ಹಣ್ಣಿಕೇರಿ ಗ್ರಾಮದಲ್ಲಿ ಶ್ರೀ ಗ್ರಾಮದೇವತೆಯರ ಜಾತ್ರೆ ಮಹೋತ್ಸವ ಅತ್ಯಂತ ಸಡಗರ-ಸಂಭ್ರಮ ದಿಂದ ಆರಂಭಗೊಂಡಿದೆ. ನೂತನ ಮೂರ್ತಿಗಳ ಪುರ ಪ್ರವೇಶ, ಜೀರ್ಣೋ ದ್ಧಾರಗೊಂಡ ದೇವಸ್ಥಾನದ ವಾಸ್ತು ಪೂಜೆ ಹಾಗೂ ಕಳಸಾರೋಹಣ ಕಾರ್ಯಕ್ರಮ ಗಳು ಸ್ಥಳೀಯ ಹಿರೇಮಠದ ರೇವಣಸಿದ್ದ ಶಿವಾಚಾರ್ಯ ಮಹಾಸ್ವಾಮಿಗಳ ಸಾನ್ನಿಧ್ಯ ದಲ್ಲಿ ನೆರವೇರಿದವು. ಗ್ರಾಮದ ಸೀಮೆ ಯಿಂದ ಪ್ರಾರಂಭವಾದ ಮೂರ್ತಿಗಳ ಭವ್ಯ ಮೆರವಣಿಗೆಗೆ ಶ್ರೀ ವಿಶೇಷ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಸಕಲ ವಾದ್ಯ ಮೇಳದೊಂದಿಗೆ ನಡೆದ ಭವ್ಯ ಮೆರವಣಿಗೆ ಮೂಲಕ ಹಾಗೂ ಸ್ನಾನ ಮಟ್ಕಾಧೀಶರು ಗಣ್ಯರು ಭಾಗಿ ಆಗುವುದರ ಮೂಲಕ ಮೂರ್ತಿಗಳ ಪುರಪ್ರವೇಶ ನೆರವೇರಿತು.
ಭವ್ಯ ಮೆರವಣಿಗೆಯಲ್ಲಿ ಮಹಿಳಾ ಡೊಳ್ಳು ಕುಣಿತ ಗೊಂಬೆ ಕುಣಿತ ಜಗ್ಗಲಿಗೆ ಮೇಳ ಹಾಗೂ ಕರಡಿ ಮಜಲು ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಭಾಗವಹಿಸಿ ಮೆರಗನ್ನು ತಂದುಕೊಟ್ಟವು ಗ್ರಾಮದ ಸುಮಂಗಲೆಯರು ಕುಂಭ ಹಾಗೂ ಆರತಿಯೊಂದಿಗೆ ಪಾಲ್ಗೊಂಡು ಭಕ್ತಿ ಪೂರ್ವಕ ಗ್ರಾಮದೇವತೆಗಳನ್ನು ಬರಮಾಡಿಕೊಂಡರು. ಭವ್ಯ ಮೆರವಣಿಗೆಯಲ್ಲಿ ಹಣಬರಟ್ಟಿಯ ಹಿರೇಮಠದ ಷಬ್ರ ಬಸವಲಿಂಗ ಶಿವಾಚಾರ್ಯರು, ಗ್ರಾಮಸ್ಥರು ಮಹಿಳೆಯರು ಹಾಗೂ ಯುವಕರು ಪಾಲ್ಗೊಂಡಿದ್ದರು.
ಅತ್ಯಂತ ವಿಜ್ರಂಭಣೆಯಿಂದ ದೇವಿಯ ಜಾತ್ರೆಯು ಇಂದಿನಿಂದ ಮೇ 5 ರ ವರೆಗೆ ಅನೇಕ ಧಾರ್ಮಿಕ ಹಾಗೂ ಸಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಗುರುವಾರ
23.04.2026
ಗ್ರಾಮ ದೇವತೆಯರ ನೂತನ ಮೂರ್ತಿಗಳ ಪುರ ಪ್ರವೇಶ ಮತ್ತು ಕಲಾತಂಡಗಳ ಮೆರವಣಿಗೆ ವಾಸ್ತು ಪೂಜೆ ಕಳಸಾರಹಣ.
ಶುಕ್ರವಾರ
24 ,4 ,2026
ರಥದ ಕಳಸಾರೋಹಣ ಹಾಗೂ ನೂತನವಾಗಿ ನಿರ್ಮಾಣಗೊಂಡ ಶ್ರೀ ಸಿದ್ದೇಶ್ವರ ಮಹಾದ್ವಾರ ಉದ್ಘಾಟನೆ.
ಶನಿವಾರ
25.04.2026
ಗ್ರಾಮ ದೇವತೆಯರ ಹೊನ್ನಾಟ ಹಾಗೂ ಉಡಿ ತುಂಬುವುದು, ರಾತ್ರಿ ಪ್ರವಚನ.
ರವಿವಾರ
26.4.2026
ಗ್ರಾಮ ದೇವತೆಯರ ಹೊನ್ನಾಟ ಹಾಗೂ ಉಡಿ ತುಂಬುವುದು.
ಸೋಮವಾರ
27.04.2026
ಹೊನ್ನಾಟ ಹಾಗೂ ಉಡಿ ತುಂಬುವುದು ರಾತ್ರಿ ಪ್ರವಚನ ರಾತ್ರಿ 9:00ಗೆ ಮಂಜುನಾಥ ಹೊಡೆದ್ ತಂಡದಿಂದ ರಸಮಂಜರಿ
ಕಾರ್ಯಕ್ರಮ.
ಮಂಗಳವಾರ
28 4 2026
ದೇವತೆಯರ ಹೊನ್ನಾಟ ಉಡಿ ತುಂಬುವುದು ಪ್ರವಚನ ನಾಟಕ ಕುಂಟ ಕೋಣ ಮೂಕ ಜಾಣ ರಾಜಣ್ಣ ಜೇವರಗಿ ಡ್ರಾಮಾ ಕಂಪನಿಯವರಿಂದ ಜರುಗುವುದು.
ಬುಧವಾರ
29 .4 .2026
ದೇವತೆಯರ ಹೊನ್ನಾಟ ಉಡಿ ತುಂಬುವುದು ಪ್ರವಚನ ರಾತ್ರಿ 9:00ಗೆ ಪ್ರಕಾಶ್ ಚಂದನ ವಾರ್ ತಂಡದಿಂದ ಜೋಗತಿ ನೃತ್ಯ...
ಗುರುವಾರ
30.4.2026
ಗ್ರಾಮ ದೇವತೆಯರ ಭವ್ಯ ಹೊನ್ನಾಟ ಹಾಗೂ ಗುಡಿ ತುಂಬುವುದು ರಾತ್ರಿ ಪ್ರವಚನ.
ಶುಕ್ರವಾರ
1.5.2026
ಗ್ರಾಮ ದೇವತೆಯರ ಹೊನ್ನಾಟ, ಸಾಯಂಕಾಲ ನಾಲ್ಕು ಗಂಟೆಗೆ ಭವ್ಯ ರಥೋತ್ಸವ...
ಶನಿವಾರ
2.5.2026
ಶ್ರೀ ಗ್ರಾಮ ದೇವತೆಯರು ಶ್ರೀ ಸಿದ್ದೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಿರ್ಮಿಸಿದ ಮಂಟಪದಲ್ಲಿ ಗದ್ದುಗೆಗೊಳ್ಳುವುದು ನಂತರ ಸಾರ್ವಜನಿಕರಿಂದ ಉಡಿತುಂಬುವ ಕರ್ಯಕ್ರಮ ಹಾಗೂ ಪ್ರವಚನ ಜರುಗುವುದು.
ರವಿವಾರ
3.5.2026
ಬೆಳಿಗ್ಗೆ ಎಂಟು ಗಂಟೆಗೆ ಮಾತು ಶ್ರೀ ಶಿವಯೋಗಿನಿ ದೇವಿಯರ ನೇತೃತ್ವದಲ್ಲಿ ಗ್ರಾಮದ ಸುಮಂಗಲಿಯ ದಿಂದ ಗ್ರಾಮ ದೇವತೆಯರಿಗೆ ಕುಂಕುಮಾರ್ಚನೆ ಕಾರ್ಯಕ್ರಮ.
ಸೋಮವಾರ
4.5.2026
ಸಾರ್ವಜನಿಕರಿಂದ ಉಡಿ ತುಂಬುವುದು ರಾತ್ರಿ ಪ್ರವಚನ ಸಿರಿಗೆರೆ ಜಾತ್ರಾತಂಡದಿಂದ ಸಂಸಾರದಲ್ಲಿ ಸ,ವಿ,ದ,ಪ, ಹಾಸ್ಯ ಭರಿತ ನಾಟಕ...
ಮಂಗಳವಾರ
5.5.2026
ಶ್ರೀ ಗ್ರಾಮ ದೇವತೆಯರ ಸೀಮಿಗೆ ಹೋಗುವುದರ ಮುಖಾಂತರ ಜಾತ್ರಾದರೆ ಕಾಣುವುದು...