ಚ ಕಿತ್ತೂರಿನ ಕಲ್ಮಠದ ರಾಜಗುರು ಶ್ರೀಗಳಿಗೆ 15 ನೆಯ ವರ್ಷದ ಪಠಾಧಿಕಾರ ಮಹೋತ್ಸವ...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಚನ್ನಮ್ಮನ ಕಿತ್ತೂರು:-ಕಿತ್ತೂರಿನ ರಾಜಗುರು ಪರಂಪರೆ ಮತ್ತು ಇತಿಹಾಸವನ್ನು ಹೊಂದಿರುವ ಶ್ರೀ ಕಲ್ಮಠಕ್ಕೆ ಪೀಠಾಧಿಕಾರಿಯಾಗಿ ಬಂದು ಸೇವೆ ಮಾಡುವ ಅವಕಾಶ ನನಗೆ ದೊರೆತಿರುವದು ಸೌಭಾಗ್ಯವಾಗಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಯಸುವೆನು ಎಂದು ಕಲ್ಮಠದ ಪೂಜ್ಯ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು ಸಂತಸ ವ್ಯಕ್ತಪಡಿಸಿದರು.ಅವರು ಕಿತ್ತೂರಿನ ಕಲ್ಮಠದ ಶ್ರೀ ಶಂಕರ ಚಂದರಗಿ ಸಭಾ ಭವನದಲ್ಲಿ ತಮ್ಮ 15 ನೆಯ ಪಟ್ಟಾಧಿಕಾರದ ವಾರ್ಷಿಕೋತ್ಸವದ ಪ್ರಯುಕ್ತವಾಗಿ ನಡೆದ ರಕ್ತದಾನ ಶಿಬಿರ ಮತ್ತು ಗುರುವಂದನಾ ಸಮಾರಂಭದಲ್ಲಿ ವಿವಿಧ ಸಂಘಟನೆಗಳಿಂದ ಗೌರವ ಸನ್ಮಾನ ಸ್ವೀಕರಿಸಿ ಆಶೀರ್ವಚನ ನೀಡುತ್ತಾ ಚನ್ನಮ್ಮನ ಕಿತ್ತೂರು ನಾವು ನಿರೀಕ್ಷಿಸಿದ ಹಾಗೆ ಅಭಿವೃದ್ಧಿ ಹೊಂದದೇ ಇರುವದಕ್ಕೆ ಬೇಸರ ವ್ಯಕ್ತ ಪಡಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಪೂಜ್ಯ ಮೃತ್ಯುಂಜಯ ಮಹಾಸ್ವಾಮಿಗಳು ಮಾತನಾಡಿ ಚನ್ನಮ್ಮಳ ಬಲಗೈ ಬಂಟನ ನಾಡಾದ ಸಂಗೊಳ್ಳಿ ತೀವ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವದಕ್ಕೆ ಸಂತಸ ವೈಕ್ತ ಪಡಿಸುತ್ತ ಚನ್ನಮ್ಮನ ಕಿತ್ತೂರಿನ ಅಭಿವೃದ್ಧಿ ಯ ಬಗೆಗೂ ಸರಕಾರ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಮತ್ತು ನಾಡಿನ ಜನತೆ ಗಮನ ಹರಿಸುವಂತೆ ಮನವಿ ಮಾಡಿದರು. ಶ್ರೀ ಮಠದ ಹಳೆಯ ವಿದ್ಯಾರ್ಥಿ ವೃಂದ,ರಾಜಗುರು ಕಾನ್ವೆಂಟ್ ಶಾಲೆ, ಕಿತ್ತೂರು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು, ಕಿತ್ತೂರು ಕರ್ನಾಟಕ ಸೌಹಾರ್ದ ಸಹಕಾರಿ ಸಂಘ ನಿ, ಕಿತ್ತೂರಿನ ಜಂಗಮ ಯುವ ವೇದಿಕೆ ಸಂಘ,ಬೆಳ್ಳಿ ಚುಕ್ಕಿ ಮತ್ತು ರಾಣಿ ಚನ್ನಮ್ಮ ಮಹಿಳಾವೆದಿಕೆ, ಕದಳಿ ಮಹಿಳ ವೇದಿಕೆ, ರಾಷ್ಟ್ರೀಯ ಬಸವ ದಳ,ವಿಶ್ವ ಹಿಂದೂ ಪರಿಷದ್ ಭಜರಂಗದಳ ಮತ್ತು ಚನ್ನಮ್ಮನ ಕಿತ್ತೂರಿನ ಗುರು ಹಿರಿಯರು ಶ್ರೀಗಳನ್ನು ಸನ್ಮಾನಿಸಿದರು.

ರೋಟರಿ ರಕ್ತ ಭಂಡಾರ ಧಾರವಾಡ ಮತ್ತು ರೋಟರಿ ಕ್ಲಬ್ ಮಿಟ್ಟಾನ್ ಚಾರಿಟೇಬಲ್ ಟ್ರಸ್ಟ್ ಇವರ ಸಹಯೊಗದೊಂದಿಗೆ ನಡೆದ ರಕ್ತದಾನ ಶಿಬಿರದಲ್ಲಿ ಸುಮಾರು 50 ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದ್ದು ಎಲ್ಲರ ಮೆಚ್ಚುಗೆಯನ್ನು ಪಡೆಯಿತು.ಶ್ರೀ ಈಶ್ವರ ಗಡಿಬಿಡಿ ಪ್ರಾರ್ಥಿಸಿದರು. ಶ್ರೀ ಮಂಜುನಾಥ ಕಳಸಣ್ಣವರ ಸ್ವಾಗತಿಸಿದರು. ಕಿತ್ತೂರು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಎಸ್.ಬಿ.ದಳವಾಯಿ ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ಪರಮ ಪೂಜ್ಯರು ಕಿತ್ತೂರಿಗೆ ಬಂದಾಗಿನಿಂದ ಅವರು ಮಾಡಿದ ಆದ್ಯಾತ್ಮಿಕ, ಶೈಕ್ಷಣಿಕ, ಧಾರ್ಮಿಕ ಕಾರ್ಯಗಳನ್ನು ಮೆಲಕು ಹಾಕುತ್ತಾ ರಕ್ತದಾನ ಪವಿತ್ರ ಕಾರ್ಯವಾಗಿದೆ ಎಂದು ತಿಳಿಸಿದರು. ಶ್ರೀಮತಿ ರಂಜನಾ ಬುಲಬುಲೆ ವಂದಿಸಿದರು. ಬಸವಪ್ರಭು ಪಾಟೀಲ ನಿರೂಪಿಸಿದರು.

Post a Comment

0Comments

Post a Comment (0)