ಬೈಲಹೊಂಗಲ ತಾಲೂಕು ಗುಡಿಕಟ್ಟಿ ಗ್ರಾಮದಲ್ಲಿ ಮಂಗಳವಾರ ದಿನಾಂಕ:17/03/2026 ರಂದು ಅಡವಿ ಸಿದ್ದೇಶ್ವರ ಗದ್ದುಗೆ ಹಾಗೂ ಹೊಸ ಮೂರ್ತಿಯನ್ನು ಪೂಜಾ ವಿಧಿ ವಿಧಾನಗಳ ಮುಖಾಂತರ ಪ್ರತಿಷ್ಠಾಪನೆ ಮಾಡಲಾಯಿತು. ಅಡವಿ ಸಿದ್ದೇಶ್ವರ ಜಾತ್ರಾ ಮಹೋತ್ಸವವನ್ನು ಅದ್ದೂರಿಯಾಗಿ ಊರಿನ ಗುರು ಹಿರಿಯರು ಯುವಕರು ಭಕ್ತಿಯ ಸೇವೆ ಶಿವ ಭಜನೆ ಪಲ್ಲಕ್ಕಿ ಉತ್ಸವ ಊರಿನ ಮುತ್ತೈದಿಯರು ಕುಂಭಮೇಳದೊಂದಿಗೆ ಜಾತ್ರಾ ಮಹೋತ್ಸವಕ್ಕೆ ಮೆರಗು ಮೂಡಿಸಿದರು. ಇದರ ಪೂರ್ವದಲ್ಲಿ ಸೋಮವಾರ ದಿನಾಂಕ 16/03/2026 ರಂದು ರಾತ್ರೀ 10:00 pm ಗಂಟೆ ವೇಳೆಗೆ ಖ್ಯಾತ ಭಜನಾ ಕಲಾವಿದ ದೇಗಾವಿ ಪರಶುರಾಮ ಅವರ ಕಲಾ ತಂಡ ಶಿವ ಭಜನೆ ಭಕ್ತಿಯ ಸೇವೆ ನೆರವೇರಿಸಿದರು.
_*ಗುಡಿಕಟ್ಟಿ ಗ್ರಾಮದಲ್ಲಿ ಅಡವಿ ಸಿದ್ದೇಶ್ವರ ಮೂರ್ತಿ ಪ್ರತಿಷ್ಠಾಪನೆಯ ಜಾತ್ರಾ ಮಹೋತ್ಸವ*_.. ✍️
By -
March 17, 2026
0