ಉತ್ತರ ಕರ್ನಾಟಕದ ಆರಾಧ್ಯ ದೈವ ಶ್ರೀ ಉಳವಿ ಚನ್ನಬಸವೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆಯ ಪಾಟೋಳಿ ಕ್ರಾಸನಿಂದ ಗುಂದ ಮಾರ್ಗವಾಗಿ ಉಳವಿ ದೇವಸ್ಥಾನದವರೆಗೆ ರಸ್ತೆಯನ್ನು ಶೀಘ್ರ ದುರಸ್ತಿ ಗೊಳಿಸಬೇಕೆಂದು ಮನವಿ...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಉತ್ತರ ಕರ್ನಾಟಕದ ಆರಾಧ್ಯ ದೈವ ಶ್ರೀ ಉಳವಿ ಚನ್ನಬಸವೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆಯ ಪಾಟೋಳಿ ಕ್ರಾಸನಿಂದ ಗುಂದ ಮಾರ್ಗವಾಗಿ ಉಳವಿ ದೇವಸ್ಥಾನದವರೆಗೆ ರಸ್ತೆಯನ್ನು ಶೀಘ್ರ ದುರಸ್ತಿ ಗೊಳಿಸಬೇಕೆಂದು ಮಾನ್ಯ ಲೋಕೋಪಯೋಗಿ ಸಚಿವರು ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸತೀಶ ಜಾರಕಿಹೊಳಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ, ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕರಾದ ರಾಜು ಕುಡಸೋಮಣ್ಣವರ, ಬಸವರಾಜ ಬೋಳಗೌಡರ, ಲಿಂಗಾಯತ ಪಂಚಮಸಾಲಿ ಬೆಳಗಾವಿ ನಗರ ಘಟಕ ಅಧ್ಯಕ್ಷ ಶಿವಾನಂದ ತಂಬಾಕೆ,
ಹುಕ್ಕೇರಿ ತಾಲ್ಲೂಕ ಲಿಂಗಾಯತ ಪಂಚಮಸಾಲಿ ಅಧ್ಯಕ್ಷ ರವಿ, ರಾಜು ನಾಶಿಪುಡಿ, ರಮೇಶ ಯರಗಣ್ಣವರ, ಬಾಳು ಜಡಗಿ, ಗಂಗಾರಾಮ ಶೀಗೀಹಳ್ಳಿ, ಕುಮಾರ ಗಾಳಿ, ನಾಗರಾಜ ಲಕ್ಕಪ್ಪಗೌಡರ, ಜಗದೀಶ ಮಾಳಗಿ ಇನ್ನಿತರರು ಉಪಸ್ಥಿತರಿದ್ದರು.

Post a Comment

0Comments

Post a Comment (0)