ಮಗ ಹುಟ್ಟಿದ ಪಾರ್ಟಿ ಕೇಳಿದಕ್ಕೆ ತನ್ನ ಗೆಳೆಯನಿಗೆ ಕಲ್ಲಿನಿಂದ ಬಡಿದು ಕೊಲೆ ಮಾಡಿ ಪರಾರಿ ಇದ್ದ ಆರೋಪಿ ಬಂಧನ

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0

ದಿನಾಂಕ: 26.06.2026 ರಂದು ಶ್ರೀ ಯಮನಪ್ಪ ಹನಮಂತಪ್ಪ ಇತಾಪಿ 66 ವರ್ಷ ಸಾ; ವಣ್ಣೂರ ತಾ; ಬೈಲಹೊಂಗಲ ರವರು ಠಾಣೆಗೆ ಹಾಜರಾಗಿ ತನ್ನ ಮಗ ಹನಮಂತಪ್ಪ ಯಮನಪ್ಪ ಇತಾಪಿ ಈತನು ಆರೋಪಿತನ ಹತ್ತಿರ ಮಗ ಹುಟ್ಟಿದ ಪಾರ್ಟಿ ಕೊಟ್ಟಿಲ್ಲಾ ಸರಾಯಿ ಕುಡಿಸು ಬಾ ಮತ್ತು ಸ್ವಲ್ಪ ಮೋಟಾರ ಸೈಕಲ್ ಕೊಡು ಅಂತಾ ಕೇಳಿದಾಗ ಆರೋಪಿತನು ಪಿರ್ಯಾದಿಯ ಮಗ ಹನಮಂತಪ್ಪ ಈತನ ಮೇಲೆ ಹಳೇ ಗಲಾಟೆಯ ಸಿಟ್ಟು ಹಿಡಿದು ಅವನಿಗೆ ಕೊಲೆ ಮಾಡುವ ಉದ್ದೇಶದಿಂದ ಬೋಸಡಿ ಮಗನ ನಿಂದ ಬಾಳ ಆಗೇತಿ ಇವತ್ತ ನಿನ್ನ ಬಿಡುವುದಿಲ್ಲಾ ಅಂತಾ ಅಂದವನೆ ಕಲ್ಲಿನಿಂದ ಪಿತ್ಯಾದಿಯ ಮಗ ಹನಮಂತಪ್ಪ ಈತನಿಗೆ ತೆಲೆಗೆ ಬಡಿದು ಭಾರಿಗಾಯಪಡಿಸಿ ಸ್ಥಳದಲ್ಲಿ ಮರಣಪಡಿಸಿದ್ದು ಇರುತ್ತದೆ. ಅಂತಾ ಇದ್ದ ಪಿರ್ಯಾದಿ ನೀಡಿದ್ದು ಅದನ್ನು ಸ್ವೀಕರಿಸಿಕೊಂಡು ನೇಸರಗಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 80/2026 ಕಲಂ: 352, 103(1) ಬಿ.ಎನ್.ಎಸ್. ಕಾಯ್ದೆ -2023 ನೇದ್ದಕ್ಕೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಸದರಿ ಪ್ರಕರಣದಲ್ಲಿ ಮೃತನಿಗೆ ಕೊಲೆ ಮಾಡಿ ಪರಾರಿ ಇದ್ದ ಆರೋಪಿತನ ಪತ್ತೆ ಬಗ್ಗೆ ಮಾನ್ಯ ಶ್ರೀ. ಕೆ. ರಾಮರಾಜನ್ ಐಪಿಎಸ್ ಪೊಲೀಸ ಅಧೀಕ್ಷಕರು ಬೆಳಗಾವಿ ಜಿಲ್ಲೆ, ಹಾಗೂ ಮಾನ್ಯ ಶ್ರೀ ರಾಮಗೊಂಡ ಬಸರಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಬೆಳಗಾವಿ ಹಾಗೂ ಮಾನ್ಯ ಡಾ: ವೀರಯ್ಯ ಹಿರೇಮಠ (ಕೆ.ಎಸ್.ಪಿ.ಎಸ್.) ಡಿಎಸ್‌ಪಿ ಬೈಲಹೊಂಗಲ ರವರ ಮಾರ್ಗದರ್ಶನದಲ್ಲಿ ಗಜಾನನ ನಾಯ್ಕ ಪಿಐ ನೇಸರಗಿರವರ ನೇತೃತ್ವದಲ್ಲಿ ತಂಡಗಳನ್ನು ರಚಿಸಿದ್ದು. ಕೊಲೆ ಮಾಡಿ ಪರಾರಿ ಇದ್ದ ಈ ಪ್ರಕರಣದಲ್ಲಿಯ ಆರೋಪಿತನಾದ

01] ವಿಶ್ವನಾಥ ಸಿದ್ದಯ್ಯ ಪೂಜೇರಿ 29 ವರ್ಷ

ಸಾ: ವಣ್ಣೂರ ತಾ: ಬೈಲಹೊಂಗಲ

ಇವರಿಗೆ ಈ ಪ್ರಕರಣದಲ್ಲಿ ದಿನಾಂಕ: 28.06.2026 ರಂದು ದಸ್ತಗೀರ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರಪಡಿಸಿದ್ದು, ಅವರು ಸದ್ಯ ನ್ಯಾಯಾಂಗ ಬಂಧನದಲ್ಲಿ ಇರುತ್ತಾರೆ.

ಸದರಿ ಪ್ರಕರಣವನ್ನು 48 ಗಂಟೆಯೊಳಗಾಗಿ ಪತ್ತೆ ಮಾಡಿದ ಶ್ರೀ ಗಜಾನನ ನಾಯ್ಕ ಪಿಐ ನೇಸರಗಿ ಪೊಲೀಸ್ ಠಾಣೆರವರ ನೇತೃತ್ವದಲ್ಲಿ ಸಿಬ್ಬಂದಿ ಜನರಾದ, ಐ.ಎಚ್. ಪಕಾಲಿ ಎಎಸ್‌ಐ ಪಿ.ಎನ್. ವಾಳಕಿ ಎಎಸ್‌ಐ ಹಾಗೂ ನೇಸರಗಿ ಠಾಣೆಯ ಎಲ್ಲ ಸಿಬ್ಬಂದಿ ಜನರು ಮತ್ತು ಬೆಳಗಾವಿ ಟೇಕ್ನಿಕಲ್ ವಿಭಾಗದ ಸಿಬ್ಬಂದಿಯವರು ಆರೋಪಿತನ ಪತ್ತೆ ಕಾರಾಚರಣೆಯಲ್ಲಿ ಶ್ರಮಿಸಿರುತ್ತಾರೆ. ಈ ಬಗ್ಗೆ ಮಾನ್ಯ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಗಳು ಶ್ಲಾಘನೆ ವ್ಯಕ್ತ ಪಡಿಸಿರುತ್ತಾರೆ.

Post a Comment

0Comments

Post a Comment (0)