ನೇಸರಗಿ: ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಿ ಉತ್ತಮ ವಿದ್ಯಾರ್ಥಿಯಾಗಿ ಹೊರ ಹೊಮ್ಮಬೇಕು ಎಂದು ಬೆಳಗಾವಿ ವೈದ್ಯ ಡಾ। ಜಯಪ್ರಕಾಶ ಅಪ್ಪಾಜಿಗೋಳ ಹೇಳಿದರು.
ಗ್ರಾಮದ ಸರಕಾರಿ ಕುವೆಂಪು ಶತಮಾನೋತ್ಸವ ಮಾದರಿ ಶಾಲೆಯಲ್ಲಿ ನಡೆದ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುವೆಂಪು ಮಾದರಿ ಶಾಲೆ ಈ ಗ್ರಾಮದ ವಿದ್ಯಾರ್ಥಿಗಳ ಬಾಳಿಗೆ ಆಶಾಕಿರಣವಾಗಿ ಪರಿಣಮಿಸಿದೆ. ವಿದ್ಯಾರ್ಥಿಗಳು ಶಿಕ್ಷಕರು ಕಲಿಸುವ ಕಲಿಕೆಗೆ ಆದ್ಯತೆ ನೀಡಿ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.
ನಂತರ ವಿವಿಧ ಸಾಧಕರನ್ನು ಸತ್ಕರಿಸಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.
ಈ ವೇಳೆ ಗ್ರಾಪಂ ಮಾಜಿ ಅಧ್ಯಕ್ಷ ವೀರಭದ್ರ ಚೋಬಾರಿ, ನಿಂಗಪ್ಪ ತಳವಾರ, ಎಸ್‌ಡಿಎಂಸಿ ಅಧ್ಯಕ್ಷ ಸೋಮನಗೌಡ ಪಾಟೀಲ, ಡಾ। ಮಂಜುನಾಥ ಸೋಮನ್ನವರ, ನೇಸರಗಿ ಅರ್ಬನ್ ಬ್ಯಾಂಕ್ ಅಧ್ಯಕ್ಷೆ ಶೋಭಾ ದೊಡ್ಡಗೌಡರ, ಮುರಳಿ ಹಮ್ಮನ್ನವರ, ಈರಣ್ಣ ಹೊಂಡನ್ನವರ, ವಿಷ್ಣು ಮೂಲಿಮನಿ, ಪ್ರಕಾಶ ತೊಟಗಿ, ರಾಘು ಮದೆನ್ನವರ, ಯಮನಪ್ಪ ಪೂಜೇರಿ, ಸಿ.ವೈ. ಮೆಣಸಿನಕಾಯಿ, ಅಡಿವೆಪ್ಪ ಕಾರಜೋಳ, ವಿಶ್ವನಾಥ ಸೋಮ್ನನವರ, ಮಹಾದೇವ ಕರಾಳೆ ಸೇರಿದಂತೆ ಇತರರಿದ್ದರು.