ಚನ್ನಮ್ಮನ ಕಿತ್ತೂರು ಇಂದು ಸಂಪೂರ್ಣ ಬಂದ್ ಆಗಲಿದೆ, ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಗೋ ಸಾಗಾಟ ಮತ್ತು ಗೋ ಹತ್ಯೆ ತಡೆಯುವ ಸಂದರ್ಭಗಳಲ್ಲಿ ಗೋ ರಕ್ಷಕರ ಮೇಲಾಗುತ್ತಿರುವ ಹಲ್ಲೆಗಳನ್ನು ಖಂಡಿಸಿ ಇಂದು ಸ್ವಯಂ ಪ್ರೇರಿತ ಕಿತ್ತೂರು ಬಂದುಗೆ ವಿಶ್ವ ಹಿಂದೂ ಪರಿಷತ್ ಬಜರಂಗದಳ ಸೇರಿದಂತೆ ಹಿಂದೂ ಪರ ಸಂಘಟನೆಗಳು ಕರೆ ನೀಡಿದೆ, ಮಾಜಿ ಶಾಸಕ ಮಹಂತೇಶ್ ದೊಡಗೌಡರ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ್ದು ಅನೇಕ ಹಿಂದೂ ಸಂಘಟನೆಗಳು ಹಾಗೂ ಹಿಂದುಗಳಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಚೆನ್ನಮ್ಮನ ಕಿತ್ತೂರಿನ ಕೋಟೆ ಮುಂಭಾಗದ ಅರಳಿಕಟ್ಟೆಯಿಂದ ಕಿತ್ತೂರು ಚೆನ್ನಮ್ಮನ ವೃತ್ತದ ವರೆಗೆ ಬೃಹತ್ ಪ್ರತಿಭಟನೆಯೊಂದಿಗೆ ತೆರಳಿ ತಾಲೂಕು ದಂಡಾಧಿಕಾರಿಗಳ ಮುಖಾಂತರ ಜಿಲ್ಲಾಧಿಕಾರಿಗೆ ಗೋ ರಕ್ಷಣಾ ಕಾಯ್ದೆ ಸಮರ್ಪಕವಾಗಿ ಜಾರಿಗೆಗೊಳಿಸಲು ಆಗ್ರಹಿಸಿ ಮನವಿ ನೀಡಲಾಗುವುದು ಎಂದು ತಿಳಿಸಿದ್ದಾರೆ.
3/related/default