ದೇಶದ ಮಾಜಿ ಪ್ರಧಾನಿ, ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಅವರ ನಿಧನಕ್ಕೆ ಕಿತ್ತೂರು ವಿಧಾನಸಭಾ ಕ್ಷೇತ್ರದ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.
ಮನಮೋಹನ್ ಸಿಂಗ್ ಅವರು ಪ್ರಧಾನ ಮಂತ್ರಿಯಾಗಿ, ಕೇಂದ್ರದ ಹಣಕಾಸು ಸಚಿವರಾಗಿ ರಾಷ್ಟ್ರಕ್ಕೆ ಸಲ್ಲಿಸಿದ ಸೇವೆ ಅನುಪಮವಾದದ್ದು. ಅವರ ಅವಧಿಯಲ್ಲಿ ದೇಶ ವಿಶ್ವದಲ್ಲಿ ಹೆಸರು ಮಾಡಿದ್ದನ್ನು ಷ,ಬ್ರ,ಡಾ//ವಿರಪ್ರಭು ಪಂಡಿತಾರಾಧ್ಯ ಶಿವಾಚಾರ್ಯ ಅಂಭಾಮಠ ನೇಸರಗಿ ಸ್ಮರಿಸಿಕೊಂಡರು.