ಹೇಮರೆಡ್ಡಿ ಮಲ್ಲಮ್ಮ ತತ್ವಾದರ್ಶ ಅನುಸರಿಸಿ:-ಮಹಾದೇವ ಮಹಾಸ್ವಾಮಿಗಳು

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಹೇಮರೆಡ್ಡಿ ಮಲ್ಲಮ್ಮ ತತ್ವಾದರ್ಶ ಅನುಸರಿಸಿ:-ಮಹಾದೇವ ಮಹಾಸ್ವಾಮಿಗಳು

ಶಿರೂರು ಗ್ರಾಮದಲ್ಲಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಮತ್ತು ವೃತ್ತಾ ಉದ್ಘಾಟನೆ

ಕುಕನೂರು: ಮಹಾತಾಯಿ ಮಲ್ಲಮ್ಮನ ಜೀವನದ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಅಭಿವೃದ್ಧಿಗೆ ನಾವೆಲ್ಲರೂ ಶ್ರಮಿಸೋಣ ಮತ್ತು ನೂತನವಾಗಿ ನಿರ್ಮಾಣ ಮಾಡಲಿರುವ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನ ಮತ್ತು ಸಮುದಾಯ ಭವನ ನಮ್ಮ ಶ್ರೀಮಠ ಎಂದಿಗೂ ಸಹಾಯ ಸಹಕಾರ ನೀಡುತ್ತದೆ ಎಂದು ಮಹದೇವ ಮಹಾಸ್ವಾಮಿಗಳು ಹೇಳಿದರು.


ಕುಕುನೂರು ತಾಲೂಕಿನ ಶಿರೂರು ಗ್ರಾಮದಲ್ಲಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಮತ್ತು ವೃತ್ತ ಉದ್ಘಾಟನೆ ನೆರವೇರಿಸಿದ ಕುಕನೂರು ಪಟ್ಟಣದ ಶ್ರೀ ಅನ್ನದಾನೇಶ್ವರ ಶಾಖಾಮಠದ ಮಹಾದೇವ ಮಹಾಸ್ವಾಮಿಗಳು ಮಾತನಾಡಿ, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಜೀವನದ ಮೌಲ್ಯಗಳು ಸ್ತ್ರೀಕುಲಕ್ಕೆ ಅಮೂಲ್ಯ ಕಾಣಿಕೆಯಾಗಿವೆ. ಸಮಾಜದ ಪ್ರತಿಯೊಬ್ಬರೂ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮಳ ಆದರ್ಶ ಅರಿತು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.


ಶ್ರೀಶೈಲ ಮಲ್ಲಿಕಾರ್ಜುನನ ಮೇಲೆ ಅಪಾರ ನಂಬಿಕೆ ಹೊಂದಿ, ಭಾವನಾತ್ಮಕ ಜೀವಿಯಾಗಿ, ಮಾನಸಿಕ ಶಿವಲಿಂಗ ದೀಕ್ಷೆ ತೊಟ್ಟು ಸಮಾಜ, ನಾಡು, ನುಡಿ ಹಾಗೂ ಮನುಕುಲದ ಉದ್ದಾರಕ್ಕೆ ಅಪಾರ ಕೊಡುಗೆ ನೀಡಿದ, ಸ್ರೀ ಕುಲದ ಗೌರವ ಹೆಚ್ಚಿಸಿದ, ಅರ್ಥಪೂರ್ಣ ಬದುಕು ಸಾಗಿಸಿದ ಮಲ್ಲಮ್ಮನ ವಿಚಾರ ದಾರೆಗಳು ಮನೆ–ಮನಕ್ಕೆ ತಲುಪುವಂತಾಗಬೇಕು ಎಂದು ರೆಡ್ಡಿ ಸಮಾಜದ ತಾಲೂಕ ಅಧ್ಯಕ್ಷರಾದ ಸಂಗಪ್ಪ ಹೊಕ್ಕಳಾದ ಸಲಹೆ ನೀಡಿದರು.

ಸಮಾಜ ಸೇವಕರಾದ ಶಿವಣ್ಣ ರಾಯರೆಡ್ಡಿ ಮಾತನಾಡಿ ಉತ್ತಮ ಸಮಾಜದ ನಿರ್ಮಾಣಕ್ಕೆ ನಾವೆಲ್ಲ ಸಿದ್ಧರಾಗಬೇಕಾಗಿದ್ದು, ಅದಕ್ಕಾಗಿಯೇ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ ಅವರ ಆಚಾರ, ವಿಚಾರ ಮತ್ತು ತತ್ವಗಳನ್ನು ಅಳವಡಿಸಿಕೊಂಡು ಮುಂದಿನ ಪೀಳಿಗೆಗೆ ಆದರ್ಶವಾಗಬೇಕು ಎಂದು ಹೇಳಿದರು.


ಡಾ. ದಾನರೆಡ್ಡಿ ಮಾತನಾಡಿದ ಅವರು ಇಂದಿನ ಸಮಾಜದಲ್ಲಿ ಕುಟುಂಬಗಳಲ್ಲಿ ಹೊಂದಾಣಿಕೆ ಇಲ್ಲದೆ ವೃದ್ಧಾಶ್ರಮಗಳು, ಅನಾಥಾಶ್ರಮಗಳು ಹೆಚ್ಚಾಗಿವೆ. ಹೇಮರೆಡ್ಡಿ ಮಲ್ಲಮ್ಮಸಂಪದ್ಭರಿತವಾದ ಸಮಾಜವನ್ನು ಕಟ್ಟಿದವರು. ಇಂದಿನ ಯುವಜನರು ಹೇಮರೆಡ್ಡಿ ಮಲ್ಲಮ್ಮ ಮತ್ತು ಮಹಾಯೋಗಿ ವೇಮನರ ಜೀವನ ಆದರ್ಶಗಳನ್ನು ತಿಳಿದುಕೊಳ್ಳಬೇಕು ಎಂದರು. ಕರ್ನಾಟಕದಲ್ಲಿ ಮನೆ ಮಾತಾಗಿರುವ ಶರಣೆಯರಾದ ಅಕ್ಕ ಮಾಹಾದೇವಿ ಹಾಗೂ ಹೇಮರೆಡ್ಡಿ ಮಲ್ಲಮ್ಮ ಮಹಾಸಾಧಿಯರಾಗಿದ್ದರು. ಸಮಾಜದಲ್ಲಿ ಬಡತನ, ಕೆಟ್ಟ ಆಲೋಚನೆಗಳನ್ನು ದೂರವಾಗಿಸಿ ದಾನ ಧರ್ಮಗಳನ್ನು ಅಳವಡಿಸಿಕೊಂಡವರು ಇಂದಿನ ಹೆಣ್ಣು ಮಕ್ಕಳು ಹೇಮರೆಡ್ಡಿ ಮಲ್ಲಮ್ಮ ಅವರ ಆದರ್ಶಗಳನ್ನು ಅರಿಯಬೇಕಾಗಿದೆ ಹಾಗೂ ಸಂಸ್ಕಾರವನ್ನು ರೂಢಿಸಿಕೊಳ್ಳಬೇಕು ಈಗ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನ ನಿರ್ಮಿಸುತ್ತಿರುವುದು ತುಂಬಾ ಸಂತೋಷದ ವಿಷಯ ಹೇಮರೆಡ್ಡಿ ಮಲ್ಲಮ್ಮ ಭವನ ನಿರ್ಮಾಣಕ್ಕೆ ಶಾಸಕರೊಂದಿಗೆ ಮಾತನಾಡಿ ನಿರ್ಮಾಣ ಮಾಡಲು ಸಹಾಯ ಸಹಕಾರ ಕೊಡಿಸುತ್ತೇನೆ ಎಂದರು.
ಬೆಳಗ್ಗೆ 8 ಗಂಟೆಗೆ ಹೇಮರೆಡ್ಡಿ ಮಲ್ಲಮ್ಮ ಭಾವಚಿತ್ರ ಮತ್ತು ಕುಂಬಾರನಿಗೆ ನೆರವೇರಿಸಲಾಯಿತು. 

ನಂತರ ಪ್ರಸಾದ ವಿತರಣೆ ಕಾರ್ಯಕ್ರಮ ನೆರವೇರಿಸಲಾಯಿತು.


ಈ ಸಂದರ್ಭದಲ್ಲಿ
ಹೇಮರೆಡ್ಡಿ ರೆಡ್ಡೇರ ಮುಧೋಳ, ರವಿ ಗೂರೆಡ್ಡಿ, ಶಿವಣ್ಣ ದಾನರೆಡ್ಡಿ, ಭೀಮರೆಡ್ಡಿ ಶೆಡ್ಲಗೇರಿ, ಶಂಕರಗೌಡ ಮುತ್ತಾಳ, ಮಲ್ಲ ರೆಡ್ಡಿ ರಾಮರೆಡ್ಡಿ, ವೀರಪ್ಪಣ್ಣ ಮಾಳಗೌಡ್ರು, ವೀರನಗೌಡ ಪೊಲೀಸ್ ಪಾಟೀಲ್, ಸಿದ್ದನಗೌಡ ಕದ್ರಳ್ಳಿ, ಅಶೋಕ ಮಾದೇನೂರು, ಶಿರೂರು ಗ್ರಾಮದ ಗುರು ಹಿರಿಯರು ಶ್ರೀ ಹೇಮರೆಡ್ಡಿ ಮಲ್ಲಮ್ಮ ತಾಯಿಯ ಸೇವಾ ಸಮಿತಿಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಹಾಗೂ ಮಹಿಳೆಯರು ಇತರರು ಇದ್ದರು.


ವರದಿ ಚನ್ನಯ್ಯ ಹಿರೇಮಠ ಕುಕನೂರು

Post a Comment

0Comments

Post a Comment (0)