ಶ್ರೀಮತಿ ಶೋಭಾ ಅಡಿವಪ್ಪ ಮಾಳಣ್ಣವರ ನಿಧನ
ನೇಸರಗಿ ಹಿರಿಯರು,ನೇಸರಗಿ ಡಿಸಿಸಿ ಬ್ಯಾಂಕ ನಿವೃತ್ತ ನೀರಿಕ್ಷಕರು. ಮುಖಂಡರಾದ ಅಡಿವಪ್ಪ ಮಾಳಣ್ಣವರ ಇವರ ಧರ್ಮಪತ್ನಿಯಾದ ಶ್ರೀಮತಿ ಶೋಭಾ ಅಡಿವಪ್ಪ ಮಾಳಣ್ಣವರ (57) ಇವರು ಶನಿವಾರದಂದು ನಿಧನರಾದರು. ಮೃತರು ಪತಿ.ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.
ಶೋಕ : ಮೃತರ ನಿಧನಕ್ಕೆ ಗಾಳೇಶ್ವರ ಮಠದ ಶ್ರೀ ಚಿದಾನಂದ ಮಹಾಸ್ವಾಮಿಗಳು, ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ, ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಸೇರಿದಂತೆ ಬೈಲಹೊಂಗಲ, ಕಿತ್ತೂರು ತಾಲೂಕಾ ಮುಖಂಡರು, ಗ್ರಾಮಸ್ಥರು ಶೋಕ ವ್ಯಕ್ತಪಡಿಸಿದ್ದಾರೆ.