*ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ರಾಹುಲ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಹಾಗೂ ಎಎಪಿ ವರಿಷ್ಠ ಅರವಿಂದ್ ಕ್ರೇಜಿವಾಲ ಅವರ ಬೆಂಬಲದೊಂದಿಗೆ ದೆಹಲಿ ಜಂತರ್ ಮಂತರದಲ್ಲಿ ನಡೆದ ಕಾಕ್ರೋಚ್ ಜನತಾ ಪಾರ್ಟಿಯ ಹೋರಾಟದಿಂದ ಕೇಂದ್ರ ಶಿಕ್ಷಣ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನಅವರ ರಾಜೀನಾಮೆ ಆಗಿದೆ ನಿಮ್ಮ ಅಧಿಕಾರದ ರಾಜ್ಯದಲ್ಲಿ ಪ್ರಶ್ನೆ ಪತ್ರಿಕೆಗಳ ಲೀಕ್ ಆದ ಬಗ್ಗೆ ನಿಮ್ಮ ಸಚಿವರ ರಾಜಿನಾಮೆ ಏಕೆಪಡಿಯಲಿಲ್ಲ ಇನ್ನಾದರೂ ರಾಜಿನಾಮೆ ಪಡೆಯಬಹುದೇ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ್ ಮಾಡಲಾಗಿ ಎಎಪಿ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರಿಗೆ ಸವಾಲ್ ಹಾಕಿದ್ದಾರೆ*
*ಸೋಮವಾರ ಪತ್ರಿಕಾ* *ಪ್ರಕಟನೆಯಲ್ಲಿ ತಿಳಿಸಿದ ಅವರು, ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ರಾಷ್ಟ್ರಮಟ್ಟದಲ್ಲಿ ಸಾಕಷ್ಟು ಕೋಲಹಲ ಎಬ್ಬಿಸಿದ್ದು ಇದರ ಪರಿವೆ ಇಲ್ಲದ ಕಾಂಗ್ರೆಸ್ ನಾಯಕರು ಕಾಕ್ರೋಚ್ ಪಾರ್ಟಿಗೆ ಬೆಂಬಲ ವ್ಯಕ್ತಪಡಿಸುವ ಮೂಲಕ ತಮ್ಮ ಬೇಜವಾಬ್ದಾರಿತನವನ್ನು ಪ್ರದರ್ಶಿಸಿದ್ದಾರೆ ಇದರ ಲಾಭ ಪಡೆದ ಕಾಕ್ರೋಚ್ ಪಾರ್ಟಿ ಶಿಕ್ಷಣ ಸಚಿವ ಧರ್ಮೆಂದ್ರ ಪ್ರಧಾನ ಅವರ ರಾಜೀನಾಮೆ ಪಡೆದಿದೆ. ಕೇಂದ್ರ ಸರ್ಕಾರದ ಮುಂದೆ ಕಾಕ್ರೋಚ್ ಇಟ್ಟಿರುವ 3ಬೇಡಿಕೆಗಳನ್ನು ಕೇಂದ್ರ ಸರ್ಕಾರ ಈಡೇರಿಸಿದೆ 2025-26 ನೇ ಸಾಲಿನಲ್ಲಿ ರಾಜ್ಯದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹಿಂದಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು ಆಗಿನ ಕಾಂಗ್ರೆಸ್ ಸರ್ಕಾರದ ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ರಾಜೀನಾಮೆ ಪಡೆಯದ ಕಾಂಗ್ರೆಸ್ ನಾಯಕರಿಗೆ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯ ಪ್ರತಿಭಟನೆ ಮಾಡಲು ಏನು ನೈತಿಕತೆ ಇದೆ ಎಂದು ಪ್ರಶ್ನಿಸಿದ್ದಾರೆ. ಪಿಯುಸಿ ಗಣಿತ ಪ್ರಶ್ನೆ ಪತ್ರಿಕೆ* *ಸೋರಿಕೆಯಾದಾಗ ನಿಮ್ಮ ಶಿಕ್ಷಣ ಸಚಿವರ ರಾಜಿನಾಮೆ ಪಡೆಯಲಿಲ್ಲ ಕಾಂಗ್ರೆಸ್ ಹೈಕಮಾಂಡ್ ಗಾಡ ನಿದ್ರೆಯಲ್ಲಿ ಇತ್ತು ಈಗ ಎಚ್ಚರವಾಗಿದ್ದಾರೆ ಎಂದು ಲೇವಡಿ ಮಾಡಿದ್ದಾರೆ. ಇಂತಹ ಕಪಟ ನಾಟಕಗಳಿಂದ ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಯುವ ಸಮುದಾಯ ತಿರಸ್ಕರಿಸಿದೆ. ಯುವ ಸಮುದಾಯವನ್ನು ನೀವು ಎಷ್ಟೇ ಪ್ರಚೋದನೆ ಮಾಡಿದರು ಅವರು ಎನ್‌ಡಿಎ ಪರವಾಗಿ ಇರಲಿದ್ದಾರೆ ಯುವಕರ ಹಿತವನ್ನು ಕಾಪಾಡುವದೇ ಮೊದಲ ಆದ್ಯತೆ ಎಂದು ಪ್ರಧಾನ ಮಂತ್ರಿಗಳು ಈಗಾಗಲೇ ಭರವಸೆ ನೀಡಿದ್ದಾರೆ ದಿಲ್ಲಿಯಲ್ಲಿ ನಡೆದ ಹೋರಾಟದಲ್ಲಿ ಲೋಡ್ ಸಹಿತ ಕಲ್ಲುಗಳು ಹೇಗೆ ಬಂದವು ಅವುಗಳನ್ನು ಕಳಿಸಿರುವದೇ ಕಾಂಗ್ರೆಸ್ ಪಾರ್ಟಿ ನಾಯಕರು ಕಾಕ್ರೋಚ್ ಪಾರ್ಟಿಯ ಹೋರಾಟದಲ್ಲಿ ಭಾಗಿಯಾಗಿ ಬೆಂಬಲ ವ್ಯಕ್ತಪಡಿಸಿದ ಕಾಂಗ್ರೆಸ್ ನಾಯಕರು ಹಾಗೂ ಅವರಿಗೆ ಹಣಕಾಸಿನ ನೆರವು ವಿದೇಶದಿಂದ ಬಂದಿರುವುದು ಮುಂದಿನ ತನಿಖೆಯಲ್ಲಿ ಗೊತ್ತಾಗಲಿದೆ. ಎಎಪಿ ವರಿಷ್ಠ ಕ್ರೇಜಿವಾಲ ಪಂಜಾಬನಲ್ಲಿ 18 ರಂದು ಪತ್ರಿಕಾಗೋಷ್ಠಿ ನಡೆಸಿ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ನಮ್ಮ ಪಕ್ಷದ ಅಧಿಕಾರದಲ್ಲಿ ಆಗಿದ್ದರೆ ತಕ್ಷಣ ರಾಜಿನಾಮೆ* *ಪಡೆಯುತ್ತಿದ್ದೇನೆಂದು ಹೇಳಿರುವ ನಿಮ್ಮ ಹೇಳಿಕೆ ಪಂಜಾಬ್ ರಾಜ್ಯದಲ್ಲಿ ಮಾರನೆಯ ದಿನವೇ ಫಾರ್ಮಸಿ ರೆಕ್ರೂಟ್ಮೆಂಟ್ ಪರೀಕ್ಷೆಯಲ್ಲಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಯಿತು. ಅಲ್ಲಿನ ಶಿಕ್ಷಣ ಸಚಿವ ಹರ್ಬಿಜಿತ್ ಸಿಂಗ್ ಅವರ ರಾಜೀನಾಮೆ ಏಕೆ ಪಡಿಯಲಿಲ್ಲ ಯುಪಿಎ ಅಂಗ ಪಕ್ಷವಾಗಿರುವ ಎಎಪಿ ವಿರುದ್ಧ ಕಾಂಗ್ರೆಸ್ ಹಾಗೂ ಅದರ ಬೆಂಬಲಿತ ಕಾಕ್ರೋಚ್ ಪಾರ್ಟಿ ಯಾವಾಗ ಹೋರಾಟ ನಡೆಸಲಿದೆ ಎಂದು ಪ್ರಶ್ನಿಸಿದ್ದಾರೆ ಎಎಪಿ ವರಿಷ್ಠ ಕ್ರೇಜಿವಾಲರೇ ನಿಮ್ಮ ಪಂಜಾಬ್ ರಾಜ್ಯದ ಶಿಕ್ಷಣ ಸಚಿವರ ರಾಜೀನಾಮೆ ಪಡೆದು ನಿಮ್ಮ ನೈತಿಕತೆ ಪ್ರದರ್ಶಿಸಿ ಎಂದು ಜೆಡಿಎಸ್ ಪಕ್ಷದ ಎಎಪಿ ಹಾಗೂ ಕಾಂಗ್ರೆಸ್ ವರಿಷ್ಠ ರಿಗೆ ಆಗ್ರಹಿಸಸುತ್ತದೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ಶಂಕರ ಮಾಡಲಗಿ ಅವರು ಆಗ್ರಹಿಸಿದ್ದಾರೆ*