ಗಂಡು ಮೆಟ್ಟಿನ ನಾಡು ಬೈಲಹೊಂಗಲದಲ್ಲಿ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕೆಚ್ಚೆದೆಯ ವೀರರಾಗಿ ಹೋರಾಡಿದ ರಾಣಿ ಚೆನ್ನಮ್ಮಾಜಿಯ ಸಮಾಧಿಗೆ ಅಗೌರವ ತೋರಿದ್ದಾರೆ, ಸಮಾಧಿಯನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಣೆಯಾಗಲಿ ಮತ್ತು ಸುಮಾರು 200 ಕೋಟಿ ಬಿಡುಗಡೆ ಮಾಡಬೇಕು, ಎಂದು ಬೈಲಹೊಂಗಲದ ಚನ್ನಮ್ಮ ಅಭಿಮಾನಿಗಳು ನಿರಂತರ ಹೋರಾಟವನ್ನು ನಡೆಸಿದ್ದಾರೆ, 15 ದಿನಕ್ಕೆ ಕಾಲಿಟ್ಟ ಧರಣಿಯಲ್ಲಿ ಮಾಜಿ ಶಾಸಕ ಡಾಕ್ಟರ್ ವಿಶ್ವನಾಥ್ ಪಾಟೀಲರು ಬರುವ ಅಧಿವೇಶನದಲ್ಲಿಯೇ ರಾಷ್ಟ್ರೀಯ ಸ್ಮಾರಕ ಘೋಷಣೆಯಾಗಲಿ ಅಲ್ಲಿಯವರೆಗೂ ನಮ್ಮ ಹೋರಾಟ ನಿರಂತರ ಎಂದು ತಿಳಿಸಿದರು.
ಶಾಸಕ ಮಹಾಂತೇಶ್ ಕೌಜಲಗಿ ಧರಣಿ ಸ್ಥಳಕ್ಕೆ ಭೇಟಿ ನೀಡಿದರು ಅವರ ಮಾತಿನ ಮೇಲೆ ಸ್ಪಷ್ಟತೆ ಕಾಣಲಿಲ್ಲ ಸರ್ಕಾರದ ಒಬ್ಬ ಪ್ರತಿನಿಧಿಯಾಗಿ ನಾನು ಚೆನ್ನಮ್ಮಾಜಿಯ ಸಮಾಧಿಗೆ ಎರಡು ನೂರು ಕೋಟಿ ಅನುದಾನ ತರಲು ಪ್ರಯತ್ನಿಸುತ್ತೇನೆ ಎಂದು ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಆಶ್ವಾಸನೆಯನ್ನು ನೀಡಿದ್ದಾರೆ ಆದಕಾರಣ ಹೋರಾಟ ನಿರತ ಚೆನ್ನಮ್ಮ ಅಭಿಮಾನಿಗಳು ಮಾರ್ಚ್ 27 ವರೆಗೆ ಸ್ಪಷ್ಟ ನಿರ್ಧಾರ ಬಾರದಿದ್ದರೆ ಮುಂದಿನ ಹೋರಾಟ ತೀವ್ರ ಗೊಳಿಸಲಾಗುವುದು ಎಂದು ಹೋರಾಟ ನಿರತ ಚೆನ್ನಮ್ಮ ಅಭಿಮಾನಿಗಳು ತಿಳಿಸಿದರು.
ಹೋರಾಟದ ವೇದಿಕೆಗೆ ಭೇಟಿ ನೀಡಿದ ಭಾರತೀಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಸಿದ್ದೇಗೌಡ ಮೋದಿ ಅವರು ಮಾತನಾಡಿ ವೀರರಾಣಿ ಕಿತ್ತೂರು ಚೆನ್ನಮ್ಮಜಿ ಅವರ ಸಮಾಧಿಯ ಅಭಿವೃದ್ಧಿಪಡಿಸುವಲ್ಲಿ ಸರ್ಕಾರ ನಿರ್ಲಕ್ಷ ಮಾಡಿದ್ದಾರೆ ಆದಕಾರಣ ಇದನ್ನು ತಕ್ಷಣ ಪರಿಗಣಿಸಿ ಅಭಿವೃದ್ಧಿಪಡಿಸುವಲ್ಲಿ ಸರಕಾರ ನಿರ್ಧಾರ ಕೈಗೊಳ್ಳದಿದ್ದಲ್ಲಿ ರಾಜ್ಯದ ರೈತರು ಸೇರಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಮಾತನಾಡಿದರು.
ಹೋರಾಟದ ವೇದಿಕೆಯಲ್ಲಿ ಸಾಮಾಜಿಕ ಹೋರಾಟಗಾರರಾದ ರಫೀಕ್ ಬಡೇಘರ ಕಿತ್ತೂರು ಕರ್ನಾಟಕ ರಕ್ಷಣಾ ವೇದಿಕೆಯ ಶಿವಾನಂದ ಕೋಲಕಾರ ಮಡಿವಾಳಪ್ಪ ಊಟಿ ರಾಜು ಭರಮಗೌಡ್ರ್ ಶ್ರೀಶೈಲ್ ಯಡಳ್ಳಿ ಅಶೋಕ್ ಗುಂಡ್ಲೂರು ಆನಂದ್ ಮೂಗಿ ವಿಜಯ್ ಪತ್ತಾರ್ ಸುರೇಶ್ ವಾಲಿ ಬಸವರಾಜ್ ನೇಸರಗಿ ಉಪಸ್ಥಿತರಿದ್ದರು.