ಪ್ರಗತಿಪರ ರೈತರಾದ ಈರಪ್ಪ ಬಸಪ್ಪ ಯತ್ತಿನಮನಿ (54) ರಸ್ತೆ ಅಪಘಾತದಲ್ಲಿ ನಿಧನ...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ನೇಸರಗಿ. ಗ್ರಾಮದ ಪ್ರಗತಿಪರ ರೈತರಾದ ಈರಪ್ಪ ಬಸಪ್ಪ ಯತ್ತಿನಮನಿ (54) ಇವರು ಮಂಗಳವಾರ ದಿನಾಂಕ 18-11-2025 ರಂದು ಯಡೂರ ದೇವಸ್ಥಾನಕ್ಕೆ ಹೋಗಿ ಮರಳಿ ಬರುವಾಗ ಮಲ್ಲಾಪೂರ ಕೆ ಎನ್ ಬಸ್ ನಿಲ್ದಾಣದ ಹತ್ತಿರ ರಾತ್ರಿ 9 ರ ಸುಮಾರಿಗೆ ಸಿಲಿಂಡರ್ ವಾಹನ ಮತ್ತು ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮವಾಗಿ ತಲ್ಲೆಗೆ ತೀವ್ರವಾಗಿ ಪೆಟ್ಟಾಗಿ ಸ್ಥಳದಲ್ಲೇ ನಿಧಾನರಾದರೆ. ಹಿಂದೆ ಕುಳಿತು ಜಗದೀಶ ಕರಡಿ ಈತನಿಗೆ ಗಾಯಗಳಾಗಿ ಬೆಳಗಾವಿಯ ಸಿವಿಲ್ ಆಸ್ಪತ್ರೆಗೆ ಸಾಗಿಸಲಾಗಿದೆ. ಮೃತ ರೈತ ಈರಪ್ಪ ಯತ್ತಿನಮನಿ ಇವರು ಪತ್ನಿ, ಮೂವರು ಪುತ್ರಿಯರು, ಇಬ್ಬರು ಪುತ್ರರು ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.ಈ ಕುರಿತು ನೇಸರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.

Post a Comment

0Comments

Post a Comment (0)