ಗುಡಿಕಟ್ಟಿ ಗ್ರಾಮದಲ್ಲಿ ಹೋಳಿ ಹಬ್ಬದ ಸಂಭ್ರಮಾಚರಣೆ*

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
**ಗುಡಿಕಟ್ಟಿ ಗ್ರಾಮದಲ್ಲಿ ಹೋಳಿ ಹಬ್ಬದ ಸಂಭ್ರಮಾಚರಣೆ* ಬೈಲಹೊಂಗಲ ತಾಲೂಕಿನ ಗುಡಿಕಟ್ಟಿ ಗ್ರಾಮದಲ್ಲಿ ಪ್ರತಿ ವರ್ಷ ಪದ್ಧತಿಯಂತೆ ಈ ವರ್ಷವೂ ಎಲ್ಲಾ ಸಮುದಾಯದವರು ಸೇರಿಕೊಂಡು ಮಂಗಳವಾರ ದಿನಾಂಕ 03/03/2026 ರಂದು ಅಚ್ಚುಕಟ್ಟಾಗಿ ಹೋಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದರು ಸ್ವಯಂ ನಿಯಂತ್ರಣ, ಆಧ್ಯಾತ್ಮಿಕ ಜಾಗೃತಿ ಹೋಳಿ ಹಬ್ಬ ಮತ್ತು ಲೌಕಿಕ ಆಸೆಗಳನ್ನು ತ್ಯಜಿಸಿ ದೈವಿಕತೆಯನ್ನು ಹೊಂದುವುದನ್ನು ಕಲಿಸುವ ರಂಗು ರಂಗಿನ ಬಣ್ಣಗಳ ಮೂಲಕ ಪ್ರತಿಯೊಬ್ಬರ ಜೀವನದಲ್ಲಿ ನವೋಲ್ಲಾಸ ಮೂಡಿಸುವ ಈ ಹಬ್ಬವೆ ಹೋಳಿ ಹಬ್ಬ. ಅದರ ಜೊತೆಗೆ ಊರಿನ ಯುವಕರು ಸೇರಿಕೊಂಡು ಸೌಂಡ್ ಸಿಸ್ಟಮ್ ಹಚ್ಚಿ ವರ್ಷದ ಕೊನೆಯ ಹಬ್ಬವೆಂದು ಕುಣಿದು ಕುಪ್ಪಳಿಸಿ ಊರಿನ ಯುವಕರು ಹೋಳಿ ಹಬ್ಬಕ್ಕೆ ಮೆರಗು ತಂದರು. ವಿಶೇಷವಾಗಿ ಪ್ರತಿ ವರ್ಷ ಪದ್ಧತಿಯಂತೆ ಈ ವರ್ಷವೂ ಕೂಡ ಕಾಮದಹಣ ಮಾಡುವುದರ ಮುಖಾಂತರ ಎಲ್ಲಕಡೆ ಮಳೆ ಬೆಳೆ ಚೆನ್ನಾಗಿ ಬರಲಿ ಎಂದು ಕಾಮಣ್ಣನನ್ನು ನೆನೆದು ಕಾಮದಹನ ಮಾಡುವುದರ ಮುಖಾಂತರ ಹೋಳಿ ಹಬ್ಬವನ್ನು ಯಶಸ್ವಿಗೊಳಿಸಿದರು. 
 ವರದಿ : ಶಿವಾನಂದ ಕಿಲ್ಲೇದಾರ

Post a Comment

0Comments

Post a Comment (0)