_ಗುಡಿಕಟ್ಟಿ ರೈತರ ಸಂಕಷ್ಟಕ್ಕೆ ಯಾರು ಹೊಣೆ_?_ಶಂಕರ್ ಮಾಡಲಗಿ...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
_ _ಗುಡಿಕಟ್ಟಿ ರೈತರ ಸಂಕಷ್ಟಕ್ಕೆ ಯಾರು ಹೊಣೆ_?_ಶಂಕರ್ ಮಾಡಲಗಿ...
 ಬೈಲಹೊಂಗಲ ತಾಲೂಕಿನ ಗುಡಿಕಟ್ಟಿ ಗ್ರಾಮದಲ್ಲಿ ಶನಿವಾರ ರಾತ್ರೀ ದಿನಾಂಕ 15/11/2025 ರಂದು 09:00 PM ಗಂಟೆಯ ವೇಳೆಗೆ ರೈತರ ಸಭೆ ಕರೆದು ಹೋಲದಲ್ಲಿ ಬೋರುಗಳಿಗೆ ಕರೇಂಟ್ ಅದಿಕೃತ ಇದ್ದ ಬೋರುವೆಲ್ಲ ಗಳಿಗೆ ಮಾತ್ರ ಕರೆಂಟ ಕೊಡುವುದಾಗಿ ಸರ್ಕಾರದಿಂದ ಆದೇಶವಾಗಿತ್ತು ಸಂಬಂಧಪಟ್ಟ ಅಧಿಕಾರಿಗಳು ಸಿಬ್ಬಂದಿಗಳು 4 ದಿನಗಳ ಹಿಂದೆ ಗುಡಿಕಟ್ಟಿ ಗ್ರಾಮಕ್ಕೆ ಬಂದು 20 ಬೋರುಗಳಿಗಿದ್ದ ಕರೆಂಟ್ ಕಟ್ ಮಾಡಿ ರೈತರ ಸಂಕಷ್ಟಕ್ಕೆ ದಾರಿ ಮಾಡಿದ್ದೀರಿ 60,000 ದಿಂದ 70,000 ಬೋರುಗಳಿಗೆ ಲೈನ್ ಹಾಕಿದ್ದು ಕಂಬ ಹುಗಿದು ರೈತರು ಲೈನ್ ಗಳನ್ನು ಹಾಕಿಕೊಂಡಿರುತ್ತಾರೆ ಒಂದಿಷ್ಟು ಜನ ಇದ್ದಂತಹ ಅಧಿಕಾರಿಗಳು ಏಜೆಂಟರು ಕೂಡಿ 20000 15000 ಕಮಿಷನ್ ತೆಗೆದುಕೊಂಡಿರುತ್ತಾರೆ ಆದರೆ ಅವುಗಳಿಗೆ ಇನ್ನುವರೆಗೂ ಆರ್ ಆರ್ ನಂಬರ್ ಬಂದಿರುವುದಿಲ್ಲ ಮೊದಲು ಆರ್ ಆರ್ ನಂಬರ್ ಬರಲು ದುಡ್ಡು ತುಂಬದ ಕಾರಣಗಳಿಂದ ಕಂಬಗಳನ್ನು ಹುಗಿದಿರುವುದಿಲ್ಲ ಕನೆಕ್ಷನ್ ಕೂಡ ಮಾಡಿಲ್ಲ ಎಂದು ಆರೋಪಿಸಿ ಏಕೆಂದರೆ ಅದು ಅಲ್ಲದೆ ಬೆಳೆ ನಾಶವಾಗಿ ರೈತರು ಮೊದಲೇ ಕಂಗಲಾಗಿದ್ದಾರೆ ದನ ಕರುಗಳಿಗೆ ಮೇವು ಮಿಡಚಿ ಮತ್ತು ರೈತರು ಬದುಕಲಿಕ್ಕೆ ನೀರನ್ನು ಹಾಯಿಸಿಕೊಳ್ಳುತ್ತಿದ್ದಾರೆ ನಮಗಂತೂ ನೀರಾವರಿ ಇಲ್ಲ ಹಂತಹದರಲ್ಲಿ ಬೆಳೆ ಹಾನಿ ಪರಿಹಾರನೂ ಬಂದೇ ಇಲ್ಲ ಅದರಲ್ಲಿಯೂ ಫಲ ಕೊಡೋ ಭೂಮಿ ತಾಯಿಗೆ ನೀರು ಉಣಿಸಲು ಕರೆಂಟ್ ಹಾಕಿಕೊಂಡರೆ ಅಧಿಕೃತ KEB ಪರ್ಮಿಷನ್ ತೆಗೆದುಕೊಂಡು ಬನ್ನಿ . ಅನಅಧಿಕೃತಯಲ್ಲಿದೆ KEB ಗೆ ದುಡ್ಡು ತುಂಬಿಲ್ಲ ಎಂದು ಕರೆಂಟುಗಳನ್ನು ಕಟ್ಟು ಮಾಡುತ್ತಿದ್ದೀರಿ ನಿಮ್ಮ ಕಚೇರಿಗಳಿಗೆ ರೈತರು KEB ಪರ್ಮಿಷನ್ ಅಧಿಕೃತ ಮಾಡಿಕೊಳ್ಳಿ ಎಂದು ಹೊಲದ ರೈತರು KEB ಕಚೇರಿಗೆ ಬಂದರೆ ಮಾಡಿಕೊಳ್ಳುತ್ತಿಲ್ಲ ಹಿಂಗಾದರೆ ರೈತರು ಹೇಗೆ ವ್ಯವಸಾಯ ಮಾಡಬೇಕು ಇದು ಹೀಗೆ ಮುಂದುವರೆದರೆ ಬೈಲಹೊಂಗಲದಲ್ಲಿ ಬರುವಂತಹ ರೈತರು ಸೇರಿಕೊಂಡು ಬೈಲಹೊಂಗಲ ಬಂದ ಕರೆ ಕೊಡುತ್ತೇವೆ ಈಗಾಗಲೇ ವೀರರಾಣಿ ಮಲ್ಲಮ್ಮನ ಬೆಳವಡಿಯ ಸರ್ಕಲ್ ೫೦೦ ಕೆಇಬಿ ಕನೆಕ್ಷನ್ ಲೈನ್ ಗಳನ್ನು ಕಟ್ಟು ಮಾಡಿದ್ದೀರಿ ಮಂಗಳವಾರ ದಿನಾಂಕ 18/11/2025 ರಂದು ಎಲ್ಲರೂ ರೈತರು ಕೂಡಿಕೊಂಡು ಕೆಇಬಿ ಆಫೀಸಿಗೆ ಮುತ್ತಿಗೆ ಹಾಕುತ್ತೇವೆ ಮತ್ತು ಬೀಗ ಜಡೆಯುತ್ತೇವೆ ಸರಳ ಬಂದು ಮರ್ಯಾದೆಯಿಂದ ಯಾವ ತರಹ ಲೈನ್ ಕಟ್ಟು ಮಾಡಿದ್ದೀರಿ ಅದೇ ತರಹ ಲೈನ್ ಜೋಡಿಸಿಕೊಟ್ಟು ಹೋಗದಿದ್ದರೆ ಕೆಇಬಿ. LC ತೆಗೆದುಕೊಳ್ಳುತ್ತೇವೆ LC ತೆಗೆದುಕೊಳ್ಳದಿದ್ದರೆ ಯಾರು ಅಧಿಕಾರಿಗಳು ಇರುತ್ತೀರೋ ಅಧಿಕಾರಿಗಳ ಆಫೀಸುಗಳನ್ನ ಬೀಗ ಜಡೆಯುತ್ತೇವೆ ನಾವೇ ನಮ್ಮ ಬೋರುಗಳಿಗೆ ಕರೆಂಟ್ ಜೋಡಿಸಿಕೊಳ್ಳುತ್ತೇವೆ ಎಚ್ಚರದಿಂದಿರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು ಮುಂದಾಗೋ ಅನಾಹುತಗಳಿಗೆ ಸರ್ಕಾರವೇ ನೇರಹೊಣೆ ಎಂದು ಎಚ್ಚರಿಕೆ ಗಂಟೆ ಹೇಳಿ ಜೆಡಿಎಸ್ ಮುಖಂಡರು ಶಂಕರ್ ಮಾಡಲಗಿ ಅವರು ಆಕ್ರೋಶ ವ್ಯಕ್ತಪಡಿಸಿದರು ಈ ಸಭೆಯಲ್ಲಿ ಸಂಕಷ್ಟದಲ್ಲಿದ್ದ ಗುಡಿಕಟ್ಟಿ ರೈತರೆಲ್ಲರು ಪಾಲ್ಗೊಂಡಿದ್ದರು. 
 ವರದಿ : ಶಿವಾನಂದ ಕಿಲ್ಲೇದಾರ ಪತ್ರಕರ್ತರು

Post a Comment

0Comments

Post a Comment (0)