ಬೈಲಹೊಂಗಲ: ವೀರರಾಣಿ ಕಿತ್ತೂರು ಚನ್ನಮ್ಮಾಜಿ
ಅಭಿವೃದ್ಧಿ ಪ್ರಾಧಿಕಾರಕ್ಕೆ 200 ಕೋಟಿ ಅನುದಾನ ನೀಡುವುದು ಹಾಗೂ ನವೀಕರಿಸಲಾದ ಸಮಾಧಿ ಸ್ಥಳವನ್ನು ಭವ್ಯವಾಗಿ ಮರು ಉದ್ಘಾಟಿಸಬೇಕೆಂದು ಆಗ್ರಹಿಸಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ 15ನೇ ದಿನಕ್ಕೆ ಕಾಲಿಟ್ಟಿದೆ.
ನಗರದ ರಾಯಣ್ಣ ವೃತ್ತದಲ್ಲಿ ನಡೆಯುತ್ತಿರುವ 14ನೇ ದಿನದ ಧರಣಿಗೆ ಟಾಟಾ ಏಸ್ ಚಾಲಕರು ಮತ್ತು ಮಾಲೀಕರ ಸಂಘ ಬೆಂಬಲ ಸೂಚಿಸಿ ನೇತೃತ್ವ ವಹಿಸಿಕೊಂಡಿದ್ದರು.
ಸಂಘದ ಮುಖಂಡರಾದ ಸಿದ್ದು ಕಣಬುರಗಿ ಹಾಗೂ ನಿಂಗಪ್ಪ ಪಾಟೀಲ ಮಾತನಾಡಿ, ಕಿತ್ತೂರು ರಾಣಿ ಚನ್ನಮ್ಮಾಜಿಯ ಸಮಾಧಿ ಸ್ಥಳವನ್ನು ರಾಷ್ಟ್ರೀಯ ಸ್ಮಾರಕವಾಗಿ ಘೋಷಿಸಬೇಕು ಎಂದು ಆಗ್ರಹಿಸಿದರು. ಜೊತೆಗೆ ಚನ್ನಮ್ಮಾಜಿಯ ಹೆಸರಿನಲ್ಲಿ ರಾಷ್ಟ್ರಮಟ್ಟದ ಸೈನಿಕ ಶಾಲೆ, ರಾಕ್ ಗಾರ್ಡನ್ ನಿರ್ಮಾಣ ಹಾಗೂ ಬೈಲಹೊಂಗಲದ ಸೆರೆಮನೆ ವಾಸ ಸ್ಥಳವನ್ನು ಅಭಿವೃದ್ಧಿಪಡಿಸುವಂತೆ ಒತ್ತಾಯಿಸಿದರು.
ಶಾಸಕರ ಭೇಟಿ: ಧರಣಿ ಸ್ಥಳಕ್ಕೆ ಭೇಟಿ ನೀಡಿದ ಶಾಸಕ
ಮಹಾಂತೇಶ ಕೌಜಲಗಿ ಪ್ರತಿಭಟನಾಕಾರರೊಂದಿಗೆ ಚರ್ಚೆ ನಡೆಸಿದರು. ಅವರು ಮಾತನಾಡಿ, ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಹಾಗೂ ಅಮಟೂರ ಬಾಳಪ್ಪಸೇರಿದಂತೆ ಅನೇಕ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗದಿಂದಲೇ ನಾವು ಇಂದು ಸ್ವತಂತ್ರ ಜೀವನ ನಡೆಸುತ್ತಿದ್ದೇವೆ ಎಂದು ಹೇಳಿದರು.
ಚನ್ನಮ್ಮಾಜಿಯ ಐಕ್ಯ ಸ್ಥಳವನ್ನು ಈಗಾಗಲೇ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾ ಗಿದೆ. ಯಾವುದೇತರಾತುರಿಯಲ್ಲಿ ಉದ್ಘಾಟನೆ ಮಾಡಿಲ್ಲ
ಬೈಲಹೊಂಗಲ: ರಾಯಣ್ಣ ವೃತ್ತದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಶಾಸಕ ಮಹಾಂತೇಶ ಕೌಜಲಗಿ ಭೇಟಿ ನೀಡಿ ಹೋರಾಟಗಾರರ ಜತೆ ಚರ್ಚಿಸಿದರು.
ಚನ್ನಮ್ಮಾಜಿಯ ಸಮಾಧಿ
ಅಭಿವೃದ್ಧಿಗಾಗಿ ನಡೆಯುತ್ತಿರುವ ಧರಣಿಗೆ ಭೇಟಿ ನೀಡಿ ಹೋರಾಟಗಾರರೊಂದಿಗೆ ಚರ್ಚೆ ನಡೆಸಿದ್ದೇನೆ. ಅವರ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಹೋರಾಟ ಕೈ ಬಿಡುವಂತೆ ವಿನಂತಿಸಲಾಗಿದೆ.
ಮಹಾಂತೇಶ ಕೌಜಲಗಿ, ಶಾಸಕರು,
ಎಂದು ಸ್ಪಷ್ಟಪಡಿಸಿದ ಅವರು, ರಾಷ್ಟ್ರೀಯ ಸ್ಮಾರಕ ಘೋಷಣೆಗೆ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಪತ್ರ ಕಳುಹಿಸಲಾಗಿದೆ. ಇನ್ನೂ ಹೆಚ್ಚಿನ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಕುರಿತು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದೆಂದು ಭರವಸೆ ನೀಡಿದರು.
ಹೋರಾಟಗಾರರ ಆಗ್ರಹ: ಹೋರಾಟಗಾರರಾದ
ಶಿವಾನಂದ ಕೋಲಕಾರ ಹಾಗೂ ರಫೀಕ ಬಡೇಘರ ಮಾತನಾಡಿ, ಚನ್ನಮ್ಮಾಜಿ ಅಭಿವೃದ್ಧಿ ಪ್ರಾಧಿಕಾರಕ್ಕೆ 200 ಕೋಟಿ ಅನುದಾನ ನೀಡಬೇಕು. ಐಕ್ಯ ಸ್ಥಳದ ಅಭಿವೃದ್ಧಿ ವಿಷಯವನ್ನು ಬಜೆಟ್‌ನಲ್ಲಿ ಚರ್ಚಿಸಬೇಕು. ಸಮಾಧಿ ಸ್ಥಳವನ್ನು ಭವ್ಯವಾಗಿ ಮರು ಉದ್ಘಾಟಿಸಬೇಕು ಎಂದು ಒತ್ತಾಯಿಸಿದರು.
ಅಲ್ಲದೇ ರಾಜ್ಯ ಸರಕಾರ ಚನ್ನಮ್ಮಾಜಿಯ ಐಕ್ಯ ಸ್ಥಳವನ್ನು ರಾಷ್ಟ್ರೀಯ ಸ್ಮಾರಕ ಘೋಷಣೆಗಾಗಿ ಸರ್ವಪಕ್ಷಗಳ ನಿಯೋಗವನ್ನು ಪ್ರಧಾನಮಂತ್ರಿಗಳ ಬಳಿ ಕೊಂಡೊಯ್ದು ಒತ್ತಡ ಹೇರಬೇಕೆಂದು ಸೂಚಿಸಿದರು.
ಹೋರಾಟದ ಮುಂದುವರಿಕೆ ಕುರಿತು ಮಾಜಿ ಶಾಸಕ ಡಾ. ವಿಶ್ವನಾಥ ಪಾಟೀಲ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ಸೇರಿದಂತೆ ಮುಖಂಡರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಹೋರಾಟ ಸಮಿತಿ ತಿಳಿಸಿದೆ. ಅಲ್ಲಿಯವರೆಗೆ ಧರಣಿ ಮುಂದುಮೆಯಲಿದೆ ಎಂದು ಸ್ಪಷ್ಟಪಡಿಸಿದೆ.