ಸಿದ್ದರಾಮಯ್ಯನವರ ರಾಜ್ಯ ಬಜೆಟ್ಟಿನಲ್ಲಿ ಬೆಳಗಾವಿ ಜಿಲ್ಲೆಗೆ ಸಿಕ್ಕಿದ್ದು...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0


ಡಾ.ಬಿ.ಆರ್.ಅಂಬೇಡಕರ್ ಅವರು ಭೇಟಿ ನೀಡಿದ್ದ ಜಿಲ್ಲೆಗಳಲ್ಲಿ ಅವರ ಹೆಸರಿನಲ್ಲಿ KREIS CBSE ವಸತಿ ಶಾಲೆ ಸ್ಥಾಪನೆ. ಈ ಶಾಲೆಗಳು ಕಲಬುರಗಿ, ವಿಜಯಪುರ, ಬೆಳಗಾವಿ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಆರಂಭವಾಗಲಿವೆ.


ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ‘ಪ್ರಜಾಸೌಧ’ ಕಟ್ಟಡ ನಿರ್ಮಾಣ.


ಬೆಳಗಾವಿ ಗ್ರಾಮಾಂತರ ಕ್ಷೇತದಲ್ಲಿ ಹೊಸ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸ್ಥಾಪನೆ.

ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳು

ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗಾಗಿ ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ 150 ಸಾಮರ್ಥ್ಯದ 50 ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳು ಆರಂಭ


ರಾಜ್ಯದಲ್ಲಿ 12 ಹೊಸ ಪೋಲೀಸ್ ಠಾಣೆಗಳನ್ನು ಸ್ಥಾಪಿಸುವ ಯೋಜನೆಯಡಿ ಬೆಳಗಾವಿ ಜಿಲ್ಲೆಯ ಯರಗಟ್ಟಿಯಲ್ಲಿ ಪೋಲೀಸ್‌ ಠಾಣೆ ಸ್ಥಾಪನೆ.


ಸುವರ್ಣ ವಿಧಾನಸೌಧ ವಿಧಾನಮಂಡಲ ಅಧಿವೇಶನದ ವೇಳೆ ಬಂದೋಬಸ್ತ್ ಕರ್ತವ್ಯದಲ್ಲಿರುವ ಸಿಬ್ಬಂದಿಗೆ ₹20 ಕೋಟಿ ವೆಚ್ಚದಲ್ಲಿ 1,000 ಮಂದಿಗೆ ಶಾಶ್ವತ ಬ್ಯಾರಕ್ ನಿರ್ಮಾಣ.


ರಾಮದುರ್ಗ ನಗರಕ್ಕೆ ಹೊಸ ಬಸ್ ನಿಲ್ದಾಣ ನಿರ್ಮಿಸಲು ಇಂದಿನ ದಿನದ 17ನೇ ಆಯವ್ಯಯ ಬಜೆಟ್ ಸಂದರ್ಭಲ್ಲಿ ಅನುಮೋದನೆ ನೀಡಿದ ರಾಜ್ಯ ಸರ್ಕಾರ.

ಕುರಿ-ಮೇಕೆ ಸಾಕಾಣಿಕೆ ಯೋಜನೆ
ಬೆಳಗಾವಿ ಮತ್ತು ಕಲ್ಬುರ್ಗಿಯ ವಿಭಾಗಗಳಲ್ಲಿ ಕುರಿ ಮತ್ತು ಮೇಕೆ ಸಾಕಾಣಿಕೆಯನ್ನು ಉತ್ತೇಜಿಸಲು ಆಯ್ದ 10,000 ಫಲಾನುಭವಿಗಳಿಗೆ ಶೇ.25 ಸಹಾಯಧನದಲ್ಲಿ ಕುರಿ/ಮೇಕೆ ಘಟಕಗಳು.

Post a Comment

0Comments

Post a Comment (0)