್ರಹಣ ಅಂದ್ರೆ ಏನು ಅನ್ನೋದನ್ನ ವಿವರಿಸುತ್ತೇ.
ಭಾನುವಾರ ರಕ್ತಬಣ್ಣವಾಗ್ತಾನೆ ಚಂದ್ರ.. ಇದು ಅಪಾಯವೇ? 
ಭೂಮಿಯ ನೆರಳು ಚಂದ್ರನ ಮೇಲೆ ಬಿದ್ದಾಗ ಚಂದ್ರಗ್ರಹಣ!
ಭೂಮಿಯೂ ಸೂರ್ಯನ ಸುತ್ತ ಸುತ್ತಾ ಇರುವಾಗ ಒಂದೇ ಕಕ್ಷೆಯಲ್ಲಿ ಬಂದಿರೋ ಚಂದ್ರನ ಮೇಲೆ ಸೂರ್ಯನ ಕಿರಣಗಳು ಬೀಳದಂತೆ ಭೂಮಿ ತಡೆಯುತ್ತೆ. ಆವಾಗ ಭೂಮಿಯ ನೆರಳು ಚಂದ್ರನ ಮೇಲೆ ಬಿದ್ದಿರುತ್ತೆ. ಅಂತಾ ಸಂದರ್ಭದಲ್ಲಿ ಚಂದ್ರ ರಕ್ತ ಬಣ್ಣದಲ್ಲಿ ಕಂಗೊಳಿಸ್ತಾನೆ. ಹೀಗಾಗಿಯೇ ಬ್ಲಡ್‌ ಮೂನ್‌ ಅಂತ ಕರೆಯಲಾಗುತ್ತೆ. ಆದ್ರೆ, ಬ್ಲಡ್‌ಗೂ? ಚಂದ್ರನಿಗೂ? ಗ್ರಹಣಕ್ಕೂ ಯಾವುದೇ ಸಂಬಂಧವಿಲ್ಲ. ಹಾಗೇ ಗ್ರಹಣಗಳು ಯಾಕೆ ನಡೆಯುತ್ತವೆ ಅನ್ನೋದಕ್ಕೆ ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಉಲ್ಲೇಖವಿದೆ. ರಾಹು, ಕೇತುಗಳ ಪ್ರಭಾವದಿಂದ ಹೀಗಾಗುತ್ತೆ ಅನ್ನೋದನ್ನ ಶಾಸ್ತ್ರ ಹೇಳುತ್ತೆ. ಇನ್ನು ಸೆಪ್ಟೆಂಬರ್‌ 7 ರಂದು ಖಗ್ರಾಸ ಚಂದ್ರ ಗ್ರಹಣ ಭಾರತದಲ್ಲಿ ಕಾಣಿಸ್ಕೊಳ್ಳುತ್ತೆ. ಇದು ಈ ವರ್ಷದ ಎರಡನೇಯ ಮತ್ತು ಕೊನೆಯ ಚಂದ್ರಗ್ರಹಣ. ನಮ್ಮ ದೇಶದಲ್ಲಿ ಕಾಣಿಸ್ಕೊಳ್ಳುವ ಗ್ರಹಣಗಳನ್ನ ಮಾತ್ರ ನಾವು ಆಚರಣೆ ಮಾಡುತ್ತೇವೆ. ಕೆಲವು ಧಾರ್ಮಿಕ ನಿಯಮಗಳನ್ನ ಪಾಲನೆ ಮಾಡುತ್ತೇವೆ. ಖಗ್ರಾಸ ಚಂದ್ರಗ್ರಹಣ ಭಾರತ, ಚೀನಾ, ಮಂಗೋಲಿಯಾ, ರಷ್ಯಾದ ಕೆಲವು ಭಾಗ, ಮಲೇಷ್ಯಾ, ಸಿಂಗಾಪುರ, ಇಂಡೋನೇಷ್ಯಾ, ಶ್ರೀಲಂಕಾ, ಏಷ್ಯಾಖಂಡದ ವಿವಿಧ ರಾಷ್ಟ್ರಗಳು, ಆಫ್ರಿಕಾ ಖಂಡದ ಪೂರ್ವ ಭಾಗ, ಗಲ್ಫ್‌ ದೇಶಗಳು, ಆಸ್ಟ್ರೇಲಿಯಾದಲ್ಲೂ ಕಾಣಿಸಿಕೊಳ್ಳುತ್ತಾ ಇದೆ. ಹಾಗಾದ್ರೆ, ಭಾರತದಲ್ಲಿ ಯಾವ ಕಾಲಮಾನದಲ್ಲಿ ಕಾಣಿಸಿಕೊಳ್ಳುತ್ತೆ.

Post a Comment

0Comments

Post a Comment (0)