ಬೆಳಗಾವಿ ಜಿಲ್ಲೆ ಯರಗಟ್ಟಿ ತಾಲೂಕಿನ ಕಡಬಿ, ಗೊರಗುದ್ದಿ, ಬೋಳ ಕಡಬಿ ( ಲಕ್ಷ್ಮೀನಗರ ) ಗ್ರಾಮದಲ್ಲಿ ಶ್ರೀ ಅಂಬಾದೇವಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಮೊದಲನೇ ವರ್ಷದ ಜಾತ್ರಾ ಮಹೋತ್ಸವ ಗುರುವಾರ ದಿನಾಂಕ : 23-04-2026 ರಿಂದ ಶುಕ್ರವಾರ ದಿನಾಂಕ24-04-2026 ರ ವರೆಗೆ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನೆರವೇರಲಿದೆ ಏಪ್ರಿಲ್ 23 .2026ರಂದು ಬೆಳಿಗ್ಗೆ 9 ಗಂಟೆಗೆ ಶ್ರೀ ಬೆಳ್ಳಮ್ಮ ದೇವಿ ದೇವಸ್ಥಾನದಿಂದ ಶ್ರೀ ಅಂಬಾದೇವಿ ದೇವಸ್ಥಾನದವರೆಗೆ ಕುಂಭಮೇಳದ ಜೊತೆಗೆ ಅಮ್ಮನವರ ಪಂಚಲೋಹದ ಮೂರ್ತಿಯೊಂದಿಗೆ ವಾದ್ಯ ಮೇಳ ಹಾಗೂ ಮೆರವಣಿಗೆ ಜರಗುವುದು ಶುಕ್ರವಾರ ದಿನಾಂಕ 24 - 04-2026 ರಂದು ಬ್ರಾಹ್ಮಿ ಮುಹೂರ್ತದಲ್ಲಿ ಬೆಳಿಗ್ಗೆ ಶ್ರೀಗಳಿಂದ ಧ್ವಜಾರೋಹಣ ಶ್ರೀ ಚಕ್ರ ಶ್ರೀ ಅಂಬಾದೇವಿ ಅಮ್ಮನವರ ಪಂಚಲೋಹ ಮೂರ್ತಿ ಪ್ರತಿಷ್ಠಾಪನೆ ನಂತರ ಅಮ್ಮನವರಿಗೆ ಮಹಾಪೂಜೆ ಮುತ್ತೈದೆಯರಿಂದ ಆರತಿ ಹಾಗೂ ಬೋಳ ಕಡಬಿ ಗ್ರಾಮಸ್ಥರಿಂದ ಅಂಬಲಿ ತರುವ ಕಾರ್ಯಕ್ರಮ ಮಹಾತ್ಮರಿಂದ ಪ್ರವಚನ ಹಾಗೂ ಸತ್ಕಾರ ಸಮಾರಂಭ ಅನ್ನ ಸಂತರ್ಪಣೆ ಮಹಾಮಂಗಳ ಕಾರ್ಯಕ್ರಮದೊಂದಿಗೆ ನಂತರ ಚಂಡಿಕಾ ಹೋಮ ಕಾರ್ಯಕ್ರಮ ರಾತ್ರಿ ಎಂಟು ಗಂಟೆಯಿಂದ ಬೆಳಗ್ಗೆ 3:00 ವರೆಗೆ ವಿಶೇಷ ಸುತ್ತಮುತ್ತಲಿನ ಗ್ರಾಮಗಳ ಭಜನಾ ಮಂಡಳಿಯವರು ಭಜನೆ ಸೇವೆ ಹಾಗೂ ದೇವಿ ಆರಾಧಕರಿಂದ ಸಾಮೂಹಿಕ ದೇವಿ ಪಾರಾಯಣ ಕಾರ್ಯಕ್ರಮ ಜರಗುತ್ತವೆ. ಈ ಜಾತ್ರಾ ಮಹೋತ್ಸವಕ್ಕೆ ದಿವ್ಯ ಸಾನಿಧ್ಯ ಸಾಧು ಚಕ್ರವರ್ತಿ ಶ್ರೀ ಶ್ರೀ ಶ್ರೀ ಶಿವಾನಂದ ಭಾರತಿ ಮಹಾಸ್ವಾಮಿಗಳು ಸಾಧು ಸಂಸ್ಥಾನ ಮಠ ಇಂಚಲ ಸಾನಿಧ್ಯ ಪೂಜ್ಯಶ್ರೀ ನಿಜಗುಣ ದೇವರು ಶ್ರೀ ಸಿದ್ದಲಿಂಗೇಶ್ವರ ಕೈವಲ್ಯ ಆಶ್ರಮ ಹುಣಶ್ಯಾಳ ಪಿ,ಜಿ ಶ್ರೀ ಸದಾನಂದ ಸ್ವಾಮಿಗಳು ಶ್ರೀ ಗುರುನಾಥರೂಡ ಮಠ ಕಡಬಿ ಡಾ. ಶ್ರೀ ವೇದಮೂರ್ತಿ ವೀರಯ್ಯ ಮಹಾಸ್ವಾಮಿಗಳು ಧರ್ಮಧಿಕಾರಿಗಳು ಶ್ರೀ ಬಗಳಾಂಬಾದೇವಿ ದೇವಸ್ಥಾನ ಬೈಲಹೊಂಗಲ ಶ್ರೀ ಷ.ಬ್ರ. ಜಡೆತಲೆ ಮರುಳಸಿದ್ದ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ ಕೆ ಶಿವಾಪುರ ಅಧ್ಯಕ್ಷತೆ ಶ್ರೀ ಮಾರುತಿ ಸ್ವಾಮಿಗಳು ಪೀಠಾಧಿಪತಿ ಹಾಗೂ ಅಧ್ಯಕ್ಷರು ಶ್ರೀ ಬಗಳಾಮುಖಿ ದೇವಸ್ಥಾನ ಲಕ್ಷ್ಮಿ ನಗರ ಬೋಳಕಡಬಿ ಉದ್ಘಾಟಕರು ಸನ್ಮಾನ್ಯ ಶ್ರೀ ವಿಶ್ವಾಸ ವೈದ್ಯ ಜನಪ್ರಿಯ ಶಾಸಕರು ಸವದತ್ತಿ ವಿಶೇಷ ಆಮಂತ್ರಕರು ಸನ್ಮಾನ್ಯ ಶ್ರೀ ಜಗದೀಶ ಶೆಟ್ಟರ ಲೋಕಸಭಾ ಸದಸ್ಯರು ಬೆಳಗಾವಿ ಸನ್ಮಾನ್ಯ ಶ್ರೀ ಸತೀಶ ಲ. ಜಾರಕಿಹೊಳಿ ಲೋಕೋಪಯೋಗಿ ಸಚಿವರು ಹಾಗೂ ಶಾಸಕರು ಶ್ರೀ ಎಮ್ ವ್ಹಿ. ಗುಂಡಪ್ಪ ಗೋಳ ತಾಲೂಕ ದಂಡಾಧಿಕಾರಿಗಳು ಹಾಗೂ ತಹಶೀಲ್ದಾರ. ಯರಗಟ್ಟಿ ಶ್ರೀ ಈರಣ್ಣ ಹವಳಪ್ಪನವರ ಪಂಚಾಯತ ಗ್ರಾಮ ಅಭಿವೃದ್ಧಿ ಅಧಿಕಾರಿಗಳು ಕಡಬಿ ಶ್ರೀ ನಾರಾಯಣ ರಣರಸಿಂಹ ಶ್ರೀ ಅಂಬಾಮಠ ಲಿಂಗದಹಳ್ಳಿ.ಜಾತ್ರಾ ಮಹೋತ್ಸವಕ್ಕೆ ಗುರು ಹಿರಿಯರು ಯುವಕರು ಹಗಲಿರಳು ಸೇವೆ ಸಲ್ಲಿಸುತ್ತಿರುವ ಶ್ರಮಜೀವಿಗಳು ಸುತ್ತಮುತ್ತಲಿನ ಸಮಸ್ತ ಗ್ರಾಮದ ಭಕ್ತರು ಜಾತ್ರಾ ಮಹೋತ್ಸವಕ್ಕೆ ಪಾಲ್ಗೊಳ್ಳಲಿದ್ದಾರೆ .
*ಮೊದಲನೆಯ ವರ್ಷದ ಶ್ರೀ ಅಂಬಾದೇವಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಜಾತ್ರಾ ಮಹೋತ್ಸವ*✍️
By -
April 18, 2026
0
Tags: