ವೀರರಾಣಿ ಕಿತ್ತೂರು ಚನ್ನಮ್ಮನವರ ರಾಕ್ ಗಾರ್ಡನ್ ನಿರ್ಮಾಣ ಹಾಗೂ ಬೈಲಹೊಂಗಲ ನಗರದಲ್ಲಿ ಚಮ್ನಮ್ಮನವರ ಹೆಸರಿನಲ್ಲಿ ಅಂತರಾಷ್ಟ್ರೀಯ ಸೈನಿಕ ಶಾಲೆ ಸ್ಥಾಪನೆ ಮಾಡುವದಾಗಿ 2026ಬಜೆಟ್ ನಲ್ಲಿ ಘೋಷಿಸುಬೆಕು...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
*ವೀರ ರಾಣಿ ಕಿತ್ತೂರು ಚನ್ನಮ್ಮನವರ ಸ್ಮರಣೋತ್ಸವ ಸಮಿತಿ ಬೈಲಹೊಂಗಲ*
___________________
ಉಪವಿಭಾಗಧಿಕಾರಿಗಳು ಬೈಲಹೊಂಗಲ ಇವರ ಮೂಲಕ
ಮಾನ್ಯ ಮುಖ್ಯಮಂತ್ರಿಗಳು, ಹಣಕಾಸು ಸಚಿವರು
 ಕರ್ನಾಟಕ ಸರ್ಕಾರ ಇವರಿಗೆ,
ಸಲ್ಲಿಸುವ 
                       "ಮನವಿ ಪತ್ರ"
ವಿಷಯ: ವೀರರಾಣಿ ಕಿತ್ತೂರು ಚನ್ನಮ್ಮನವರ ರಾಕ್ ಗಾರ್ಡನ್ ನಿರ್ಮಾಣ ಹಾಗೂ ಬೈಲಹೊಂಗಲ ನಗರದಲ್ಲಿ ಚಮ್ನಮ್ಮನವರ ಹೆಸರಿನಲ್ಲಿ ಅಂತರಾಷ್ಟ್ರೀಯ ಸೈನಿಕ ಶಾಲೆ ಸ್ಥಾಪನೆ ಮಾಡುವದಾಗಿ 2026ಬಜೆಟ್ ನಲ್ಲಿ ಘೋಷಿಸುವ ಕುರಿತು.

ಸನ್ಮಾನ್ಯರೆ,
    ಬೈಲಹೊಂಗಲ ನಾಡಿನ ಸಮಸ್ತ‌ ದೇಶಾಭಿಮಾನಿಗಳ ಪರವಾಗಿ ತಮ್ಮಲ್ಲಿ ವಿನಂತಿ ಏನೆಂದರೆ,
ಸೂರ್ಯಮುಳಗದ ಸಾಮ್ರಾಜ್ಯ ಕಟ್ಟಿದ್ದ ಬ್ರಿಟಿಷ್‌ ರಿಗೆ ಪ್ರಪಂಚದಲ್ಲಿ‌ ಮೊಟ್ಟಮೊದಲಿಗೆ ಸೋಲಿನ‌ ರುಚಿ ತೊರಿಸಿದ್ದ ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿ ಚುಕ್ಕಿ, ದೇಶದ ಪ್ರಥಮ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ರಾಷ್ಟ್ರಮಾತೆ ವೀರರಾಣಿ ಕಿತ್ತೂರ ಚನ್ನಮ್ಮ‌ನನವರ ಕಿತ್ತೂರು ಕೋಟೆ, ಜನ್ಮಸ್ಥಳ ಕಾಕತಿ, ಐಕ್ಯಸ್ಥಾನ ಬೈಲಹೊಂಗಲ ಸೇರಿದಂತೆ ಸುಮಾರು 30ಸ್ಥಳಗಳ ಅಭಿವೃದ್ಧಿಗಾಗಿ 18ವರ್ಷಗಳ ಹಿಂದೆ ಸ್ಥಾಪನೆಯಾದ,
*ಕಿತ್ತೂರು ಪ್ರಾಧಿಕಾರಕ್ಕೆ ಈ ವರ್ಷದ ಬಜೆಟ್ ದಲ್ಲಿ ಕನಿಷ್ಠ 200ಕೋಟಿರೂಪಾಯಿ ನೀಡಬೇಕು ರಾಜ್ಯ ಸರ್ಕಾರ‌ ಒಂದು ಕಣ್ಣಿಗೆ ಬೆಣ್ಣಿ ಮತ್ತೊಂದು ಕಣ್ಣಿಗೆ ಸುಣ್ಣ ಹಾಕಿ ಮಲತಾಯಿ ಧೋರಣೆ ತಾಳುವದನ್ನು ತೀವ್ರವಾಗಿ ಖಂಡಿಸುತ್ತೆವೆ*
18ವರ್ಷಗಳಲ್ಲಿ ಯಾವುದೆ ಅಭಿವೃದ್ಧಿ ಪರವಾದ ಕಾರ್ಯಗಳನ್ನು ಕಾಣದೆ ಆಮೆಗತಿಯಲ್ಲಿ ಸಾಗುತ್ತಿವೆ. 18 ವರ್ಷದಿಂದ ಪ್ರಾಧಿಕಾರಕ್ಕೆ 43ಕೋಟಿ 75 ಲಕ್ಷ ರೂಪಾಯಿ‌ ಅನುದಾನ ಕೋಟೆ ಪುನರ್ಜಿವನಕ್ಕೆ ಅಲ್ಪ ಮೊತ್ತ ನೀಡಿದ್ದನ್ನು ಬಿಟ್ಟರೆ ಏನು ಇಲ್ಲಾ. ಸರ್ಕಾರಗಳು 10ವರ್ಷದ ಪ್ರಾಧಿಕಾರಕ್ಕೆ 350ಕೋಟಿಗಿಂತ‌ ಹೆಚ್ಚಿನ‌ ಹಣ ನೀಡಿದ್ದಿರಿ ಇದು ಸ್ವಾಗತಾರ್ಹ. ಆದರೆ ತಾಯಿಯ ಸ್ಥಾನದಲ್ಲಿದ್ದು ಸರ್ವಸ್ವವನ್ನೂ ತನ್ನ ಪ್ರಜೆಗಳಿಗಾಗಿ ದಾರೆ ಎರೆದು ಪ್ರಾಣ ತ್ಯಾಗಮಾಡಿದ ವೀರರಾಣಿ ಚನ್ದಮ್ಮನವರ ಪ್ರಾಧಿಕಾರದ ಬಗ್ಗೆ ಅಸಡ್ಡೆ ತೊರುವದಲ್ಲದೆ ಈ ಬಜೆಟ್ ನಲ್ಲಿ 200ಕೋಟಿ ಅನುದಾನ ನೀಡದೆ ಹೋದರೆ ಉಗ್ರವಾಗಿ ಖಂಡಿಸುತ್ತೆವೆ.

 ಸರ್ಕರದ ಮಲತಾಯಿ ಧೋರಣೆಯಿಂದ ವೀರರಾಣಿ ಚನ್ನಮ್ಮನವರ ಅಭಿಮಾನಿಗಳಿಗೆ ನೋವುಂಟು ಮಾಡಿದ್ದಿರಿ. ಅಂದು ಬ್ರಿಟೀಷರಿಂದ ಪಡಬಾರದ ಕಷ್ಟ ಅನುಭವಿಸಿದ ತಾಯಿ ಚನ್ನಮ್ಮನವರಿಗೆ ಇಂದಿನ ಪ್ರಜಾಪ್ರಭುತ್ವ ಸರ್ಕಾರ ಬ್ರೀಟಿಷ್ ಸರ್ಕಾರದಂತೆ ನಡೆದುಕೊಳ್ಳುತ್ತಿರುವದು ರಾಷ್ಟ್ರಮಾತೆಗೆ ತೋರಿದ ಅಗೌರವ. ಜನ್ಮಭೂಮಿ ಕಾಕತಿಯಲ್ಲಿ‌ ಚನ್ನಮ್ಮನ ಮೂರ್ತಿಯೊಂದನ್ನು ಬಿಟ್ಟರೆ ಅವರ ಜನ್ಮಸ್ಥಾನದಲ್ಲಿ ಒಂದೆ ಒಂದು ಅಭಿವೃದ್ಧಿ ಇಲ್ಲಾ. ಕಿತ್ತೂರು ಉತ್ಸವ ಒಂದನ್ನು ಬಿಟ್ಟರೆ ಕೋಟೆಯ ರಕ್ಷಣೆಯಾಗಲಿ ಇನ್ನುವರೆಗೆ ನಡೆದಿಲ್ಲ. ಐಕ್ಯಸ್ಥಾನ ಬೈಲಹೊಂಗಲದಲ್ಲಿ ಕಳೆದ 10ವರ್ಷದಿಂದ ಆಮೆಗತಿಯಲ್ಲಿ ಅಲ್ಪಸ್ವಲ್ಪ ಕಾರ್ಯ ನಡೆದಿದ್ದು ಅದನ್ನು ಯಾವದೆ ಗೌರವ ಕೊಡದೆ ತುರಾತುರಿಯಲ್ಲಿ ಉದ್ಘಾಟನೆ ನಡೆಸಿರುವದು ಚನ್ನಮ್ಮನ ಅಭಿಮಾನಿಗಳಿಗೆ ನೋವನ್ನುಂಟು ಮಾಡಿದ್ದಿರಿ. ರಾಜ್ಯ ಮತ್ತು ರಾಷ್ಟ್ರ ಮಟ್ಟದ ನಾಯಕರಿಲ್ಲದೆ ಐಕ್ಯಸ್ಥಳ ಉದ್ಘಾಟನೆ ಈ ಭಾಗದ ದುರ್ಧೈವ .‌
ತಕ್ಷಣ ಸರ್ಕಾರ ಕಿತ್ತೂರು ಪ್ರಾಧಿಕಾರಕ್ಕೆ ಕನಿಷ್ಠ 200ಕೋಟಿ ಅನುದಾನ ನೀಡಬೇಕು. ಚನ್ನಮ್ಮನ ಐಕ್ಯಸ್ಥಾನ ಬೈಲಹೊಂಗಲದಲ್ಲಿ ಅಂತರಾಷ್ಟ್ರೀಯ ಬಾಲಕಿಯರ ಸೈನಿಕ ಶಾಲೆ ತೆರೆಯಬೇಕು. ಕಿತ್ತೂರ ಮತ್ತು ಬೈಲಹೊಂಗಲದಲ್ಲಿ ಚನ್ನಮ್ಮನ ವೀರ ಜೀವನದ ರಾಕ್ ಗಾರ್ಡನ್ ಕನಿಷ್ಠ ನೂರುಕೋಟಿ ರೂಪಯಿಗಳಲ್ಲಿ ನೂರಾರೂ ಎಕರೆ ಪ್ರದೇಶದಲ್ಲಿ ಅಭಿವೃದ್ಧಿ ಪಡಿಸಬೇಕು.
ಕಿತ್ತೂರು ಕೋಟೆಯನ್ನು ಮರು ಸೃಷ್ಟಿಸುವದು ಹೇಳಿಕೆಯಾಗದೆ ಕಾರ್ಯಪ್ರವರ್ತರಾಗಬೇಕು. ಪ್ರಾಧೀಕಾರದಲ್ಲಿ ಹೇಳಿದ ಮರಡಿ ದಿಬ್ಬ, ಕಲ್ಮಠ,‌ನಿಚ್ಚನಕಿ ಸೇರಿದಂತೆ‌ 30ಸ್ಥಳಗಳ ಅಭಿವೃದ್ಧಿ ಮಾಡಲು ಕ್ರಮ ಕೈಗೊಳ್ಳಬೇಕು. 
ಕಳೆದ ವರ್ಷ ಅನುದಾನ ನೀಡದ ಸರ್ಕಾರದ ಕ್ರಮ‌ ಖಂಡಿಸಿ ಮಾ18ರಂದು ಬೈಲಹೊಂಗಲ ಪಟ್ಟಣವನ್ನು ಎಲ್ಲ ಮಠಾಧೀಶರ ನೇತೃತ್ವದಲ್ಲಿ ವೀರರಾಣಿ ಚನ್ನಮ್ಮನವರ ಅಭಿಮಾನಿಗಳು ಬಂದ ಮಾಡಿ ಅಕ್ರೋಶ ವ್ಯಕ್ತಪಡಿಸಿರುವದು ಮರೆಯಬಾರದು. ಮತ್ತೊಮ್ಮೆ ಅಂತಹ ಅವಕಾಶ ನೀಡಬಾರದೆಂದು ತಮಗೆ ಎಚ್ಷರಿಕೆ ನೀಡುತ್ತೆವೆ. ಬಜೆಟ್ ನಲ್ಲಿ ಕಿತ್ತೂರು ಪ್ರಾಧಿಕಾರಕ್ಕೆ ಕನಿಷ್ಠ 200ಕೋಟಿ ಹಣ ಅನುದಾನ ನೀಡುವದಾಗಬೇಕು ಎಂದು ಮನವಿ ಸಲ್ಲಿಸಲಾಯಿತು.

Post a Comment

0Comments

Post a Comment (0)