ಶುಭ ಹಾಗೂ ಹಲವು ಅಶುಭ ಫಲಗಳಿರುವ ಭವಿಷ್ಯ ಈ ವರ್ಷ ಬಂದಿದ್ದು, ಸುಖ ಹಾಗೂ ದುಃಖದ ಸಮ್ಮಿಲನವಾಗಲಿದೆ.ಭವಿಷ್ಯ ನುಡಿದ ಬಬಲಾದಿ ಕಾಲಜ್ಞಾನ

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಏಳಾನೆ ಮುಂಗಾರು ಮಳೆ, ಒಂಭತ್ತು ಆನೆ ಹಿಂಗಾರು ಎಂದು ಭವಿಷ್ಯ ನುಡಿದ ಬಬಲಾದಿ ಕಾಲಜ್ಞಾನ ಭವಿಷ್ಯ.
ರಾಜಕಾರಣದಲ್ಲಿ ದೊಡ್ಡ ತಿರುವು ಎಂದು ನುಡಿದ ಸದಾಶಿವ ಮುತ್ಯಾನ ಮಠದ ಸ್ವಾಮೀಜಿ.
ಶುಭ ಹಾಗೂ ಹಲವು ಅಶುಭ ಫಲಗಳಿರುವ ಭವಿಷ್ಯ ಈ ವರ್ಷ ಬಂದಿದ್ದು, ಸುಖ ಹಾಗೂ ದುಃಖದ ಸಮ್ಮಿಲನವಾಗಲಿದೆ.
ವಿಜಯಪುರ: ಏಳಾನೆ ಮುಂಗಾರು ಮಳೆ, ಒಂಭತ್ತು ಆನೆ ಹಿಂಗಾರು. ರಾಜಕಾರಣದಲ್ಲಿ ದೊಡ್ಡ ತಿರುವು ಎಂದು ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಬಬಲಾದಿ ಸದಾಶಿವ ಮುತ್ಯಾನ ಮಠದ ಸ್ವಾಮೀಜಿ 2026ರ ಕಾಲಜ್ಞಾನ ಭವಿಷ್ಯ ನುಡಿದಿದ್ದಾರೆ.
ಪ್ರತಿ ವರ್ಷ ಈ ಬಾರಿಯೂ ಶಿವರಾತ್ರಿ ಅಮವಾಸ್ಯೆ ಹಿಂದೆ ಮುಂದೆ ಬಬಲಾದಿ ಜಾತ್ರೆ ನಡೆಯುತ್ತಿದೆ. ಈ ವೇಳೆ ಹೊಳೆಬಬಲಾದಿ ಪೀಠಾಧಿಪತಿ ಸಿದ್ಧರಾಮಯ್ಯ ಹೊಳಿಮಠ ಸ್ವಾಮೀಜಿ ಭವಿಷ್ಯ ನುಡಿದಿದ್ದು, ಈ ವರ್ಷದ ಫಲಾಫಲಗಳನ್ನು ತೆರೆದಿಟ್ಟಿದ್ದಾರೆ.
ರಾಜ್ಯ ರಾಜಕಾರಣಕ್ಕೆ ಹೊಸ ತಿರುವು!
ರಾಜಕೀಯ ಮತ್ತು ರಕ್ಷಣಾ ವಲಯದ ಬಗ್ಗೆಯೂ ಸದಾಶಿವ ಮುತ್ತಜ್ಜ ಮಹತ್ವದ ಸೂಚನೆ ನೀಡಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಹೊಸ ತಿರುವುಗಳು ಉಂಟಾಗಲಿವೆ ಎಂದಿರುವುದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ನಡುವೆ ನಡೆಯುತ್ತಿರುವ ಕುರ್ಚಿ ಫೈಟ್‌ ತಾರ್ಕಿಕ ಅಂತ್ಯ ಕಾಣುವ ಸಾಧ್ಯತೆ ಇದೆಯನ್ನು ತೆರೆದಿಟ್ಟಿದೆ.
ಅಷ್ಟೇ ಅಲ್ಲದೆ, ದೇಶದ ಗಡಿಭಾಗಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಲಿದ್ದು, ಯುದ್ಧದ ಕಾರ್ಮೋಡ ಕವಿಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಇದು ಪಾಕಿಸ್ತಾನ ಹಾಗೂ ಭಾರತದ ನಡುವಿನ ಸಂಘರ್ಷ ಮತ್ತಷ್ಟು ಹೆಚ್ಚುವ ಸಾಧ್ಯತೆ ಇರುವುದನ್ನು ತೋರಿಸಿದೆ. ಇದರ ಜೊತೆಗೆ ಜನ ಮತ್ತು ನಾಯಕರ ನಡುವೆ ಕಲಹ ಹೆಚ್ಚಾಗುವ ಮುನ್ಸೂಚನೆಯನ್ನೂ ಈ ಕಾಲಜ್ಞಾನ ನೀಡಿದೆ. ಆದರೆ, ಇವೆಲ್ಲದರ ನಡುವೆ ಒಂದು ಸಮಾಧಾನದ ಸಂಗತಿಯೆಂದರೆ, ದೇಶದ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಶ್ರೀಮಂತ ಮತ್ತು ಬಡವರ ನಡುವಿನ ಅಂತರದ ಸಮಸ್ಯೆಗಳು ಈ ವರ್ಷದಲ್ಲಿ ಕಡಿಮೆಯಾಗಲಿವೆ ಎಂಬ ಆಶಾದಾಯಕ ಮಾತು ಕಾಲಜ್ಞಾನದಲ್ಲಿ ಕೇಳಿಬಂದಿದೆ.

Post a Comment

0Comments

Post a Comment (0)