ವಿಶ್ವಗುರು ಜಗಜ್ಯೋತಿ ಬಸವ ಜಯಂತಿ ಆಚರಣೆ...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಮೇಕಲಮರಡಿ:ವಿಶ್ವಗುರು ಜಗಜ್ಯೋತಿ ಶ್ರೀ ಬಸವೇಶ್ವರ ಜಯಂತೋತ್ಸವ  
ಸಮಾನತೆ, ಸತ್ಯ ಮತ್ತು ಶ್ರಮದ ಮಹತ್ವವನ್ನು ಸಾರಿದ ಮಹಾನ್ ತತ್ವಜ್ಞಾನಿ ಬಸವಣ್ಣ 
“ಕಾಯಕವೇ ಕೈಲಾಸ” ಎಂಬ ಸಂದೇಶದ ಮೂಲಕ ಕೆಲಸವೇ ಪೂಜೆ ಎಂದು ಬೋಧಿಸಿದವರು.
ಜಾತಿ ಭೇದವನ್ನು ತೊಡೆದುಹಾಕಿ, ಎಲ್ಲರೂ ಸಮಾನರು ಎಂಬ ಮಹತ್ವದ ಸಂದೇಶ ನೀಡಿದ್ದಾರೆ
ಈ ಬಸವ ಜಯಂತಿಯಂದು ಅವರ ಮಾರ್ಗವನ್ನು ಅನುಸರಿಸಿ ಜೀವನವನ್ನು ಉತ್ತಮಗೊಳಿಸೋಣಬಸವ ಜಯಂತೋತ್ಸವ ಹಾರ್ದಿಕ ಶುಭಾಶಯಗಳು!
ನೇಸರಗಿ ಸಮೀಪದ ಮೇಕಲಮರಡಿ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಬಸವ ಜಯಂತಿಯ ಪ್ರಯುಕ್ತವಾಗಿ ಶ್ರೀ ಜಗಜ್ಯೋತಿ ವಿಶ್ವಗುರು ಬಸವಣ್ಣವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸುವುದರ ಮುಖಾಂತರ ಶ್ರೀ ಬಸವ ಜಯಂತಿಯನ್ನು ಆಚರಣೆ ಮಾಡಲಾಯಿತು. 
ಮೇಕನಮರಡಿ ಗ್ರಾಮದ ಬಸವಣ್ಣನ ದೇವಸ್ಥಾನದಲ್ಲಿ ನಂದಿ ಸ್ವರೂಪನಾದ ಬಸವಣ್ಣನಿಗೆ ಮಹಾ ರುದ್ರಾಭಿಷೇಕ ಹಾಗೂ ಪುಷ್ಪ ಅಲಂಕಾರ ಮಾಡುವುದರ ಜೊತೆಗೆ ವಿಶೇಷ ಪೂಜೆಯನ್ನು ಮಾಡಲಾಯಿತು ಶ್ರೇಷ್ಠ ದಿನವಾದ ಅಕ್ಷಯ ತೃತೀಯ ದಿನದಂದು ವಿಶೇಷವಾಗಿ ಭಕ್ತರು ಬಸವಣ್ಣನ ಆಶೀರ್ವಾದ ಪಡೆಯಲು ಹಣ್ಣು ಕಾಯಿ ಕರ್ಪೂರ ನೈವೇದ್ಯ ಮಾಡಿ ಬಸವಣ್ಣನ ದರ್ಶನವನ್ನು ಮಾಡಿದರು. 
ಈ ವಿಶೇಷ ಪೂಜೆಯ ಕಾರ್ಯಕ್ರಮದಲ್ಲಿ ನೇಸರಗಿಯ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ನಿಂಗಪ್ಪ ಅರಕೇರಿ, ಯುವ ಮುಖಂಡರಾದ ರಾಜು ಯರಡಾಲ, ಶ್ರೀ ಬಸವೇಶ್ವರ ಸೇವಾ ಅಭಿವೃದ್ಧಿ ಸಂಸ್ಥೆಯ ಸದಸ್ಯರಾದ ಅಜ್ಜಪ್ಪ ಕಮತಗಿ ನಾಗಪ್ಪ ನೇಸರಗಿ ವಿಠ್ಠಲ್ ಕುರಗುಂದ, ಸೋಮಪ್ಪ ಕುರಗುಂದ ಬಸವರಾಜ್ ಕುರಗುಂದ ಸೋಮಯ್ಯ ಹಿರೇಮಠ ಪಾರಿಶ ಟಗರಿ ವಿರುಪಾಕ್ಷಪ್ಪ ಕಮತಗಿ ನಿಂಗಯ್ಯ ಪೂಜಾರಿ ಪತ್ರಕರ್ತರು ಬಸವರಾಜ್ ಕುರಗುಂದ ಗ್ರಾಪಂ ಕಾರ್ಯದರ್ಶಿ ಶಿವಾನಂದ ಬಡಿಗೇರ  ಮಹಾಂತೇಶ ಬಡಿಗೆರ ಗ್ರಾಮದ ಗುರುಹಿರಿಯರು ಗ್ರಾಮಸ್ಥರು ಭಕ್ತರು ಉಪಸ್ಥಿತರಿದ್ದರು.

Post a Comment

0Comments

Post a Comment (0)