**ಬೈಲಹೊಂಗಲ ನಗರದಲ್ಲಿ (ಜೂನ 8) ರಂದು ಸುಮಾರು 2 ಘಂಟೆಗಳ ಕಾಲ ಸುರಿದ ಮಳೆಯಿಂದ ಜನರ ಜೀವನ ಸಂಪೂರ್ಣ ಅಸ್ತವ್ಯಸ್ತ ವಾಗಿತ್ತು .✍️*

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಬೈಲಹೊಂಗಲ ನಗರದಲ್ಲಿ ಸೋಮವಾರ (ಜೂ. 8) ಸುಮಾರು ಎರಡು ಗಂಟೆಗಳ ಕಾಲ ಸುರಿದ ಬಾರೀ ಮಳೆಯಿಂದ ಜನರ ಜೀವನ ಅಸ್ತವ್ಯಸ್ತವಾಯಿತು ಅಷ್ಟೇ ಅಲ್ಲದೆ ಇಂಚಲ ಕ್ರಾಸ್ ಬಸ್ ನಿಲ್ದಾಣ ಪ್ರದೇಶ ಸಂಗೊಳ್ಳಿ ರಾಯಣ್ಣ ವೃತ್ತ ಬಸ್ ನಿಲ್ದಾಣ ಕಿಲ್ಲೆದಾರ್ ಗಲ್ಲಿ ಹುಡೆದ ಭಾಂವಿ ಹಾಗೂ ಬಾಗವಾನ ಚಾಳ ಸೇರಿದಂತೆ ಪ್ರಮುಖ ಭಾಗಗಳಲ್ಲಿ ಮಳೆ ನೀರು ರಸ್ತೆ ಮೇಲೆ ಹರಿದು ಜಲಾವೃತಗೊಂಡವು ಕೆಲವೆಡೆ ಮೊಣಕಾಲುವರೆಗೆ ನೀರು ನಿಂತು ವಾಹನ ಸವಾರರಿಗೆ ಒಂದು ಊರಿಂದ ಮತ್ತೊಂದು ಊರಿಗೆ ಸಂಚರಿಸಲು ತುಂಬಾ ತೊಂದರೆ ಉಂಟಾಯಿತು . ಮಳೆ ನೀರಿನ ರಭಸಕ್ಕೆ ದ್ವಿಚಕ್ರ ವಾಹನಗಳು ಕೂಡ ತೇಲಿ ಹೋಗುವಂತ ನಿರ್ಮಾಣವಾಯಿತು ವಾಹನದ ಮಾಲೀಕರು ನೀರಿನಲ್ಲಿ ತೇಲಿ ಹೋಗದಂತೆ ಹರಸಾಹಸ ಪಟ್ಟರು ಅದು ಅಲ್ಲದೆ ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿ ನಷ್ಟ ಉಂಟಾಯಿತು ಸೋಮವಾರ ಸಂತೆಯಲ್ಲಿ ಅಂತೂ ನೀರಿನ ರಭಸಕ್ಕೆ ವ್ಯಾಪಾರಸ್ಥರು ತಮ್ಮ ವಸ್ತುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಹರಸಾಹಸ ಪಟ್ಟರು ಘಟನೆ ಕುರಿತು ಮಾಹಿತಿ ಪಡೆದ ನಗರ ಸಭೆ ಪೌರಾಯುಕ್ತೆ ಭಾಗ್ಯಶ್ರೀ ಹುಗ್ಗಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು ನಂತರ ಮಳೆ ನೀರು ಸರಾಗವಾಗಿ ಹರಿಯಲು ಚರಂಡಿ ಸ್ವಚ್ಛತಾ ಕಾರ್ಯ ಕೈಕೊಳ್ಳಲಾಯಿತು ಮುಂದಿನ ದಿನಗಳಲ್ಲಿ ಇಂತಹ ಪರಿಸ್ಥಿತಿ ಮರುಕಳಿಸದಂತೆ ಶಾಶ್ವತ ಒಳಚರಂಡಿ ವ್ಯವಸ್ಥೆ ರೂಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು ✍️
ಬೈಲಹೊಂಗಲ ವರದಿ:ಶಿವಾನಂದ ಕಿಲ್ಲೇದಾರ

Post a Comment

0Comments

Post a Comment (0)