ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಸ್ಥಾಪಿಸಲಾಗಿದ್ದ ಹಲ್ಮಡಿ ಶಾಸನ ನಾಪತ್ತೆ!

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯ 
ಆವರಣದಲ್ಲಿ ಸ್ಥಾಪಿಸಲಾಗಿದ್ದ ಹಲ್ಮಡಿ ಶಾಸನ 
ನಾಪತ್ತೆ! ಕಸದಲ್ಲಿ ಬಿದ್ದಿರುವ ಶಾಸನದ ಕೆಳಗಿನ ಕಟ್ಟೆ!!
2024 ರ ರಾಜ್ಯೋತ್ಸವ ದಿನದಂದು ಬೆಳಗಾವಿ 
ಡಿಸಿ ಕಚೇರಿಯ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಉದ್ಘಾಟಿಸಿದ್ದ ಕನ್ನಡದ 
ಮೊದಲ ಶಾಸನ ಹಲ್ಮಿಡಿ ಶಾಸನವೇ ನಾಪತ್ತೇಯಾಗಿದೆ 
2024 ರ ಸಪ್ಟೆಂಬರ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ 
ಮಟ್ಟದ ಸಭೆಯಲ್ಲಿ ಕೈಕೊಂಡ ನಿರ್ಧಾರದಂತೆ ಎಲ್ಲ ಜಿಲ್ಲಾ 
ಕೇಂದ್ರಗಳಲ್ಲಿ ಈ ಶಾಸನದ ಪ್ರತಿಕ್ರಿತಿಯನ್ನು 
ಸ್ಥಾಪಿಸಲಾಗಿತ್ತು. ಅದರಂತೆ ಬೆಳಗಾವಿ ಡಿಸಿ ಕಚೇರಿಯ 
ಆವರಣದಲ್ಲಿಯೂ ಸ್ಥಾಪೀಸಲಾಗಿತ್ತು. ಆದರೆ ಡಿಸಿ 
ಕಚೇರಿಯ ನವೀಕರಣದ ಭರದಲ್ಲಿ ಶಾಸನವನ್ನು ಕಿತ್ತು 
ಎಸೆಯಲಾಗಿದೆ.
      ನಾಪತ್ತೇಯಾದ ಶಾಸನವನ್ನು ಹುಡುಕಲು ಇಂದು 
ಸೋಮವಾರ ಮುಂಜಾನೆ ಹಲವಾರು ಕನ್ನಡ 
ಸಂಘಟನೆಗಳ ಮುಖಂಡರು ಡಿಸಿ ಕಚೇರಿಯ 
ಆವರಣಕ್ಕ್ಕೆ ಹೋದಾಗ ಶಾಸನ ಕುಡಿಸಿದ್ದ ಕಟ್ಟೆ
ಕಸದಲ್ಲಿ ಸಿಕ್ಕಿತು. ಆದರೆ ಶಾಸನದ ಪ್ರತಿಕೃತಿ ಸಿಗಲಿಲ್ಲ 
ಇದರಿಂದ ಆಕ್ರೋಶಗೊಂಡ ಕನ್ನಡ ಮುಖಂಡರು ಡಿಸಿ ವಿರುದ್ಧ ಘೋಷಣೆ ಕೂಗಿದರು. ಇಂದು ವಾರದೊಳಗೆ ಮೊದಲು ಕುಡಿಸಿದ್ದ ಸ್ಥಳದಲ್ಲಿಯೇ ಶಾಸನವನ್ನು ಮರಳಿ 
ಕೂಡಿಸಬೇಕೆಂದು ಗಡುವು ನೀಡಿದರು.

Post a Comment

0Comments

Post a Comment (0)