ಮೇಕಲಮರಡಿ
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸುಕ್ಷೇತ್ರ ಮೇಕಲಮರಡಿ ಗ್ರಾಮದ ಶ್ರೀ ಗ್ರಾಮ ದೇವತೆಗಳ ದೇವಸ್ಥಾನದಲ್ಲಿ ನವರಾತ್ರಿ ನಿಮಿತ್ಯವಾಗಿ ಹಮ್ಮಿಕೊಂಡಿರುವ 79 ನೇ ವರ್ಷದ ಶ್ರೀದೇವಿ ಪಾರಾಯಣ ಮತ್ತು ಪುರಾಣ ಕಾರ್ಯಕ್ರಮವನ್ನು ನವರಾತ್ರಿಯ ಒಂಬತ್ತು ದಿನಗಳ ಕಾಲ ದಿನಾಂಕ 3 -10-2024 ನೆರವೇರಿಸಲಾಗುವುದು.
ವಿಶೇಷವಾಗಿ ಈ ಗ್ರಾಮದಲ್ಲಿ ಮೂರು ಗ್ರಾಮಗಳು ಇದ್ದು ಮೇಕಲಮರಡಿ ಉಜ್ಜಾನಟ್ಟಿ ಕಲಕುಂಪಿ ಗ್ರಾಮಗಳ ಕೂಡಿದ್ದು ಈ ಗ್ರಾಮಗಳಿಗೆ ಮೂರು ಗ್ರಾಮ ದೇವತೆಯರು ಇದ್ದು ಎಂಬುವುದನ್ನು ಹಿರಿಯರಿಂದ ತಿಳಿದು ಬಂದಿದೆ.
ಅದರಲ್ಲಿ ಒಂದು ಗ್ರಾಮ ದೇವತೆಯರನ್ನು ಪಕ್ಕದ ದೇಶನೂರು ಗ್ರಾಮಕ್ಕೆ ಹಿರಿಯರು ನೀಡಿರುತ್ತಾರೆ. ಇನ್ನುಳಿದ ಎರಡು ಗ್ರಾಮ ದೇವತೆಯ ದೇವಸ್ಥಾನದಲ್ಲಿ ಪ್ರತಿಷ್ಠಾಪನೆಗೊಂಡಿರುವ ಗ್ರಾಮ ದೇವತೆಯರ ನವರಾತ್ರಿ ಉತ್ಸವ ಅತಿ ವಿಜ್ರಂಭಣೆಯಿಂದ ಗ್ರಾಮದ ಸರ್ವ ಜನಾಂಗದವರು ಸೇರಿ ನೆರವೇರಿಸುತ್ತಾ ಬಂದಿರುತ್ತಾರೆ.
ಅದರಂತೆ ವಿಶೇಷವಾಗಿ ಪ್ರಥಮವಾಗಿ ಗ್ರಾಮದ ಹಿರೇಮಠದ ಸ್ವಾಮಿಗಳಾದ ಶ್ರೀ ದುಂಡಯ್ಯ ತಮ್ಮಯ್ಯ ಹಿರೇಮಠ ಅವರಿಂದ ಪ್ರಾರಂಭವಾಗಿ ತದನಂತರ ಗದಗದಿಂದ ಬಂದಿರುವ ಸ್ವಾಮಿಗಳಿಂದ ಮುಂದುವರಿಸಿ ಹಾಗೂ ಅವರಾದ ನಂತರ ಪಕ್ಕದ ಸೋಮನಟ್ಟಿ ಗ್ರಾಮದ ಶ್ರೀ ದುಂಡಯ್ಯ ರಾಚಯ್ಯ ಹಿರೇಮಠ ನೆರವೇರಿಸಿದರು ಅವರಾದ ನಂತರ ನಂತರ ಶ್ರೀ ಬಸವಣ್ಣಪ್ಪ ಚ ಕಂಬಾರ ಹಾಗೂ ಇವರ ನಂತರ ಈಗ ಶ್ರೀ ಬಸಯ್ಯ ಶಿವಲಿಂಗಯ್ಯ ಹಿರೇಮಠ್ ಅವರು ನೆರವೇರಿಸುತ್ತಾ ಬಂದಿರುತ್ತಾರೆ, ಈ ರೀತಿಯಾಗಿ ಸತತ 79 ವರ್ಷಗಳ ಕಾಲ ಇತಿಹಾಸದ ಅಚ್ಚಳಿಯಾಗಿ ಉಳಿಯುವಂತೆ ದೇವಿಯ ಪುರಾಣ ಹಾಗೂ ಪಾರಾಯಣ ಕಾರ್ಯಕ್ರಮವನ್ನು ಗ್ರಾಮದ ಗುರು ಹಿರಿಯರು ಹಾಗೂ ಸರ್ವ ಜನಾಂಗದ ಜನತೆಯು ಕೂಡಿಕೊಂಡು ಒಗ್ಗಟ್ಟಿನಿಂದ ನವರಾತ್ರಿಯ ಉತ್ಸವವನ್ನು ವಿಜೃಂಭಣೆಯಿಂದ ನೆರವೇರಿಸುತ್ತಾ ಬಂದಿರುತ್ತಾರೆ.
ಮೇಕಲಮರಡಿ ಗ್ರಾಮ ದೇವತೆಯ ದೇವಸ್ಥಾನದಲ್ಲಿ ಶ್ರೀ ಬಸಯ್ಯ ಶಿವಲಿಂಗಯ್ಯ ಹಿರೇಮಠ ಹಾಗೂ ಕಲಕುಂಪ್ಪಿ ಗ್ರಾಮದ ದೇವಿಯ ದೇವಸ್ಥಾನದಲ್ಲಿ ಶ್ರೀ ದುಂಡಯ್ಯ ರುದ್ರಯ್ಯ ಹಿರೇಮಠ ದೇವಿಯ ಪಾರಾಯಣ ಹಾಗೂ ಪುರಾಣ ಕಾರ್ಯಕ್ರಮವನ್ನು ಇಂದಿನಿಂದ ಪ್ರತಿ ಒಂಬತ್ತು ದಿನಗಳ ಕಾಲ ಸರಿಯಾಗಿ 8 ಗಂಟೆಯಿಂದ 9 ಗಂಟೆಯವರೆಗೆ ಶ್ರೀ ದೇವಿ ಪುರಾಣ ಕಾರ್ಯಕ್ರಮವನ್ನು ಪ್ರಾರಂಭ ಮಾಡುತ್ತಿದ್ದು ಗ್ರಾಮದ ಸಕಲ ಸದ್ಭಕ್ತರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಗ್ರಾಮ ದೇವತೆಗಳ ಆಶೀರ್ವಾದವನ್ನು ಪಡೆದುಕೊಂಡು ಮಹಾಪ್ರಸಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಾಗಿ ತಮ್ಮಲ್ಲಿ ವಿನಂತಿಸಿದ್ದಾರೆ.
ವರದಿ ಮಹಾಂತೇಶ ಹಿರೇಮಠ.