ಬೈಲಹೊಂಗಲ ತಾಲೂಕಿನ ಮಲ್ಲಮ್ಮನ ಬೆಳವಡಿಯಲ್ಲಿ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಮಹಾರಥೋತ್ಸವ ಗುರುವಾರ ದಿನಾಂಕ 14.05.2026ರಂದು ಸಾಯಂಕಾಲ 05:00 ಘಂಟೆಗೆ ಶ್ರೀ ಷಟಸ್ಥಳ ಬ್ರಹ್ಮ ಶಿವ ಸಿದ್ದರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಅಮೃತ ಹಸ್ತದಿಂದ ಮಹಾರಥೋತ್ಸವ ಅದ್ದೂರಿಯಾಗಿ ಜರುಗಿತು ಈ ಮಹಾ ರಥೋತ್ಸವಕ್ಕೆ ಸುತ್ತ ಮುತ್ತಲಿನ ಭಕ್ತವೃಂದ ಈ ಜಾತ್ರಾ ಮಹೋತ್ಸವಕ್ಕೆ ಹಗಲಿರುಳು ಸೇವೆ ಸಲ್ಲಿಸಿದ ಸೇವಾ ಸಮಿತಿಯ ಸದಸ್ಯರುಗಳು ಊರಿನ ಯುವಕರು ಗುರು ಹಿರಿಯರು ವಿವಿಧ ಮಠಾಧೀಶರ ಮಹಾಸ್ವಾಮಿಗಳು ಪೂಜಾ ವಿಧಿ ವಿಧಾನಗಳಿಂದ ಮಹಾ ರಥೋತ್ಸವ ಸಾಯಂಕಾಲ 5:00 ಘಂಟೆಗೆ ಅದ್ದೂರಿಯಾಗಿ ಚಾಲನೆ ನೀಡಿದರು ಈ ಮಹಾರಥೋತ್ಸವವು ವೀರಭದ್ರೇಶ್ವರ ದೇವಸ್ಥಾನ ದಿಂದ ಈಶ್ವರ ದೇವಸ್ಥಾನದವರೆಗೆ ಹರ ಹರ ಮಹಾದೇವ ಎಂದು ತೇರು ಎಳೆದು ಈಶ್ವರ ದೇವಸ್ಥಾನದ ಎದುರುಗಡೆ ನಿಲ್ಲಿಸಿದರು ನಂತರ ಸೋಮವಾರ ದಿನಾಂಕ 18 5 2026 ರಂದು ಈಶ್ವರ ದೇವಸ್ಥಾನ ದಿಂದ ಮರಳಿ ವೀರಭದ್ರೇಶ್ವರ ದೇವಸ್ಥಾನದವರೆಗೆ ಮಹಾರಥೋತ್ಸವ ಮರಳಿ ತರುವದರ ಮುಖಾಂತರ ಮಹಾರಥೋತ್ಸವ ಸಂಪನ್ನಗೊಳ್ಳಲಿದೆ .
**ಮಲ್ಲಮನ ಬೆಳವಡಿಯ ಆರಾಧ್ಯದೈವ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಮಹಾ ರಥೋತ್ಸವ.
By -
May 16, 2026
0