ಬೈಲಹೊಂಗಲ: ಗ್ರಾಮೀಣ ಸಂಸ್ಕೃತಿ
ಪ್ರಮುಖ ಅಂಶವಾದ ಜಾತ್ರೆಗಳು ಜನರಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಒಗ್ಗಟ್ಟನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಕೆನರಾ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಅವರು ಶನಿವಾರ ತಾಲೂಕಿನ ಮದನಬಾವಿ ಗ್ರಾಮದಲ್ಲಿ 11 ವರ್ಷಗಳ ಬಳಿಕ ಅದ್ದೂರಿಯಾಗಿ ನಡೆದ ಶ್ರೀ ಗ್ರಾಮದೇವತೆಯ ಜಾತ್ರೆಯಲ್ಲಿ ಭಾಗವಹಿಸಿ, ದೇವಿಯ ದರ್ಶನ ಪಡೆದ ನಂತರ ಮಾತನಾಡಿದರು. ಜಾತ್ರೆಗಳು ಕೇವಲ ಧಾರ್ಮಿಕ ಆಚರಣೆಗಳಷ್ಟೇ ಅಲ್ಲ, ಸಮಾಜವನ್ನು ಒಂದಾಗಿ ಕಟ್ಟುವ ಮಹತ್ವದ ಸಂಪ್ರದಾಯಗಳಾಗಿವೆ ಎಂದು ಗ್ರಾಮದೇವತೆಯ ಹೇಳಿದರು. ಆಶೀರ್ವಾದದಿಂದ ಗ್ರಾಮದಲ್ಲಿ ಸದಾ ಸುಖ, ಶಾಂತಿ ನೆಲೆಸಲಿ. ಉತ್ತಮ ಮಳೆ, ಬೆಳೆ ದೊರೆತು ಜನರು ಸಮೃದ್ಧ ಜೀವನ ನಡೆಸಲಿ ಎಂದು ಅವರು ಹಾರೈಸಿದರು. ಇಂತಹ ಜಾತ್ರೆಗಳು ನಮ್ಮ ಪರಂಪರೆ, ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ಪ್ರಮುಖವಾಗಿವೆ ಎಂದರು.
ಮದನಬಾವಿ ಗ್ರಾಮದಲ್ಲಿ ನಡೆದ ಶ್ರೀ ಗ್ರಾಮದೇವತೆಯ ಜಾತ್ರೆಯಲ್ಲಿ ಭಾಗವಹಿಸಿ, ದೇವಿಯ ದರ್ಶನ ಪಡೆದ ನಂತರ ಕೆನರಾ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಾತನಾಡಿದರು.
ಮಾಜಿ ಶಾಸಕ ಹಾಗೂ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಮಹಾಂತೇಶ ದೊಡ್ಡಗೌಡರ ಮಾತನಾಡಿ, "11 ವರ್ಷಗಳ ಬಳಿಕ ಜಾತ್ರೆ ನಡೆಯುತ್ತಿರು ವುದು ಗ್ರಾಮದ ಎಲ್ಲರಿಗೂ ಅಪಾರ ಸಂತೋಷ ತಂದಿದೆ. ಗ್ರಾಮದಿಂದ ಹೊರಗಡೆ ಉದ್ಯೋಗದಲ್ಲಿರುವವರೂ ಸಹ ಈ ಸಂದರ್ಭದಲ್ಲಿ ಊರಿಗೆ ಬಂದು ಜಾತ್ರೆಯಲ್ಲಿ ತನು, ಮನ, ಧನದಿಂದ ಭಾಗವಹಿಸುತ್ತಿರುವುದು ಗ್ರಾಮೀಣ ಬಾಂಧವ್ಯವನ್ನು ತೋರಿಸುತ್ತದೆ'' ಎಂದು ಹೇಳಿದರು. ಜಾತ್ರೆ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಪೂಜೆ, ಹೋಮ ಹವನ, ಭಜನೆ, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿದವು. ಗ್ರಾಮದ
ಬೀದಿಗಳು ವಿದ್ಯುತ್ ದೀಪಾಲಂಕಾರದಿಂದ ಮೆರೆಯುತ್ತಿದ್ದು, ಭಕ್ತರ ಸಂಭ್ರಮ, ಸಡಗರ ಎಲ್ಲೆಡೆ ಕಂಗೊಳಿಸುತ್ತಿತ್ತು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಶಿವಪ್ಪ ಗುಜನಾಳ, ಯಲ್ಲನಗೌಡ ದೊಡ್ಡಗೌಡರ, ಅಜ್ಜಪ್ಪ ಹಮ್ಮಿನಿ, ನಿಂಗನಗೌಡ ದೊಡ್ಡಗೌಡರ, ಈರನಗೌಡ ದೊಡ್ಡಗೌಡರ, ಚನಗೌಡ ಹಾದಿಮನಿ, ಬಸವರಾಜ ಬದ್ರಿ, ಸೋಮಪ್ಪ ಕೊಳದೂರ, ಶಂಕರಗೌಡ ಕೊಳದೂರ ಸೇರಿದಂತೆ ಜಾತ್ರಾ ಸಮಿತಿ ಸದಸ್ಯರು, ಗ್ರಾಮದ ಮುಖಂಡರು ಹಾಗೂ ಅನೇಕ ಗ್ರಾಮಸ್ಥರು ಉಪಸ್ಥಿತರಿದ್ದರು.