ಬೆಳವಡಿ: ವಿಶ್ವದಲ್ಲಿ ಪ್ರಥಮ ಮಹಿಳಾ ಸೈನ್ಯ ಕಟ್ಟಿ ನಾಡ ರಕ್ಷಣೆಗೆ ದಿಟ್ಟ ಹೋರಾಟ ನಡೆಸಿ ಇತಿಹಾಸ ಸೃಷ್ಟಿಸಿದ ರಾಣಿ ಮಲ್ಲಮ್ಮ ಉತ್ಸವ 2026 ಅದ್ದೂರಿಯಾಗಿ ಶನಿವಾರದಂದು ಜರುಗಿತು.
ಮಲ್ಲಮ್ಮನ ಉತ್ಸವದಲ್ಲಿ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಜಾನಪದ ಕಲಾತಂಡಗಳ ಮೆರವಣಿಗೆ ಮತ್ತು ಶಾಲಾ ಕಾಲೇಜುಗಳ ಮಕ್ಕಳ ರೂಪಕಗಳು ಜನರ ಕಣ್ಮನ ಸೆಳೆದವು.
ಬೆಳವಡಿ ಸಂಸ್ಥಾನ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಶ್ರೀ ಬಸವ ಜಯಂತಿಯ ಸ್ವಾಮೀಜಿ ರಾಣಿ ಮಲ್ಲಮ್ಮಳ ಶೌರ್ಯ ಸಾಹಸ ಪರಾಕ್ರಮದ ಇತಿಹಾಸ ಸೂರ್ಯ ಚಂದ್ರ ಇರುವರಿಗೂ ಅಜರಾಮರ ನಾಡು ನುಡಿ ರಕ್ಷಣೆಗೆ ಹೋರಾಡಿ ಮಾಡಿದ ರಾಣಿ ಮಲ್ಲಮ್ಮಳ ನಾಡಭಿಮಾನ ಎಲ್ಲರಿಗೂ ಸ್ಪೂರ್ತಿ ಎಂದರು.
ಮಲ್ಲಮ್ಮನ ಬೆಳವಡಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಕಲಾತಂಡಗಳ ಮೆರವಣಿಗೆ ಜನರ ಮನಸೂರೆಗೊಂಡು ನಾನಾ ತಂಡಗಳ ಕಲಾವಿದರು ಕಾಲಿಗೆ ಗೆಜ್ಜೆಕಟ್ಟಿಕೊಂಡು ಕುಣಿದರು.
ಮಲ್ಲಮ್ಮನ ಬೆಳವಡಿ ಪ್ರಾಧಿಕಾರ ಘೋಷಣೆಯಾಗಲಿ!
ಜಗತ್ತಿನಲ್ಲಿಯೇ ಮೊಟ್ಟಮೊದಲ ಮಹಿಳಾ ಸೈನ್ಯ ಕಟ್ಟಿ ನಾಡ ರಕ್ಷಣೆಗೆ ಹೋರಾಡಿದ ವೀರ ರಾಣಿ ಮಲ್ಲಮ್ಮಳ ಇತಿಹಾಸ ಇಡೀ ವಿಶ್ವಕ್ಕೆ ಗೊತ್ತಾಗಬೇಕು ಈ ಭಾಗದ ಸಮಗ್ರ ಅಭಿವೃದ್ಧಿ ರಾಜ್ಯ ಸರ್ಕಾರ ಶೀಘ್ರ ಬೆಳವಡಿ ಮಲ್ಲಮ್ಮ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿ ಬಜೆಟ್ಟಿನಲ್ಲಿ ಘೋಷಿಸಲಿ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸರಕಾರಕ್ಕೆ ಆಗ್ರಹಿಸಿದರು.
ರಾಣಿ ಮಲ್ಲಮ್ಮನ ಹೆಸರು ಅಜರಾಮರವಾಗಿ ಉಳಿಯಲು ಭಾರತೀಯ ಮಹಿಳಾ ಸೈನ್ಯದ ಒಂದು ರೆಜಿಮೆಂಟ್ಗೆ ವೀರರಾಣಿ ಮಲ್ಲಮ್ಮಳ ಹೆಸರಿಟ್ಟು ಗೌರವ ಸಲ್ಲಿಸಲು ರಕ್ಷನ ಸಚಿವ ರಾಜಾರಾತ್ ಸಿಂಗ್ ಹಾಗೂ ಕೇಂದ್ರ ಮಂತ್ರಿ ನಿತಿನ್ ಗಡ್ಗರಿ ಅವರಿಗೆ ಭೇಟಿ ಮಾಡಿ ಮನವಿ ಸಲ್ಲಿಸುತ್ತೇನೆ ಕೂಡಲಸಂಗಮ ಶ್ರೀಗಳು ಈ ಭಾಗದ ಜನಪ್ರತಿನಿಧಿಗಳು ಹಾಗೂ ಬೆಳವಡಿ ಪ್ರಮುಖರು ನಿಯೋಗ ಕರೆದುಕೊಂಡು ಇಬ್ಬರು ಸಚಿವರನ್ನು ಭೇಟಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಅಭಿವೃದ್ಧಿ ಪ್ರಾಧಿಕಾರ ರಚನೆ ಸಂಬಂಧ ಪ್ರತಿಪಕ್ಷ ನಾಯಕ ಆರ್ ಅಶೋಕ್ ಅವರಿಗೆ ಚರ್ಚಿಸಿ ಮುಖ್ಯಮಂತ್ರಿ ಎಂದು ತಿಳಿಸಿದರು.
ಜಾನಪದ ಕಲಾ ವಾಹಿನಿಯಲ್ಲಿ ಪ್ರತಿಯೊಂದು ಕಲಾ ತಂಡ ನೋಡುಗರಿಗೆ ಕಲಾ ರಸದೌತಣ ಉಣಬಡಿಸಿತು. ಗ್ರಾಮದ ಆದರ್ಶ ಶಿಕ್ಷಣ ಸಂಸ್ಥೆ ಸೇರಿದಂತೆ, ವಿವಿಧ ಶಾಲಾ ವಿದ್ಯಾರ್ಥಿಗಳಿಂದ ರೂಪಕ ಗಮನ ಸೆಳೆಯಿತು. ದಾರಿಯುದ್ದಕ್ಕೂ ಕಲಾ ತಂಡಗಳಿಗೆ ಮಜ್ಜಿಗೆ, ಬದಾಮ ಹಾಲು ವಿತರಿಸಲಾಯಿತು.
25ಕ್ಕೂ ಹೆಚ್ಚು ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಗ್ರಾಮಸ್ಥರು ಹಣೆಗೆ ತಿಲಕ, ಪೇಠ ತೊಟ್ಟು ಮೆರವಣಿಗೆಯಲ್ಲಿ ಸಾಗಿದರು. ಸುಮಂಗಲೆಯರು ಪೂರ್ಣಕುಂಭ ಹೊತ್ತು ಸಾಗಿ ಮೆರುಗು ಹೆಚ್ಚಿಸಿದರು.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಬೆಳವಡಿಯಲ್ಲಿ ಶನಿವಾರ ಆಚರಿಸಲಾದ ಬೆಳವಡಿ ಮಲ್ಲಮ್ಮ ರಾಣಿಯ 349ನೇ ವಿಜಯೋತ್ಸವ ಮೆರವಣಿಗೆಯಲ್ಲಿ, ರಾಜಾ ಈಶಪ್ರಭು ವೇಷದಲ್ಲಿ ಸ್ಫೂರ್ತಿ ಏಳಜೇರಿ ಹಾಗೂ ರಾಣಿ ಮಲ್ಲಮ್ಮನ ವೇಷದಲ್ಲಿ ಶ್ರೀದೇವಿ ಮಾರಿಹಾಳ ಕಂಗೊಳಿಸಿದರು. ಅವರ ಹಿಂದೆ ವಿಶ್ವದ ಮೊದಲ ಮಹಿಳಾ ಸೈನ್ಯದ ವೇಷಧಾರಿಗಳು ಹೆಜ್ಜೆ ಹಾಕಿದರು.
ಗ್ರಾಮದ ಮಲ್ಲಮ್ಮ ವೃತ್ತದಲ್ಲಿ ಶಾಸಕ ಮಹಾಂತೇಶ ಕೌಜಲಗಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸಂಸ್ಥಾನ ಧ್ವಜಾರೋಹಣ ನೆರವೇರಿಸಿದರು. ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಮಹಾಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಕೆಪಿಸಿಸಿ ಸದಸ್ಯೆ ರೋಹಿಣಿ ಪಾಟೀಲ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಮಾಡಲಗಿ, ಉಪವಿಭಾಗಾಧಿಕಾರಿ ಪ್ರವೀಣ ಜೈನ್, ತಹಶೀಲ್ದಾರ ಹನುಮಂತ ಶೀರಹಟ್ಟಿ ಡೊಳ್ಳು ಬಾರಿಸುವ ಮೂಲಕ ಜಾನಪದ ಕಲಾ ಮೇಳಕ್ಕೆ ಚಾಲನೆ ನೀಡಿದರು. ಕಲಾ ತಂಡಗಳ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮರಳಿ ಮಲ್ಲಮ್ಮ ವೃತ್ತಕ್ಕೆ ಬಂದು ತಲುಪಿತು.