*ಕುಕಡೊಳ್ಳಿ ಕಲ್ಮೇಶ್ವರ ದೇವಸ್ಥಾನದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಅಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ ) ಮಂಜುನಾಥ ಸ್ವಾಮಿಗೆ ಸಹಸ್ರ ಬಿಲ್ವಾರ್ಚನೆ ಪೂಜೆ ಕಾರ್ಯಕ್ರಮ ಯಶಸ್ವಿ* ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ , ಬಿಸಿ ಟ್ರಸ್ಟ್ (ರಿ )ಬೆಳಗಾವಿ ಜೆಲ್ಲೆ ಕುಕಡೊಳ್ಳಿ ಕಲ್ಮೇಶ್ವರ ದೇವಸ್ಥಾನ ಕಲ್ಯಾಣ ಮಂಟಪದಲ್ಲಿ ಸಾಮೂಹಿಕ ಶ್ರೀ ಸಹಸ್ರ ಬಿಲ್ವಾರ್ಚನೆ , ಪೂಜಾ ಕಾರ್ಯಕ್ರಮ ವ್ಯವಸ್ಥಾಪನ ಸಮಿತಿ ಕುಕಡೊಳ್ಳಿ ಬೆಂಡಿಗೇರಿ ವಲಯ ಪ್ರಗತಿ ಬಂದು ಸ್ವ ಸಹಾಯ ಸಂಘಗಳ ಒಕ್ಕೂಟ ಬೆಂಡಿಗೆರಿ ವಲಯ ಇವರ ಸಂಯುಕ್ತ ಆಶ್ರಯದಲ್ಲಿ ಸೋಮವಾರ ದಿನಾಂಕ :17/11/2025 ರಂದು ಮಂಜುನಾಥ ಸ್ವಾಮಿಗೆ ಸಹಸ್ರ ಬಿಲ್ವಾರ್ಚನೆ ಹಾಗೂ ಸಭಾಭವನ ಉದ್ಘಾಟನೆ ಧಾರ್ಮಿಕ ಸಭೆ ಕಾರ್ಯಕ್ರಮ ನೆರವೇರಿತು ವೇದಿಕೆ ಮೇಲೆ ಸಭಾಭವನ ಉದ್ಘಾಟಕರಾಗಿ ಮೃಣಾಲ್ ಹೆಬ್ಬಳ್ಕರ್ ಅವರು ಉದ್ಘಾಟಿಸಿ ವೇದಿಕೆ ಮೇಲೆ ಬಂದು ಆಸೀನರಾದರು ನಂತರ ದೀಪ ಬೆಳಗಿಸುವ ಕಾರ್ಯಕ್ರಮವನ್ನು ಶ್ರೀ ಶಿವಪುತ್ರ ಮಹಾ ಸ್ವಾಮೀಜಿ ಆರೋಡ ಮಠ ಚಿಕ್ಕಮನವಳ್ಳಿ ಆರಾಧ್ಯ ದೈವ ಚೆನ್ನಮಲ್ಲಜ್ಜನ ಮಠ ಅಭಿನವ ಚೆನ್ನಮಲ್ಲಯ್ಯ ಅಜ್ಜನವರು ಗ್ರಾಮ ಪಂಚಾಯತಿ ಅಧ್ಯಕ್ಷರು ಶ್ರೀಮತಿ ರಾಧಾ ಸಿದ್ದವ್ವ ಹೊಸೂರ್ ಸಭೆಯ ಮುಖ್ಯ ಅತಿಥಿಗಳಾಗಿ ಸತೀಶ್ ನಾಯ್ಕ ಜಿಲ್ಲೆ ನಿರ್ದೇಶಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಬೆಳಗಾವಿ ಜಿಲ್ಲೆ ಹಾಗೂ ಯೋಜನಾ ಅಧಿಕಾರಿಗಳು ಯೋಗೀಶ ಅಧ್ಯಕ್ಷತೆಯಲ್ಲಿ ರಮೇಶ್ ಮರಕಟ್ಟಿ ಚಂದ್ರಪ್ಪ ಇಟಗಿ ಕೃಷಿ ಪತ್ತಿನ ಸಹಕಾರಿ ಸಂಘ ಚಂದ್ರಪ್ಪ ಇಟಗಿ ಅಧ್ಯಕ್ಷರು ದೀಪ ಬೆಳಗಿಸುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ನಂತರ ಧಾರ್ಮಿಕ ಸಭೆಯಲ್ಲಿ ಶಿವಪುತ್ರ ಮಹಾ ಸ್ವಾಮೀಜಿ ಆರೋಡ ಮಠ ಚಿಕ್ಕಮನವಳ್ಳಿ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಎಲ್ಲಾ ಹಳ್ಳಿಗಳಲ್ಲಿ ಅಭಿವೃದ್ಧಿ ಕೆಲಸಗಳಾಗಿವೆ ಒಂದು ಒಳ್ಳೆ ಕಾರ್ಯಕ್ರಮಗಳನ್ನು ಮಾಡುತ್ತಿದ್ದೀರಿ ಬ್ಯಾಂಕುಗಳಲ್ಲಿ ಸಾಲ ಕೇಳಲು ಹೋದರೆ ದಾಖಲಾತಿಗಳನ್ನು ತೆಗೆದುಕೊಂಡು ಬನ್ನಿ ಎಂದು ದಿನನಿತ್ಯ ಅಲೆದಾಡಿಸುತ್ತಾರೆ ನಾವು ಅಲೆದಾಡಿ ಅಲೆದಾಡಿ ನಮ್ಮ ಪಾದರಕ್ಷೆಗಳು ಸವಿದು ಹೋಗುತ್ತೇವೆ ಹೊರತು ನಮಗೆ ಸಾಲ ದೊರೆಯುವುದಿಲ್ಲ ಎಂದು ಸಂತಸ ವ್ಯಕ್ತಪಡಿಸಿ ನನಗೆ ಮುಂದಿನ ಕಾರ್ಯಕ್ರಮಕ್ಕೆ ಹೋಗಬೇಕು ಅನುಮತಿ ನೀಡಿ ಎಂದು ಸಭೆಯಿಂದ ನಿರ್ಗಮಿಸಿದರು ಕಾರ್ಯಕ್ರಮಕ್ಕೆ ಶ್ರಮ ಪಟ್ಟ ಶ್ರಮ ಜೀವಿಗಳು ಧರ್ಮಸ್ಥಳ ಗ್ರಾಮಾ ಅಭಿವೃದ್ಧಿ ಸಂಘದ ತಾಯಂದಿರು ಊರಿನ ಗುರುಹಿರಿಯರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು ಆ ಮಂಜುನಾಥ ಸ್ವಾಮಿ ಸೇವೆಗೆ ಪಾತ್ರರಾದರು.
ವರದಿ :ಶಿವಾನಂದ ಕಿಲ್ಲೇದಾರ ಪತ್ರಕರ್ತರು