ಬೆಳಗಾವಿಯಲ್ಲಿ 3 ದಿನಗಳ RSS ಸಭೆ: ದೇಶವ್ಯಾಪಿ ಶಾಖಾ ವಿಸ್ತರಣೆಗೆ ಕಾರ್ಯಸೂಚಿ...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಬೆಳಗಾವಿಯಲ್ಲಿ 3 ದಿನಗಳ RSS ಸಭೆ: ದೇಶವ್ಯಾಪಿ ಶಾಖಾ ವಿಸ್ತರಣೆಗೆ ಕಾರ್ಯಸೂಚಿ
ತಳಮಟ್ಟದಲ್ಲಿ ಸಂಘಟನೆಯನ್ನು ಇನ್ನಷ್ಟು ಬಲಪಡಿಸುವ ಕುರಿತು ಈ ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆಯಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘ (RSS)ದ ವಾರ್ಷಿಕ ಅಖಿಲ ಭಾರತ ಪ್ರಾಂತ ಪ್ರಚಾರಕರ ಸಭೆ ನಿನ್ನೆ ಶುಕ್ರವಾರ ಬೆಳಗಾವಿಯಲ್ಲಿ ಆರಂಭಗೊಂಡಿದ್ದು, ದೇಶಾದ್ಯಂತ ಶಾಖೆಗಳ ವಿಸ್ತರಣೆ, ಶತಮಾನೋತ್ಸವ ಕಾರ್ಯಕ್ರಮಗಳ ಪರಿಶೀಲನೆ ಹಾಗೂ ಮುಂದಿನ ಸಾಲಿನ ಸಂಘಟನಾ ಆದ್ಯತೆಗಳನ್ನು ಅಂತಿಮಗೊಳಿಸುವುದು ಪ್ರಮುಖ ಅಜೆಂಡಾವಾಗಿದೆ.

ಉನ್ನತ ಮಟ್ಟದ ಈ ಸಭೆಯಲ್ಲಿ ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಎಲ್ಲಾ ಸಹ-ಸರಕಾರ್ಯವಾಹರು, ಅಖಿಲ ಭಾರತ ವಿಭಾಗಗಳ ಮುಖ್ಯಸ್ಥರು, ಕಾರ್ಯಕಾರಿ ಸಮಿತಿ ಸದಸ್ಯರು, ಕ್ಷೇತ್ರ ಪ್ರಚಾರಕರು, ಸಹ-ಕ್ಷೇತ್ರ ಪ್ರಚಾರಕರು, ದೇಶದ 46 ಪ್ರಾಂತಗಳ ಪ್ರಾಂತ ಪ್ರಚಾರಕರು ಮತ್ತು ಸಹ-ಪ್ರಚಾರಕರು ಹಾಗೂ ಸಂಘ ಪ್ರೇರಿತ ವಿವಿಧ ಸಂಘಟನೆಗಳ ಸಂಘಟನಾ ಕಾರ್ಯದರ್ಶಿಗಳು ಭಾಗವಹಿಸಿದ್ದಾರೆ.

ತಳಮಟ್ಟದಲ್ಲಿ ಸಂಘಟನೆಯನ್ನು ಇನ್ನಷ್ಟು ಬಲಪಡಿಸುವ ಕುರಿತು ಈ ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆಯಿದೆ.

ಕಳೆದ ಮಾರ್ಚ್ ನಂತರ ದೇಶಾದ್ಯಂತ ನಡೆದ ತರಬೇತಿ ಶಿಬಿರಗಳ ವರದಿಗಳನ್ನು ಸಮಗ್ರವಾಗಿ ಪರಿಶೀಲಿಸುವುದರ ಜೊತೆಗೆ, ಶಾಖಾ ಮಟ್ಟದಲ್ಲಿ ರೂಪಿಸಿರುವ ಕಾರ್ಯಯೋಜನೆಗಳ ಅನುಷ್ಠಾನದ ಪ್ರಗತಿಯ ಮೌಲ್ಯಮಾಪನವೂ ನಡೆಯಲಿದೆ.

Post a Comment

0Comments

Post a Comment (0)