ಯುಪಿಎಸ್‌ಸಿ ಪರೀಕ್ಷೆಯಲ್ಲಿ 739ನೇ ರಾಂಕ್ ಪಡೆದ ಬಸವರಾಜ ಪಾಟೀಲ ಅವರಿಗೆ ಮೇಕಲಮರಡಿ ಗ್ರಾಮಸ್ಥರಿಂದ ಸನ್ಮಾನಿಸಲಾಯಿತು.

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ನೇಸರಗಿ : ಇಲ್ಲಿಗೆ ಸಮೀಪದ ಮೇಕಲಮರಡಿ ಗ್ರಾಮದ ನಿವಾಸಿ ( ಹೊಸೂರ ಗ್ರಾಮದ ) ಬಸವರಾಜ ಮಡಿವಾಳಪ್ಪ ಪಾಟೀಲ ಇವರು ದೇಶದ ಪ್ರತಿಷ್ಠಿತ ಯುಪಿಎಸಸಿ ಪರೀಕ್ಷೆಯಲ್ಲಿ 939 ರ್ಯಂಕ್ ಪಡೆದು ತೇರ್ಗಡೆಯಾಗಿ ಅಪಾರ ಸಾಧನೆ ಮಾಡಿದ್ದಾನೆ.
ಮೂಲತಃ ಇವರ ತಂದೆ ಹೊಸೂರ ಹಾಗೂ ಜಿಲ್ಲೆಯ ಅನೇಕ ಸ್ಥಳಗಳಲ್ಲಿ ಪ್ರಾಥಮಿಕ ಹಾಗೂ ಪ್ರಾಡಶಾಲೆ ಶಿಕ್ಷಕರಾದ ಮಡಿವಾಳಪ್ಪ ಮತ್ತು ಶಾಂತವ್ವ ಇವರ ಸುಪುತ್ರನಾದ ಬಸವರಾಜ ಪ್ರಾಥಮಿಕ ಶಿಕ್ಷಣವನ್ನು ಚಿಕ್ಕೋಡಿ ತಾಲೂಕಿನ ಕಬ್ಬುರಿನಲ್ಲಿ ಮಾಡಿ 6 ರಿಂದ 10 ನೇ ತರಗತಿವರೆಗೆ ಕೊಥಳಿ ಕುಪ್ಪನವಾಡಿ ಗ್ರಾಮದ ಜವಾಹರ ನವೋದಯ ಶಾಲೆಯಲ್ಲಿ ಕಲಿತು, ಧಾರವಾಡದಲ್ಲಿ ಪಿಯುಸಿ ವಿಜ್ಞಾನ ಕಲಿತು,ತದನಂತರ ಮಕ್ಯಾನಿಕ ಇಂಜಿನಿಯರಿಂಗ ಮುಗಿಸಿ, ತದನಂತರ ಯುಪಿಎಸಸಿ ಅಧ್ಯಯನಕ್ಕಾಗಿ ದೆಹಲಿಯ ವಾಜಿಬಾಯಿ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದು 4 ಸಲ ಪ್ರಲಿಮನರಿ, ಒಂದು ಸಲ ಐ ಎಫ್ ಎಸ್ ಫಲಿತಾಂಶದಲ್ಲಿ ದೇಶದಲ್ಲಿ 739 ರ್ಯಂಕ್ ಪಡೆದು ತೇರ್ಗಡೆ ಆಗಿ ಹುಟ್ಟಿದ ಊರ, ಬೆಳೆದ ಊರ ಕೀರ್ತಿ ತಂದಿದ್ದಾನೆ. ಈತನ ಸಾಧನೆಗೆ ಗ್ರಾಮಸ್ಥರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಶ್ರೀ ನಿಂಗಪ್ಪ ಅರಕೇರಿ ಅವರು ಮಾತನಾಡಿ ಗ್ರಾಮದ ಪ್ರತಿಷ್ಠಾ ಮನೆತನ ಭಾವೇಪ್ಪ ಗಣಾಚಾರಿ ಮನೆತನದ ಮಗಳಾದ ತಾಯಿ ಶಾಂತವ್ವ ಹಾಗೂ ತಂದೆ ಮಡಿವಾಳಪ್ಪ ಅವರ ಮಗ ಇವತ್ತು ನಮ್ಮ ಊರಿನ ಕೀರ್ತಿಯನ್ನು ತಂದಿದ್ದಾನೆ ದೇಶದಲ್ಲಿಯೇ ಗ್ರಾಮದ ಹೆಸರು ಕೊಂಡಾಡುವಂತೆ ಮಾಡಿದ್ದಾನೆ ಇದೇ ರೀತಿ ಗ್ರಾಮದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಭಾಗವಹಿಸಬೇಕು ಗ್ರಾಮದ ಕೀರ್ತಿ ಅಲ್ಲದೆ ತಂದೆ ತಾಯಿ ಹೆಸರನ್ನು ತರಬೇಕು ಎಂದು ಮಾತನಾಡಿದರು.
ವಾಯ್ ಆರ್ ಗುಡಿ ಶಿಕ್ಷಕರು ಮಾತನಾಡಿ ದೇಶದಲ್ಲಿಯೇ ಪ್ರತಿಷ್ಠೆ ಆಗಿರುವ ಪರೀಕ್ಷೆ ಇದಾಗಿದೆ ಇಂತಹ ಕಠಿಣ ಪರೀಕ್ಷೆಯಲ್ಲಿ 739ನೇ ರಾಂಕ್ ವಿದ್ಯಾರ್ಥಿಯಾಗಿ ಪಾಸಾಗಿದ್ದ ಬಸವರಾಜ್ ಪಾಟೀಲ್ ನಮ್ಮೂರಿನ ಹೆಮ್ಮೆಯ ಪುತ್ರರಾಗಿದ್ದಾನೆ ಎಂದು ಮಾತನಾಡಿದರು.
ಪತ್ರಕರ್ತರಾದ ಮಹಾಂತೇಶ ಹಿರೇಮಠ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು ಹಾಗೂ ಗ್ರಾಮದ ಯುವಕರಾದ ಅಲ್ತಾಫ್ ಮೋದಗಿ ವಂದಿಸಿದರು.
ಗ್ರಾಮದ ಹಿರಿಯರಾದ ಪೂಜ್ಯಶ್ರೀ ಶಿವಾನಂದ ಹಿರೇಮಠ ಬಿಮಶೇಪ್ಪ ಕಡೇಟ್ಟಿ ವಾಯ್ ಆರ್ ಗುಡಿ ಶಿಕ್ಷಕರು ಗ್ರಾಪಂ ಮಾಜಿ ಅಧ್ಯಕ್ಷರು ಗೌಡಪ್ಪ ಯರಡಾಲ ಮಾಜಿ ಸದಸ್ಯರು ಚಂದ್ರಯ್ಯ ಹಿರೇಮಠ ರಾಜು ಹಣ್ಣಿಕೆರಿ ಮಂಜುನಾಥ ಹುಲ ಮನಿ ಇಂಜಿನಿಯರ್ ನೇಮಣ್ಣ ಬೆಳವಲ ಪಿಕೆಪಿಎಸ್ ಅಧ್ಯಕ್ಷರು ಬಾಹುಬಲಿ ಟಗರಿ ಗ್ರಾಮದ ಹಿರಿಯರು ಮುಖಂಡರು ಯುವಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Post a Comment

0Comments

Post a Comment (0)