*ಮರಕುಂಬಿ :* ಸಮೀಪದ ಚಿಕ್ಕೊಪ್ಪ ಕೆ.ಎಂ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ದೇಮಮ್ಮಾ ದೇವಿಯ ಪ್ರತಿಷ್ಠಾಪಣ ಮಹೋತ್ಸವ ಏಪ್ರಿಲ್ 21ರಿಂದ ಏಪ್ರಿಲ್ 24-2026 ವರೆಗೆ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರಗಲಿದೆ 21ರಂದು ಕುಂಭಮೇಳ ಹಾಗೂ ವಿವಿಧ ವಾದ್ಯಗಳೊಂದಿಗೆ ದೇವಿಯ ಭವ್ಯ ಪುರ ಪ್ರವೇಶ 22ರಂದು ಬೆಳಗ್ಗೆ 10 ಗಂಟೆಗೆ ಪಲ್ಲಕ್ಕಿ ಉತ್ಸವ ಹಾಗೂ ಪಾರಾಯಣ ಏಪ್ರಿಲ್ 23- 2006ರಂದು ದೇವಿಗೆ ಕುಂಕುಮಾರ್ಚನೆ ನಂತರ ಪಟ್ಟಿಹಾಳ್ ಕೆ. ಬಿ ಶ್ರೀ ಸದಾನಂದ ಹಿರೇಮಠ ಅವರ ನೇತೃತ್ವದಲ್ಲಿ ನವ ಚಂಡಿಕಾ ಹೋಮ ರುದ್ರಾಭಿಷೇಕ ಧರ್ಮಸಭೆ ಹಾಗೂ ಭಜನಾ ಕಾರ್ಯಕ್ರಮ ಏಪ್ರಿಲ್ 24 -2026 ರಂದು ಮುಂಜಾನೆ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀಗಳಿಂದ ದೇಮಮ್ಮದೇವಿ ನೂತನ ಮೂರ್ತಿಯ ಪ್ರತಿಷ್ಠಾಪನೆ ಕಾರ್ಯಕ್ರಮ ಜರಗುವುದು. ಈ ಕಾರ್ಯಕ್ರಮಕ್ಕೆ ಶ್ರೀ ಷ ಭ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ ಸತ್ತಿಗೆರಿ ಶ್ರೀ ವೇ ಮೂರ್ತಿ ಈರಯ್ಯಾ ಸ್ಪಾಮಿಗಳು ಅ ಹಿರೇಮಠ ಶ್ರೀ ಭಗಳಾಂಭಾದೇವಿ ದರ್ಮಾಧಿಕಾರಗಳು ಬೈಲಹೊಂಗಲ. ಶ್ರಿ ಮಹಾಂತೇಶ ಶಿವಾನಂದ ಕೌಜಲಗಿ ಬೈಲಹೊಂಗಲ ಶಾಸಕರು. ಶ್ರೀ ಜಗದೀಶ ಚ. ಮೆಟಗುಡ್ಡ ಮಾಜಿ ಶಾಸಕರು ಶ್ರೀ ವ್ಹಿ. ಆಯ್' ಪಾಟೀಲ ಮಾಜಿ. ಶಾಸಕರು. ಶ್ರೀ ಶಂಕರ ಭ.ಮಾಡಲುಗಿ ಮಾಜಿ ಜಿ. ಪಂ.ಸದಸ್ಯರು ಶ್ರೀ ಕಾರ್ತಿಕ ಬ. ಪಾಟೀಲ ಬೆಳಗಾವಿ ಜಿಲ್ಲೆಯ ಯುತ್ ಕಾಂಗ್ರೆಸ ಅಧ್ಯಕ್ಷರು ಈ ಜಾತ್ರಾ ಮಹೋತ್ಸವಕ್ಕೆ ಆಗಮಿಸಲಿದ್ದಾರೆ. ಜಾಗೃತ ಶ್ರೀ ಶಕ್ತಿಮಾತಾ ದೇಮಮ್ಮಾದೇವಿಯ ದೇವಸ್ಥಾನದ ಸಕಲ ಸದ್ಭಕ್ತ ಮಂಡಳಿ ಹಾಗೂ ಪ್ರತಿಷ್ಠಾಪನೆ ಮಹೋತ್ಸವದ ಸರ್ವ ಸದಸ್ಯರು ಚಿಕ್ಕೊಪ್ಪ ಕೆ .ಎಮ್. ಗ್ರಾಮದ ಸಮಸ್ತ ಭಕ್ತ ವೃಂದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸದ್ಭಕ್ತರು ಜಾತ್ರಾ ಮಹೋತ್ಸವಕ್ಕೆ ಪಾಲ್ಗೊಳ್ಳಲಿದ್ದಾರೆ.
*ಸವದತ್ತಿ ತಾಲೂಕಿನ ಚಿಕ್ಕೊಪ್ಪ ಕೆ. ಎಂ ಗ್ರಾಮದಲ್ಲಿ ಏಪ್ರಿಲ್ 21-2026 ರಂದು ಆದಿಶಕ್ತಿ ದೇಮಮ್ಮಾ ದೇವಿ ನೂತನ ಮೂರ್ತಿ ಪ್ರತಿಷ್ಠಾಪನೆಯ ಮಹೋತ್ಸವ ನೆರವೇರಲಿದೆ.. ✍️*
By -
April 18, 2026
0