ಬೆಳಗಾವಿ (ಶೆಗಣಮಟ್ಟಿ) - ಹುನಗುಂದ - ರಾಯಚೂರು ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ನಿರ್ಮಿಸುತ್ತಿರುವ ಚತುಷ್ಪಥ ರಸ್ತೆಯ ಕಾಮಗಾರಿಯ ಪ್ರಗತಿಯ ಕುರಿತು ತಿಳಿಯಲು ಬೆಳಗಾವಿ ಲೋಕಸಭಾ ಸದಸ್ಯರು ಹಾಗೂ ಕರ್ನಾಟಕ ರಾಜ್ಯದ ಮಾಜಿ ಮುಖ್ಯ ಮಂತ್ರಿಗಳಾದ ಶ್ರೀ ಜಗದೀಶ ಶೆಟ್ಟರ ಇವರು ಇಂದು ಸ್ಥಳಕ್ಕೆ ಭೇಟಿ ನೀಡಿ, ವೀಕ್ಷಿಸಿದರು.
ಬೆಳಗಾವಿ ಶೇಗಣಮಟ್ಟಿ ಗ್ರಾಮದ ಹತ್ತಿರದಿಂದ ಪ್ಯಾಕೇಜ -1 ರಡಿ 42 ಕಿ.ಮಿ ರಸ್ತೆ ಬ ನಿರ್ಮಾಣವಾಗುತ್ತಿದ್ದು, ಈ ಕಾಮಗಾರಿ ಸ್ಥಳ ವೀಕ್ಷಣೆಯನ್ನು ಸಂಸದರಾದ ಶ್ರೀ ಜಗದೀಶ ಶೆಟ್ಟರ ಇವರು ಕೈಕೊಂಡರು.
ಈ ಸಂದರ್ಭದಲ್ಲಿ ಬೆಳಗಾವಿ ಗ್ರಾಮೀಣ ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಸುಭಾಸ ಪಾಟೀಲ, ಬೆಳಗಾವಿ ಮಹಾನಗರ ಜಿಲ್ಲಾಧ್ಯಕ್ಷರಾದ ಶ್ರೀಮತಿ ಗೀತಾ ಸುತಾರ, ಪಕ್ಷದ ಮುಖಂಡರಾದ ಶ್ರೀ ಮಾರುತಿ ಜಿರಲಿ, ಶ್ರೀ ಆರ್.ಎಸ್ ಮುತಾಲಿಕ, ಶ್ರೀ ರಮೇಶ ದೇಶಪಾಂಡೆ ಶ್ರೀ ಮುರಗೇಂದ್ರಗೌಡ ಪಾಟೀಲ, ಹಾಗೂ ಇತರೆ ಪದಾಧಿಕಾರಿಗಳು ಭಾಗವಹಿಸಿದ್ದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಭಿಯಂತರರಾದ ಶ್ರೀ ಕಿಶೋರ ಮತ್ತು ಕಿರಿಯ ಅಧಿಕಾರಿಗಳು ಪ್ರಸ್ತಾಪಿತ ಯೋಜನೆಯ ವಿವರಗಳನ್ನು ಸಂಸದರಾದ ಶ್ರೀ ಜಗದೀಶ ಶೆಟ್ಟರ ಅವರೊಂದಿಗೆ ಹಂಚಿಕೊಂಡರು.