ಶುಕ್ರವಾರ ದಿನಾಂಕ 27-03-2026 ರಂದು ಗ್ರಾಮ ದೇವತೆಯ ಉಡಿ ತುಂಬುವ ಕಾರ್ಯಕ್ರಮವನ್ನು ಬುಡರಕಟ್ಟಿ ಗ್ರಾಮಸ್ಥರು ಗುರು ಹಿರಿಯರು ಸಂಘ ಸಂಸ್ಥೆಗಳು ಮತ್ತು ಸದ್ಭಕ್ತ ಮಂಡಳಿ ಹಾಗೂ ರೈತ ಬಾಂಧವರು ಕಟ್ಟಿ ಗ್ರಾಮದ ಮುತ್ತೈದಿಯರು ಸುತ್ತಮುತ್ತಲಿನ ಹಳ್ಳಿಗಳಿಂದ ಬಂದಿರುವ ತಾಯಂದಿರು ಹಾಗೂ ಭಕ್ತರು ಗ್ರಾಮ ದೇವತೆಯರನ್ನು ಉಡಿ ತುಂಬಿ ಭಕ್ತಿ ಭಾವ ಶ್ರದ್ಧೆಯಿಂದ ಗ್ರಾಮ ದೇವತೆಯರ ಸೇವೆಗೆ ಪಾತ್ರರಾದರು. ಅದು ಅಲ್ಲದೆ ಸಾಮೂಹಿಕ ವಿವಾಹಗಳು ಮಹಾಪ್ರಸಾದ ಶ್ರೀ ಗ್ರಾಮ ದೇವತೆಯರನ್ನು ಊರಲ್ಲಿ ಬರಮಾಡಿಕೊಳ್ಳುವುದು ಪ್ರತಿನಿತ್ಯ ಸಾಯಂಕಾಲ ಭಜನೆ ಡೊಳ್ಳಿನ ಪದಗಳು ಮನರಂಜನೆ ಕಾರ್ಯಕ್ರಮಗಳು ನಾಟಕಗಳು 20-03-2026 ರಿಂದ 30-03-2026 ರ ವರೆಗೆ 11 ದಿನಗಳ ಕಾಲ ಜಾತ್ರಾ ಮಹೋತ್ಸವ ನೆರವೇರಲಿದೆ.
ಬುಡರಕಟ್ಟಿ ಗ್ರಾಮದ ಗ್ರಾಮ ದೇವತೆಯರ ದಿ, 20 ರಿಂದ 30 ರ ವರೆಗೆ 11 ದಿನಗಳ ಕಾಲ ಜಾತ್ರಾ ಮಹೋತ್ಸವ ನೆರವೇರಲಿದೆ...
By -
March 27, 2026
0