ಬೈಲಹೊಂಗಲ-ನಗರದ ಬಿಇಓ ಕಛೇರಿ ಪಕ್ಕದಲ್ಲಿನ ಶಾಸಕರ ಮತಕ್ಷೇತ್ರ ಸರಕಾರಿ ಮಾದರಿ
ಹಿರಿಯ ಪ್ರಾಥಮಿಕ ಶಾಲೆಯು ಪಬ್ಲಿಕ್ ಶಾಲೆಯಾಗಿ ಆಯ್ಕೆಗೊಂಡಿದೆ.
ಈ ಕುರಿತು ಶನಿವಾರ ಶಾಲೆಯಲ್ಲಿ ಜರುಗಿದ ಎಸ್‍ಡಿಎಂಸಿ ಆಡಳಿತ ಮಂಡಳಿಯ ಸದಸ್ಯರ
ಸಭೆಯಲ್ಲಿ ಮುಖ್ಯೋಪಾಧ್ಯಾಯ ಕೆ.ಜಿ.ಭಜಂತ್ರಿ ಅವರು ಮಾಹಿತಿ ನೀಡಿ ಬರುವ ಜೂನ 1 ರಿಂದ
ರಾಜ್ಯಾದ್ಯಂತ ರಾಜ್ಯ ಸರಕಾರದಿಂದ ಸುಮಾರು ಒಂದು ಸಾವಿರ ಕೆಪಿಎಸ್ ಶಾಲೆಗಳು
ಆರಂಭವಾಗಲಿವೆ. ಅದರಲ್ಲಿ ನಮ್ಮ ಈ ಶಾಲೆಯು ಒಳಗೊಂಡಿರುವದು ನಮಗೆಲ್ಲರಿಗೂ ಹೆಮ್ಮೆಯ
ವಿಷಯವಾಗಿದೆ.
ಎಲ್‍ಕೆಜಿಯಿಂದ ಪಿಯುಸಿವರೆಗೆ ಒಂದೇ ಸೂರಿನಡಿ ವಿದ್ಯಾರ್ಥಿಗಳಿಗೆ ಶಿಕ್ಷಣ
ದೊರೆಯಲಿದ್ದು ಬೈಲಹೊಂಗಲ ತಾಲೂಕಿನ ಬಡ ವಿದ್ಯಾರ್ಥಿಗಳಿಗೆ ಸರಕಾರದ ಶಿಕ್ಷಣ ಇಲಾಖೆಯ ಈ
ಕ್ರಮ ತುಂಬಾ ಅನುಕೂಲವಾಗಲಿದೆ ಎಂದರು.
ಜೂನ 1 ರಂದು ಶಾಸಕ ಮಹಾಂತೇಶ ಕೌಜಲಗಿ ಅವರು ಮರು ನಾಮಕರಣಗೊಳಿಸಲಿದ್ದು ನಾಮ ಫಲಕ
ಉದ್ಘಾಟಿಸಲಿದ್ದಾರೆ. ಎಸ್‍ಡಿಎಂಸಿ ಅಧ್ಯಕ್ಷ ಅರ್ಜುನ ಕಲಕುಟಕರ ಸಭೆಯ ಅಧ್ಯಕ್ಷತೆ
ವಹಿಸಲಿದ್ದಾರೆ. ಬಿಇಓ ಎ.ಎನ್.ಪ್ಯಾಟಿ, ಕ್ಷೇತ್ರ ಸಮನ್ವಯಾಧಿಕಾರಿ ರವಿ ಹಿರೇಮಠ,
ಶಿಕ್ಷಣ ಸಂಯೋಜಕ ಮಹೇಶ ಯರಗಟ್ಟಿ, ಗಂಗಾಧರ ಕಾಮತರ, ಸಿಆರ್‍ಪಿಗಳಾದ ಎಸ್.ಐ.ಜನ್ಮಟ್ಟಿ,
ರಾಜು ಹಕ್ಕಿ, ಬಿಆರ್‍ಪಿಗಳಾದ ಪಿ.ವಾಯ್.ಶಿಂತ್ರಿ, ಎಸ್.ಎಸ್.ಶಿವನಾಯ್ಕರ,
ಯು.ಟಿ.ಕೊಲಾರಕೊಪ್ಪ ಹಾಗೂ ಎಸ್‍ಡಿಎಂಸಿ ಆಡಳಿತ ಮಂಡಳಿಯ ಸದಸ್ಯರು, ವಿದ್ಯಾರ್ಥಿಗಳ
ಪಾಲಕರು ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ
ಡಿ.ಎನ್.ಹಲಕಿ, ಶಿಕ್ಷಕ ಸಿ.ಎಸ್.ಧರೆಪ್ಪನವರ, ಎಸ್‍ಡಿಎಂಸಿ ಅಧ್ಯಕ್ಷ ಅರ್ಜುನ
ಕಲಕುಟಕರ, ಉಪಾಧ್ಯಕ್ಷ್ಯೆ ಗಂಗಮ್ಮ ಸಾಲಿ, ಸದಸ್ಯರಾದ ಗದಿಗೆಪ್ಪ ಮಡಿವಾಳರ, ಮಹಾಂತೇಶ
ರಾಜಗೋಳಿ, ರಾಮನಿಂಗ ಗೋಣಿ, ಭಾರತಿ ಬಾದಾಮಿ, ಪವಿತ್ರಾ ತಲ್ಲೂರ ಹಾಗೂ ಶಿಕ್ಷಕ ವೃಂದ
ಉಪಸ್ಥಿತರಿದ್ದರು. ಶಿಕ್ಷಕ ಸಂದೀಪ ಕುಲಕರ್ಣಿ ಸ್ವಾಗತಿಸಿದರು. ಶಿಕ್ಷಕ
ಎಸ್.ಬಿ.ನೇಸರಗಿ ನಿರೂಪಿಸಿದರು. ಎಸ್‍ಡಿಎಂಸಿ ಸದಸ್ಯ ಮಹಾಂತೇಶ ರಾಜಗೋಳಿ ವಂದಿಸಿದರು.
ಪೋಟೋ ಶೀರ್ಷಿಕೆ-ಬೈಲಹೊಂಗಲ ನಗರದ ಶಾಸಕರ ಮತಕ್ಷೇತ್ರ ಸರಕಾರಿ ಮಾದರಿ ಹಿರಿಯ
ಪ್ರಾಥಮಿಕ ಶಾಲೆಯು ಪಬ್ಲಿಕ್ ಶಾಲೆಯಾಗಿ ಆಯ್ಕೆಯಾಗಿದ್ದರ ಕುರಿತು ಮುಖ್ಯೋಪಾಧ್ಯಾಯ
ಕೆ.ಜಿ.ಭಜಂತ್ರಿ ಮಾಹಿತಿ ನೀಡಿದರು.
ವರದಿ - ಮಹಾಂತೇಶ ರಾಜಗೋಳಿ , ಬೈಲಹೊಂಗಲ