*ಮೇ 9 ರಂದು ಚಿತ್ರದುರ್ಗದಲ್ಲಿ 50 ವರ್ಷಗಳ ಸಕ್ರಿಯ ರಾಜಕಾರಣ ಪೂರ್ಣ ಬಿಎಸ್‌ವೈ ಅಭಿನಂದನೆ ಪಕ್ಷಾತೀತವಾಗಿ ಪಾಲ್ಗೊಳ್ಳಲು ನವೀನ ಕುಮಾರ್ ಕರೆ*
*50 ವರ್ಷಗಳ ಸಕ್ರಿಯ ರಾಜಕಾರಣ ಪೂರ್ಣ ; ಬಿಎಸ್‌ವೈ ಅಭಿನಂದನೆಗೆ ಚಿತ್ರದುರ್ಗದಲ್ಲಿ ಸಿದ್ಧತೆ*
*ಕುಕನೂರು* :-
ಹಿರಿಯ ನಾಯಕರು, ಮಾಜಿ ಮುಖ್ಯಮಂತ್ರಿ, ರೈತಬಂಧು ಬಿ.ಎಸ್ ಎಸ್.ಯಡಿಯೂರಪ್ಪ ಅವರ 50 ವರ್ಷಗಳ ರಾಜಕೀಯ ಜೀವನವನ್ನು ಗೌರವಿಸುವ ಸಲುವಾಗಿ ಮೇ 9 ರಂದು ಚಿತ್ರದುರ್ಗದಲ್ಲಿ ಆಯೋಜಿಸಲಾಗಿರುವ "ಅಭಿಮಾನೋತ್ಸವ" ಕಾರ್ಯಕ್ರಮದ ಅಂಗವಾಗಿ ಇಂದು ಯಲಬುರ್ಗಾ ವಿಧಾನ ಸಭಾ ಕ್ಷೆತ್ರದ ಇಟಗಿ ಗ್ರಾಮದ ಗೃಹ ಕಛೇರಿಯಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ನವೀನಕುಮಾರ ಈಶಣ್ಣ ಗುಳಗಣ್ಣವರ ರವರು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ
ರೈತಪರ ಹೋರಾಟಗಾರ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಸುದೀರ್ಘ 50 ವರ್ಷಗಳ ಸಕ್ರಿಯ ರಾಜಕಾರಣ ಪೂರ್ಣಗೊಳಿಸಿದ್ದಾರೆ. ಅವರನ್ನು ಅದ್ಧೂರಿಯಾಗಿ ಸನ್ಮಾನಿಸಲು ಮೇ 9 ರಂದು ಸಮಾರಂಭ ಆಯೋಜಿಸಲು ಸಿದ್ಧತೆ ಶುರುವಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಿಂದ 10 ಲಕ್ಷಕ್ಕೂ ಹೆಚ್ಚು ಮಂದಿ ಸೇರಿಸುವ ನಿರೀಕ್ಷೆ ಇದೆ
ಸುಮಾರು 200 ಎಕರೆಯಲ್ಲಿ ಬೃಹತ್ ವೇದಿಕೆ ನಿರ್ಮಿಸಲು ಆಪ್ತ ಬಳಗ ಚಿಂತಿಸಿದೆ. ನಾಡಿನ ಎಲ್ಲ ಪ್ರಮುಖ ಮಠಾಪತಿಗಳ ಸಮ್ಮುಖದಲ್ಲಿ ಸನ್ಮಾನಿಸುವ ಸಮಾರಂಭದ ಸಿದ್ಧತೆಗೆ ಚಾಲನೆ ದೊರಕಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಸೇರಿದಂತೆ ಅನೇಕ ರಾಷ್ಟ್ರೀಯ ನಾಯಕರನ್ನು ಆಹ್ವಾನಿಸಲು ಸ್ವಾಗತ ಸಮಿತಿ ಚಿಂತಿಸಿದೆ.ನಾಡಿನ ಎಲ್ಲ ಜಿಲ್ಲೆಗಳಿಂದ ಸಾರ್ವಜನಿಕರು, ಅಭಿಮಾನಿಗಳು, ಬೆಂಬಲಿಗರು ಪಾಲ್ಗೊಳ್ಳಲು ಅನುಕೂಲವಾಗುವಂತೆ ಚಿತ್ರದುರ್ಗದಲ್ಲಿ ಸಮಾರಂಭ ನಡೆಸಲಾಗುತ್ತಿದೆ,’’ ಎಂದು ಹೇಳಿದರು.
ಈ ಸಭೆಯಲ್ಲಿ ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಸಂಸದರಾದ ಗೋವಿಂದ ಕಾರಜೋಳ, ಮಾಜಿ ಸಚಿವರಾದ ಬಿ. ಶ್ರೀರಾಮುಲು, ಗಾಲಿ ಜನಾರ್ದನ್ ರೆಡ್ಡಿ, ಸೋಮಶೇಖರ್ ರೆಡ್ಡಿ, ಮಾಜಿ ಸಚಿವರಾದ ಹಾಲಪ್ಪ ಆಚಾರ್, ಆನಂದ್ ಸಿಂಗ್, ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕರಾದ ಎನ್. ರವಿಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಪಿ. ರಾಜೀವ್, ವಿಧಾನ ಪರಿಷತ್ ಸದಸ್ಯರಾದ ಎಂ. ಸತೀಶ್ ಹಾಗೂ ಹೇಮಲತಾ ನಾಯಕ್, ಶಾಸಕರಾದ ಕೃಷ್ಣ ನಾಯಕ್, ಮಾಜಿ ಶಾಸಕರಾದ ಅರುಣ್ ಶಹಾಪುರ್ ಮತ್ತು ಬಸವರಾಜ್ ದಡೇಸುಗೂರು, ರಾಜ್ಯ ಕಾರ್ಯದರ್ಶಿಗಳಾದ ದಿವಾಕರ್ ಹಾಗೂ ಶರಣು ತಳ್ಳಿಕೇರಿ ಸೇರಿದಂತೆ ಬಿಜೆಪಿ ಜಿಲ್ಲಾ ಹಾಗು ತಾಲ್ಲೂಕಾ ಅಧ್ಯಕ್ಷರು ಹಲವಾರು ಪದಾಧಿಕಾರಿಗಳು ಮತ್ತು ಪ್ರಮುಖರು ಭಾಗವಹಿಸಲಿದ್ದಾರೆ. ಪಕ್ಷಾತೀತವಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮುಖಾಂತರ ಬಿಎಸ್ ವೈ ಅವರ ಯೋಜನೆಗಳ ಜನಮುಕಿ ಕಾರ್ಯಗಳಾಗಿದ್ದು ಕಾರ್ಯಕ್ರಮಕ್ಕೆ ಎಲ್ಲರೂ ಪಾಲ್ಗೊಳ್ಳುವವರೊಂದಿಗೆ ಕಾರ್ಯಕ್ರಮ ಯಶಸ್ವಿಗೊಳಿಸಿ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ
ಜಿಲ್ಲಾ ವಕ್ತರರಾದ ಜೆ. ಬಿ. ಸೋಮಶೇಖರಗೌಡ, ಎಸ್ ಟಿ ಮೋರ್ಚಾದ ಜಿಲ್ಲಾಧ್ಯಕ್ಷರಾದ ವಿಜಯ ತಾಳಕೇರಿ, ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷರಾದ ವಿರುಪಾಕ್ಷಪ್ಪ ಹುರಳಿ ಇದ್ದರು.
ವರದಿ ಚನ್ನಯ್ಯ ಹಿರೇಮಠ ಕುಕನೂರು