ರಾಜ್ಯದ ಬಜೆಟ್ ದಲ್ಲಿ 1.32 ಲಕ್ಷ ಕೋಟಿ ಸಾಲ ಮಾಡುವ ಮೂಲಕ ರಾಜ್ಯವನ್ನ ಸಾಲದ ಸುಳಿಗೆ ತಂದು 72ಸಾವಿರ ಕೋಟಿ ರೂಪಾಯಿ ಅಭಿವೃದ್ಧಿಗೆ ಮಿಸಲಿಟ್ಟು ಅಭಿವೃದ್ದಿ ಶೂನ್ಯ ಬಜೆಟ್ ಇದಾಗಿದ್ದು ಕೇವಲ ಅಲ್ಪಸಂಖ್ಯಾತರ ಅಭಿವೃದ್ಧಿ ಬಜೆಟ್ ಮಾಡಿ ರಾಜ್ಯದ ಇತರ ಜನಾಂಗಕ್ಕೆ ಚಂಬೂ ನೀಡಿದ 17ನೇ ದಾಖಲೆ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾದ ಸಿದ್ದರಾಮಯ್ಯನವರ ಸಾಧನೆಯಾಗಿದೆ. ಕೇವಲ ಅಲ್ಪಸಂಖ್ಯಾತರನ್ನ ಒಲೈಸಿಕೊಳ್ಳುವದಕ್ಕಾಗಿ
ಅಲ್ಪಸಂಖ್ಯಾತರ ಶಾಲೆಗಳನ್ನು
ಕೆಪಿಎಸ್ ಮಾದರಿಯಲ್ಲಿ
ಉನ್ನತೀಕರಣಕ್ಕೆ 1000 ಕೋಟಿ ರೂ. ಅಲ್ಪಸಂಖ್ಯಾತರ ವಸತಿ
ಶಾಲೆಗಳ ಆರಂಭ,ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಶೇಷ ತರಬೇತಿ
ಅಲ್ಪಸಂಖ್ಯಾತ ಕಾಲೋನಿಗಳ
ಮೂಲಸೌಕರ್ಯಕ್ಕೆ ನೂರಾರು ಕೋಟಿ ಮೀಸಲು
ಅಲ್ಪಸಂಖ್ಯಾಂತ ನಿರ್ಗತಿಕರಿಗೆ
ಎರಡು ವೃದ್ಧಾಶ್ರಮ ಆರಂಭ
ಅಲ್ಪಸಂಖ್ಯಾಂತ ನಿರುದ್ಯೋಗಿಗಳಿಗೆ
3 ಲಕ್ಷ ರೂ. ವರೆಗೆ ಸಹಾಯಧನ
ಅಲ್ಪಸಂಖ್ಯಾತ ಮಹಿಳೆಯರ
ಸ್ವ-ಉದ್ಯೋಗ ಪ್ರೋತ್ಸಾಹಕ್ಕೆ ಸೊಸೈಟಿ ಸ್ಥಾಪನೆ
ಹುಬ್ಬಳ್ಳಿ-ಕಲಬುರಗಿಯಲ್ಲಿ
ಹಜ್ ಭವನ ನಿರ್ಮಾಣ
ಅಲ್ಪಸಂಖ್ಯಾತ ನಿಗಮದ
ಸಾಲದ ಬಡ್ಡಿ ಮನ್ನಾ
ಅಲ್ಪಸಂಖ್ಯಾತ ಉದ್ಯೋಗಸ್ಥ
ಮಹಿಳೆಯರಿಗೆ 4 ಹಾಸ್ಟೆಲ್
ಅಲ್ಪಸಂಖ್ಯಾತ ಇಲಾಖೆಯಲ್ಲಿ
ಖಾಲಿ ಹುದ್ದೆಗಳ ಭರ್ತಿ
ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ
ಲ್ಯಾಪ್ ಟಾಪ್ ಖರೀದಿಗೆ ₹50 ಸಾವಿರ, ವಕ್ಫ್ ಆಸ್ತಿ ಅಭಿವೃದ್ಧಿಗೆ
ಹಣ ಮೀಸಲು ಹೀಗೆ ಅಲ್ಪಸಂಖ್ಯಾತರನ್ನ ಬಿಟ್ಟು ಬೇರೆ ಯಾವ ಜನಾಂಗವು ಮುಖ್ಯಮಂತ್ರಿಗಳಿಗೆ ಕಾಣದಾಗಿವೆ ಎಂದು ರಾಜ್ಯ ಬಿಜೆಪಿ ಮಾಧ್ಯಮ ಸಮಿತಿ ಸದಸ್ಯ ಎಫ್.ಎಸ್.ಸಿದ್ದನಗೌಡರ ಅಕ್ರೊಶ ವ್ಯಕ್ತಪಡಿಸಿದ್ದಾರೆ.