ಬೆಳಗಾವಿ ಜಿಲ್ಲೆ ಬೆಳಗಾವಿ ತಾಲೂಕಿನ ಕುಕಡೊಳ್ಳಿ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ಹನುಮಾನ ಜಯಂತಿ ಹಾಗೂ ಮಹಾರಥೋತ್ಸವ ಕಾರ್ಯಕ್ರವನ್ನು ಕುಕಡೊಳ್ಳಿಯ ಹನುಮಾನ ಸೇವಾ ಸಮಿತಿಯ ಸದಸ್ಯರು ಗುರು ಹಿರಿಯರು ಈ ಜಾತ್ರೆಗೆ ಹಗಲು ಇರುಳು ಶ್ರಮಿಸುತ್ತಿರುವ ಶ್ರಮಜೀವಿಗಳು ಪೂರ್ವಭಾವಿ ಸಿದ್ಧತೆ ನಡೆಸುತ್ತಿದ್ದಾರೆ. ಅದು ಅಲ್ಲದೆ ಸಾಧು ಸಂತರು ಜಾತ್ರೇಗೆ ಆಗಮಿಸಲಿದ್ದಾರೆ ಹಾಗೂ ಈ ಜಾತ್ರಾ ಮಹೋತ್ಸವವನ್ನು ಸನ್ಮಾನ್ಯ ಶ್ರೀಮತಿ ಲಕ್ಷ್ಮಿ ಆರ್ ಹೆಬ್ಬಾಳ್ಕರ್ ಮಕ್ಕಳ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹಳಿ ಇವರಿಂದ ಉದ್ಘಾಟನಾ ಸಮಾರಂಭ ಜರಗಲಿವೆ. ಪರಮಪೂಜ್ಯಶ್ರೀ ಅಭಿನವ ಚೆನ್ನಮಲ್ಲಯ್ಯ ಸ್ವಾಮಿಗಳು ಇವರಿಂದ ಮಹಾರಥೋತ್ಸವಕ್ಕೆ ಕಳಸಾರೋಹಣ ಮತ್ತು ಚೆನ್ನಮಲ್ಲಯ್ಯ ಭಜನಾ ಸಂಘದ ಕಲಾವಿದರಿಂದ ಶಿವ ಭಜನೆ ಹೋಮ ಹವನ ಪೂಜಾ ವಿಧಿ ವಿಧಾನಗಳಿಂದ 01/04/2026 ರಿಂದ05/04/2026 ಜಾತ್ರಾ ಮಹೋತ್ಸವ ಹಾಗೂ ಮಹಾ ರಥೋತ್ಸವ ಅತಿ ವಿಜೃಂಮಣೆಯಿಂದ ನೆರವೇರಲಿದೆ.
*ಬೆಳಗಾವಿ ಜಿಲ್ಲೆ ಬೆಳಗಾವಿ ತಾಲೂಕಿನ ಕುಕಡೊಳ್ಳಿ ಗ್ರಾಮದಲ್ಲಿ ಹನುಮಾನ ಜಯಂತಿಯ ಜಾತ್ರಾ ಮಹೋತ್ಸವ ಹಾಗೂ ಮಹಾ ರಥೋತ್ಸವ ಕಾರ್ಯಕ್ರಮ ಪೂರ್ವಭಾವಿ ಸಿದ್ಧತೆ ✍️*
By -
March 26, 2026
0