_ಫೆಬ್ರುವರಿ ೨೮ ಮಾರ್ಚ್ ೧ ರಂದು ಎರಡು ದಿನಗಳ ಕಾಲ ಮಲ್ಲಮ್ಮನ ಉತ್ಸವ ಡೇಟ್ ಫಿಕ್ಸ್_* ವೀರರಾಣಿ ಬೆಳವಡಿ ಮಲ್ಲಮ್ಮನ ಸ್ಮಾರಕ ಭವನದಲ್ಲಿ ದಿನಾಂಕ ೦೫/0೨/೨೦೨೬ ರಂದು ಉತ್ಸವದ ಪೂರ್ವಭಾವಿ ಸಭೆ.

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
*_ಫೆಬ್ರುವರಿ ೨೮ ಮಾರ್ಚ್ ೧ ರಂದು ಎರಡು ದಿನಗಳ ಕಾಲ ಮಲ್ಲಮ್ಮನ ಉತ್ಸವ ಡೇಟ್ ಫಿಕ್ಸ್_* ವೀರರಾಣಿ ಬೆಳವಡಿ ಮಲ್ಲಮ್ಮನ ಸ್ಮಾರಕ ಭವನದಲ್ಲಿ ದಿನಾಂಕ ೦೫/0೨/೨೦೨೬ ರಂದು ಉತ್ಸವದ ಪೂರ್ವಭಾವಿ ಸಭೆ ನೆರವೇರಿತು ಕ್ಷೇತ್ರದ ಶಾಸಕ ಮಾಂತೇಶ್ ಕೌಜಲಗಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು ಮಲ್ಲಮ್ಮನ ಉತ್ಸವವನ್ನು ಸಮಗ್ರ ಅಭಿವೃದ್ಧಿಗಾಗಿ ಸರ್ಕಾರದಿಂದ 75 ಲಕ್ಷ ಅನುದಾನ ಬಿಡುಗಡೆಯಾಗಿದೆ ಇನ್ನು 25 ಲಕ್ಷ ರೂಪಾಯಿ ಉತ್ಸವಕ್ಕೆ ಬೇಡಿಕೆಯನ್ನು ಸಲ್ಲಿಸಲಾಗಿದೆ ಎಂದು ಹೇಳಿದರು ಸರ್ಕಾರದ ಮಟ್ಟದಲ್ಲಿ ಸಹಕಾರ ದೊರೆಯಲಿದೆ ಎಂದು ಭರವಸೆ ನೀಡಿದರು ಮಲ್ಲಮ್ಮನ ಉತ್ಸವಕ್ಕೆ ಶಾಶ್ವತ ಜಾಗವನ್ನು ಗುರುತಿಸಲಾಗಿದ್ದು ಈ ವರ್ಷದಿಂದಲೇ ಮೂಲಸೌಕರ್ಯ ಕಾರ್ಯ ಅಭಿವೃದ್ದಿ ಕಾರ್ಯಗಳು ಪ್ರಾರಂಭಿಸಲಾಗುತ್ತದೆ ಮುಂದಿನ ವರ್ಷಗಳಲ್ಲಿ ಉತ್ಸವದಲ್ಲಿ ಹೆಚ್ಚಿನ ಸೌಲಭ್ಯದೊಂದಿಗೆ ಜನೋತ್ಸವ ರೂಪವನ್ನು ನೀಡಲಾಗುತ್ತದೆ ಎಂದು ಹೇಳಿದರು ಉತ್ಸವವನ್ನು ಯಶಸ್ವಿಯಾಗಿ ವ್ಯವಸ್ಥಿತವಾಗಿ ನಡೆಸುವ ಸಲುವಾಗಿ ವಿವಿಧ ಕಾರ್ಯಗಳಿಗೆ ಉಪಕಮೀ ಟಿಗಳನ್ನು ಆಯೋಜಿಸಲಾಗಿದೆ ಮಲ್ಲಮನ ಇತಿಹಾಸ ಶೌರ್ಯ ಪರಾಕ್ರಮ ರಾಜ್ಯಮಟ್ಟದಲ್ಲಿ ಪರಿಚಯಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು ಜಿಲ್ಲಾಧಿಕಾರಿ ಮೊಮ್ಮದ್ ರೋಷನ್ ಅಧ್ಯಕ್ಷತೆ ವಹಿಸಿ ಮಾತನಾಡಿದರು ಫೆಬ್ರುವರಿ 28 ಮಾರ್ಚ್ 01 ರಂದು ಎರಡು ದಿನಗಳ ಕಾಲ ಮಲ್ಲಮ್ಮನ ಉತ್ಸವ ಅದ್ದೂರಿಯಾಗಿ ಆಚರಿಸಲಾಗುತ್ತದೆ ಕಲಾಕಾರರು ನೃತ್ಯ ತಂಡಗಳು ಸಾಹಿತಿಗಳನ್ನು ಆಹ್ವಾನಿಸಲಾಗುತ್ತದೆ ಸುತ್ತ ಮುತ್ತಲಿನ ಗ್ರಾಮಗಳ ಜನತೆ ಉತ್ಸವಕ್ಕೆ ಭಾಗವಹಿಸಿ ಮೆರಗು ತರಬೇಕೆಂದು ಮನವಿ ಮಾಡಿಕೊಂಡರು ಇದೇ ವೇಳೆ ಊರಿನ ಗ್ರಾಮಸ್ಥರು ಮಲ್ಲಮ್ಮನ ವೀರ ಜ್ಯೋತಿಯನ್ನು ಬೆಂಗಳೂರು ವಿಧಾನಸೌದದಿಂದ ಮಲ್ಲಮ್ಮನ ವೀರ ಜ್ಯೋತಿಯನ್ನು ಮಲ್ಲಮ್ಮನ ಬೆಳವಡಿಗೆ ತರಬೇಕೆಂದು ಊರಿನ ಗ್ರಾಮಸ್ಥರು ಡಿಸಿ ಸರ್ ಗೆ ಮನವಿಮಾಡಿಕೊಂಡರು ಅದು ಅಲ್ಲದೆ ಮಲ್ಲಮ್ಮನ ಪ್ರಾಧಿಕಾರ ಆಗುವ ಕುರಿತು ಮನವಿ ಮಾಡಿಕೊಂಡರು ಬೆಂಗಳೂರು ಅಧಿವೇಶನ ನಡೆಯುತ್ತಿದೆ , ಬಜೆಟ್ ಮಂಡನೆ ಮಾಡುತ್ತಿದ್ದಾರೆ ತುಂಬಾ ಸಂತೋಷದ ವಿಚಾರ ಕೆಲಸ ಪ್ರೋಸೆಸಿಂಗ್ ನಲ್ಲಿದೆ ಎಂದು ಆಶ್ವಾಸನೆ ನೀಡಿದರು ಉಪ ವಿಭಾಗ ಅಧಿಕಾರಿ ಪ್ರವೀಣ್ ಕುಮಾರ ಜೈನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾಶ್ರೀ ಭಜಂತ್ರಿ ಡಿವೈಎಸ್ಪಿ ವೀರಯ್ಯ ಹಿರೇಮಠ್ ಉತ್ಸವ ಸಮಿತಿ ಸದಸ್ಯರು ಊರಿನ ಗ್ರಾಮಸ್ಥರು ಸೇರಿದಂತೆ ಉಪಸ್ಥಿತರು ಪೂರ್ವಭಾವಿ ಸಭೆಯನ್ನು ಯಶಸ್ವಿಗೊಳಿಸಿದರು *_ವರದಿ:ಶಿವಾನಂದ ಕಿಲ್ಲೇದಾರ_*

Post a Comment

0Comments

Post a Comment (0)