*ಕುಕನೂರು*
ಕಾಯಕವೇ ಕೈಲಾಸ' ಎಂಬ ಬಸವಣ್ಣನವರ ಮಾತಿನಂತೆ ದುಡಿಮೆಯನ್ನೇ ಬದುಕನ್ನಾಗಿಸಿಕೊಂಡ ಅಸಂಖ್ಯಾತ ಜೀವಗಳು ನಮ್ಮ ನಡುವೆ ಇವೆ. ಪ್ರತಿಯೊಬ್ಬ ಕಾರ್ಮಿಕರ ಬೆವರಿನ ಹನಿಗಳಿಗೆ ತಕ್ಕ ಪ್ರತಿಫಲ ದೊರಕುವಂತಾಗಬೇಕು ಎನ್ನುವುದು ನಮ್ಮ ಆಶಯ ಎಂದು ಶ್ರೀ ರುದ್ರಮುನೇಶ್ವರ ಹಮಾಲರ ಸಂಘದ ಅಧ್ಯಕ್ಷರಾದ ನಿಂಗಪ್ಪ ಗೊರ್ಲೆಕೊಪ್ಪ ಹೇಳಿದರು.
ಕುಕನೂರು ಪಟ್ಟಣದಲ್ಲಿ ಶ್ರೀ ರುದ್ರಮುನೇಶ್ವರ ಹಮಾಲರ ಸಂಘದ ವತಿಯಿಂದ ಮೇ 1 ಶುಕ್ರವಾರದಂದು ಅಂತರರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯ ನೆರವೇರಿಸಲಾಯಿತು. ಪಟ್ಟಣದ ಎಪಿಎಂಸಿ ಆವರಣದಿಂದ ಕಾರ್ಮಿಕರ ಘೋಷಣೆಗಳನ್ನು ಕೂಗುತ್ತಾ ರಾಘವಾನಂದ ಮಠ ದಿಂದ ಅಂಬೇಡ್ಕರ್ ವೃತ್ತ ಮತ್ತು ವೀರಭದ್ರಪ್ಪ ವೃತ್ತದ ಮುಖಾಂತರ ಕಲ್ಲೇಶ್ವರ ನಗರದಲ್ಲಿರುವ ಹಮಾಲರ ಸಂಘದ ಕಾರ್ಯಾಲಯಕ್ಕೆ ಆಗಮಿಸಿ ಈರಪ್ಪ ಬಾರಿಗಿಡ, ದೇವಪ್ಪ ವಾಲೀಕಾರ್, ಗಿರಿಯಪ್ಪ ದೊಡ್ಡಮನಿ,ನಿಂಗಪ್ಪ ಉಜ್ಜಣ್ಣವರ, ನಾಲ್ಕು ಜನ ಕಾರ್ಮಿಕರ ನಿವೃತ್ತಿ ಹೊಂದಿದ
ಪ್ರಯುಕ್ತ ಕಾರ್ಮಿಕರಿಗೆ ಎರಡುವರೆ ಸಾವಿರ ಗೌರವದನ ನೀಡಿ ಮಾತನಾಡಿ.
ದುಡಿಯುವ ಕೈಗಳಿಗೆ ಯೋಗ್ಯ ವೇತನ ಸಿಗಬೇಕು ಕಾರ್ಮಿಕ ಬಂಧುಗಳು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಬಲಗೊಳ್ಳುವಂತಾಗಬೇಕು.
ನಮ್ಮ ಸಮಾಜದ ನಿಜವಾದ ಶಕ್ತಿ- ಕಾರ್ಮಿಕರ ಪರಿಶ್ರಮ, ನಿಷ್ಠೆ ಮತ್ತು ತ್ಯಾಗ. ಅವರ ಕೈಗಳ ಶ್ರಮದಿಂದಲೇ ದೇಶದ ಪ್ರಗತಿ ಸಾಧ್ಯವಾಗಿದೆ. ಇಂದು ಕಾರ್ಮಿಕರ ಹಕ್ಕು, ಗೌರವ ಮತ್ತು ಸಾಧನೆಗಳನ್ನು ಸ್ಮರಿಸುವ ದಿನ. ಅವರ ಪರಿಶ್ರಮಕ್ಕೆ ನಮಸ್ಕಾರ ಸಲ್ಲಿಸಿ, ಉತ್ತಮ ಭವಿಷ್ಯಕ್ಕಾಗಿ ಒಟ್ಟಾಗಿ ಹೆಜ್ಜೆ ಹಾಕೋಣ ಎಂದು ಕಾರ್ಮಿಕರಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಹಮಾಲರ ಸಂಘದ ಉಪಾಧ್ಯಕ್ಷ ವಿರುಪಾಕ್ಷಪ್ಪ ಭಂಡಾರಿ, ದೇವಪ್ಪ ಗುಳದಳ್ಳಿ, ದೊಡ್ಡವೀರಪ್ಪ ಆರಬೆರಳಿನ್, ಶರಣಪ್ಪ ಹಿರೇಕೊಪ್ಪ, ಮಲ್ಲಪ್ಪ ನಾಗಸಿನವರ್, ತಿರುಪತಿ ಮಾನವಿ, ಯಮನೂರಪ್ಪ ನದಾಪ, ಶ್ರೀ ರುದ್ರಮನೇಶ್ವರ ಹಮಾಲರ ಸಂಘದ ಇತರರು ಇದ್ದರು.
ವರದಿ ಚನ್ನಯ್ಯ ಹಿರೇಮಠ ಕುಕನೂರು