ಮರಕುಂಬಿ ಸಮೀಪದಲ್ಲಿರುವ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಚಿಕೊಪ್ಪ ಕೆ ಎಂ ಗ್ರಾಮದಲ್ಲಿ ಏಪ್ರಿಲ್ 22 2026ರಂದು ಶ್ರೀ ಆದಿಶಕ್ತಿ ದೇಮಮ್ಮಾ ದೇವಿಯ ಜಾತ್ರಾ ಮಹೋತ್ಸವದಲ್ಲಿ ದೇವಿಯ ಆರಾಧಕರಿಂದ ದೇವಿಯ ಪಾರಾಯಣ ಹಾಗೂ ಪಲ್ಲಕ್ಕಿ ಉತ್ಸವ ನೆರವೇರಿತು.
ಈ ಜಾತ್ರಾ ಮಹೋತ್ಸವಕ್ಕೆ ದೇವಿಯ ಪಾರಾಯಣ ಮಾಡುವಂತಹ ಸುತ್ತಮುತ್ತಲಿನ ಭಕ್ತಾದಿಗಳು ಯರಗಟ್ಟಿ ಚಚಡಿ ಸತ್ತಿಗೇರಿ ಪಚ್ಚಾಪುರ ಹಾಗೂ ಸುತ್ತಮುತ್ತಲಿನ ದೇವಿ ಆರಾಧಕರಿಂದ ದೇವಿಯ ಪಾರಾಯಣ ಮಾಡಿ ಜಾತ್ರಾ ಮಹೋತ್ಸವಕ್ಕೆ ಕಳೆ ತಂದರು ಈ ಜಾತ್ರಾ ಮಹೋತ್ಸವಕ್ಕೆ ಬೈಲಹೊಂಗಲ ನಗರದ ಹೊಸೂರು ರೋಡ ನಲ್ಲಿ ಬರುವ ಶ್ರೀಬಗಳಾಂಬಾ ದೇವಿ ದೇವಸ್ಥಾನದ ಧರ್ಮಾಧಿಕಾರಿಗಳು ಡಾಕ್ಟರ ಶ್ರೀ ವೇದಮೂರ್ತಿ ವೀರಯ್ಯ ಮಹಾಸ್ವಾಮಿಗಳು ಜಾತ್ರಾ ಮಹೋತ್ಸವಕ್ಕೆ ಪಾಲ್ಗೊಂಡಿದ್ದರು. ಅದು ಅಲ್ಲದೆ ಜಾಗೃತ ಶ್ರೀ ದೇಮಮ್ಮಾ ದೇವಿಯ ದೇವಸ್ಥಾನದ ಸಕಲ ಸಭಕ್ತ ಮಂಡಳಿ ಹಾಗೂ ಪ್ರತಿಷ್ಠಾಪನೆ ಮಹೋತ್ಸವದ ಸರ್ವ ಸದಸ್ಯರು ಚಿಕ್ಕೊಪ್ಪ ಕೆ ಎಮ್ ಗ್ರಾಮದ ಸಮಸ್ತ ಭಕ್ತರಿಂದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸದ್ಭಕ್ತರು ತಾಯಂದಿರು ಮುದ್ದು ಮಕ್ಕಳು ಊರಿನ ಯುವಕರು ಜಾತ್ರಾ ಮಹೋತ್ಸವಕ್ಕೆ ಪಾಲ್ಗೊಂಡಿದ್ದರು.. ✍️