ಬೈಲಹೊಂಗಲದಲ್ಲಿ ಮಳೆ ಅವಾಂತರ,ನಗರ ಸಭೆ ನಿರ್ಲಕ್ಷಕ್ಕೆ ಯುವಕನ ಮನ ಕಲಕುವ ಪ್ರತಿಭಟನೆ.

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ನಗರ ಸಭೆ ನಿರ್ಲಕ್ಷಕ್ಕೆ ಯುವಕನ ಮನ ಕಲಕುವ ಪ್ರತಿಭಟನೆ.
 
ಬೈಲಹೊಂಗಲ ನಗರದ ಬಸ್ ನಿಲ್ದಾಣದ ಹಿಂಭಾಗದಲ್ಲಿನ ನಿವಾಸಿಗಳ ಕಣ್ಣೀರ ಕಥೆ ಇದು.
ಪ್ರತಿ ಬಾರಿ ಮಳೆಯಾದಾಗ ಇಲ್ಲಿ ವಾಸಿಸುವ ಜನರ ಸ್ಥಿತಿ ಹೇಳತೀರದಾಗಿದೆ.
ಮನೆಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಸುತ್ತಿದೆ.
ಅಲ್ಲದೇ ಮನೆಯಲ್ಲಿನ ವಸ್ತುಗಳು ಕೂಡ ನೀರುಪಾಲಾಗುತ್ತಿದೆ.
 ಪುರಸಭೆ ಇದ್ದಾಗಲೂ ಹಾಗೂ ಪ್ರಸ್ತುತ ನಗರಸಭೆಯಾದರೂ ಕೂಡ ಇಲ್ಲಿನ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಲು ಸಾಧ್ಯವಾಗಿಲ್ಲ.
ಇದರಿಂದಾಗಿ ಮನ ನೊಂದ ಈಶ್ವರ ಶಿಲ್ಲೇದಾರ ಎಂಬ ಯುವಕ ಪ್ರವಾಹಗಾತ್ರದಲ್ಲಿ ಹರಿದು ಬರುತ್ತಿರುವ ಕಳುಸಿತ ಮಳೆ ನೀರಲ್ಲಿ ಕುಳಿತು ಸುಮಾರು 3 ಗಂಟೆಗಳ ಕಾಲ ಪ್ರತಿಭಟನೆ ನಡೆಸಿರುವುದು ಮನ ಕಲಕುವಂತಿತ್ತು.
   ನಂತರ ಸ್ಥಳಕ್ಕೆ ಆಗಮಿಸಿದ ಪೌರಾಯುಕ್ತೆ ಶ್ರೀಮತಿ ಭಾಗ್ಯಶ್ರೀ ಹುಗ್ಗಿ ಅವರು ಶಾಶ್ವತ ಪರಿಹಾರದ ಭರವಸೆ ನೀಡಿದರು ಬಳಿಕ ಯುವಕ ಪ್ರತಿಭಟನೆ ಕೈಬಿಟ್ಟಿದ್ದಾನೆ.
 ಯುವಕನ ಪ್ರತಿಭಟನೆ ಈಗ ನಗರದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Post a Comment

0Comments

Post a Comment (0)