*ಅಮರಾಪುರ ಗ್ರಾಮದಲ್ಲಿ ಶ್ರೀ ಗುರು ಮಡಿವಾಳೇಶ್ವರ ನೂತನ ಮೂರ್ತಿ ಪ್ರತಿಷ್ಠಾಪನೆ ಮಹೋತ್ಸವ.. ✍️*

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಬೆಳಗಾವಿ ಜಿಲ್ಲೆ ಕಿತ್ತೂರು. ✍️ ತಾಲೂಕಿನ ಸುಕ್ಷೇತ್ರ ಅಮರಾಪುರ ಗ್ರಾಮದಲ್ಲಿ ಶ್ರೀ ಗುರು ಮಡಿವಾಳೇಶ್ವರ ನೂತನ ಮೂರ್ತಿ ಪ್ರತಿಷ್ಠಾಪನೆ ಜಾತ್ರಾ ಮಹೋತ್ಸವದ ಕಾರ್ಯಕ್ರಮ ಬುಧವಾರ 29- 4- 2026 ರಂದು ಶ್ರೀ ಷಟಸ್ಥಳ ಬ್ರಹ್ಮ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ರಾಯಣ್ಣ ಸಂಗೊಳ್ಳಿ ಪರಮಪೂಜ್ಯ ಶ್ರೀ ಪಂಚಾಕ್ಷರಿ ಮಹಾಸ್ವಾಮಿಗಳು ಶ್ರೀ ಗುರು ಮಡಿವಾಳೇಶ್ವರ ಮಠ ನಿಚ್ಚನಕಿ ವೇದಮೂರ್ತಿ ಶ್ರೀ ಮುರುಗಯ್ಯ ಚಂದ್ರಯ್ಯ ಕಲ್ಮಠ ಅರ್ಚಕರು ಮತ್ತು ಊರಿನ ಗುರು ಹಿರಿಯರ ಸಮ್ಮುಖದಲ್ಲಿ ಶ್ರೀ ಗುರು ಮಡಿವಾಳೆಶ್ವರ ನೂತನ ಮೂರ್ತಿ ಪ್ರತಿಷ್ಠಾಪನೆ, ನೆರವೇರಲಿದೆ ಈ ಮಹೋತ್ಸವಕ್ಕೆ ಸುತ್ತಮುತ್ತಲಿನ ಭಕ್ತ ವೃಂದ ಹಾಗೂ ಊರಿನ ಯುವಕರು ಮತ್ತು ಮುದ್ದಾದ ಪುಟಾಣಿ ಮಕ್ಕಳು ಸುತ್ತಮುತ್ತಲಿನ ಹಳ್ಳಿಗಳ ತಾಯಂದಿರುಗಳು ಕೂಡಾ ಭಾಗವಹಿಸಲಿದ್ದಾರೆ. ಇದರ ಪೂರ್ವದಲ್ಲಿ ಏಪ್ರಿಲ್ 24 - 2026 ರಂದು ತಾಯಂದಿರ ಕುಂಭಮೇಳ ನೆರವೇರಿತು ಏಪ್ರಿಲ 24 ರಿಂದ ಏಪ್ರಿಲ 29 2026 ರ ವರೆಗೆ ರಾತ್ರಿ ನಿರಂತರ ಶಿವ ಭಜನೆ ನೆರವೇರಲಿದೆ ತಾಯಂದಿರ ಕುಂಭಮೇಳದ ಗಂಗಾ ಜಲ ದವಸ 
ಧಾನ್ಯಗಳು ಹಾಗೂ ಪುಷ್ಪಗಳಿಂದ ನೂತನ ಮೂರ್ತಿಯನ್ನು 5 ದಿನಗಳ ವರೆಗೆ ಮೂರ್ತಿಯನ್ನು ನೆನೆ ಇಟ್ಟು 
 29.04.2026ರಂದು  
ಹೋಮ ಹವನ ಪೂಜಾ ವಿಧಿ ವಿಧಾನಗಳಿಂದ ಹಾಗೂ ವಿವಿಧ ಮಠಾಧೀಶರ ಪೂಜ್ಯರುಗಳಿಂದ ಹಾಗೂ ಗುರು ಹಿರಿಯರ ಸಮ್ಮುಖದಲ್ಲಿ ಮೂರ್ತಿ ಪ್ರತಿಷ್ಠಾಪನೆ ಗೊಳ್ಳಲಿದೆ.

Post a Comment

0Comments

Post a Comment (0)