ಬೈಲಹೊಂಗಲದ ಮುರಗೋಡ ರಸ್ತೆಯಲ್ಲಿನ ನೀರಾವರಿ ಇಲಾಖೆಯ ಆವರದಲ್ಲಿರುವ ಪಂಚವಟಿಯ ಶ್ರೀ ಈಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ನಿಮಿತ್ಯ ರವಿವಾರ ಭಕ್ತರು ವಿಶೇಷ ಪೂಜೆ ಪ್ರಾರ್ಥನೆ, ಅಭಿಷೆಕ, ಸಹಸ್ರ ಮಂತ್ರ ಪಠಣ ನೆರವೇರಿಸಿದರು. ದೇವಾಲಯದ ವತಿಯಿಂದ ಪ್ರಸಾದ್ ಏರ್ಪಡಿಸಲಾಗಿತ್ತು.
ನೀರಾವರಿ ಇಲಾಖೆ ಸಹಾಯಕ ಅಭಿಯಂತರ ಎ, ಎಂ ಶೇಖ್, ವೇ ಮೂ. ರವಿ ಯರಜರ್ವಿಮಠ್, ಶೋಭಾ ಯರಜರ್ವಿಮಠ್, ವಿರೂಪಾಕ್ಷ ವಾಲಿ, ಶಿವಯೋಗಿ ಕೋಟಗಿ, ಸಿದ್ದನಗೌಡ ಪಾಟೀಲ, ಜಿ ಡಿ ಎಸ್ ಮುಖಂಡ ಶಂಕರ್ ಮಾಡಲಗಿ, ತಾಲೂಕು ಕಜಾಪ ವಕ್ತಾರ ಮಹಾಂತೇಶ ರಾಜಗೋಳಿ ಈ ಸಂಧರ್ಭದಲ್ಲಿ ಉಪಸ್ತಿತರಿದ್ದರು.