ನೇಸರಗಿ:ಸಮೀಪದ ಹಣಬರಟ್ಟಿ ಗ್ರಾಮದ ಹಿರೇಮಠದ ಷ ಬ್ರ ಬಸವಲಿಂಗ ಶಿವಾಚಾರ್ಯರ ನೇತೃತ್ವದಲ್ಲಿ ಜಗದ್ಗುರು ರೇಣುಕಾಚಾರ್ಯರ ಜಯಂತಿಯನ್ನು ಆಚರಣೆ ಮಾಡಲಾಯಿತು.
ಅನಬರಟ್ಟಿ ಹಿರೇಮಠದಲ್ಲಿ ಮುಂಜಾನೆ 10 ಗಂಟೆಗೆ ಗ್ರಾಮದ ಗುರು ಹಿರಿಯರು ಹಾಗೂ ಹೆಣ್ಣು ಮಕ್ಕಳಿಂದ ಜಗದ್ಗುರು ರೇಣುಕಾಚಾರ್ಯರ ಮೂರ್ತಿಗೆ ಅಭಿಷೇಕ ಹಾಗೂ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸುವುದರ ಮುಖಾಂತರ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು
ಜಗದ್ಗುರು ರೇಣುಕಾಚಾರ್ಯ ಜಯಂತಿಯ ಕಾರ್ಯಕ್ರಮದಲ್ಲಿ ವೀರಶೈವ ಧರ್ಮದ ಸ್ಥಾಪಕ ಜಗದ್ಗುರು ಶ್ರೀ ರೇಣುಕಾಚಾರ್ಯರು ಸಮಾಜ ಸುಧಾರಣಾ ಮತ್ತು ಆಧ್ಯಾತ್ಮಿಕ ಜಾಗೃತಿ ದಾರಿದೀಪವಾಗಿದ್ದಾರೆ ಅವರ ತತ್ವ ಸಿದ್ಧಾಂತಗಳನ್ನು ಎಲ್ಲರೂ ಪಾಲಿಸಬೇಕು ಎಂದು ಹಿರೇಮಠದ ಬಸವಲಿಂಗ ಶಿವಾಚಾರ್ಯರು ಮಾತನಾಡಿದರು
ಶ್ರೀ ರೇಣುಕಾಚಾರ್ಯರು ವೀರಶೈವ ಧರ್ಮದ ಸ್ಥಾಪಕರಾಗಿ ಸುಮಾರು 18 ಮಠಗಳನ್ನು ಸ್ಥಾಪನೆ ಮಾಡುವುದರ ಜೊತೆಗೆ ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಸಾರಿದರು ಎಂದು ಕಾರ್ಯಕ್ರಮನ ಉದ್ದೇಶಿಸಿ ಪತ್ರಕರ್ತರು ರೈತ ಸಂಘದ ಮುಖಂಡರು ಮಹಾಂತೇಶ ಹಿರೇಮಠ ಮಾತನಾಡಿದರು.
ಗ್ರಾಮದ ಮುಖಂಡರಾದ ಮಲ್ಲಿಕಾರ್ಜುನ್ ಬನ್ನೂರ್ ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ ವೀರಭದ್ರಪ್ಪ ಬಡಿಗೇರ್ ಕಾರ್ಯಕ್ರಮ ವಾದ ವಂದನಾರ್ಪಣೆಯನ್ನು ಮಾಡಿದರು.
ಗ್ರಾಮದ ಹಿರಿಯರಾದ ಈರಪ್ಪ ಬ ಉಳವಿ, ಶ್ರೀಧರ್ ಛಾಯಾಲ್ ಗಂಗಪ್ಪ ಸಿ ಉಳವಿ ಲಕ್ಷ್ಮಣ್ ಕಡಬಿ ನಿಂಗಪ್ಪರ ಬಡವಣ್ಣವರ್ ಮಲ್ಲಪ್ಪ ಬನ್ನೂರು ಅಡಿಯಪ್ಪ ಹಡಿಗಿನಾಳ ಶಿವಲಿಂಗಪ್ಪ ಜಕಾತಿ ಬಸಪ್ಪ ದೊಡ್ಡ ಲಿಂಗಣ್ಣವರ್ ಗ್ರಾಮದ ಮಹಿಳೆಯರು ಉಪಸ್ಥಿತರಿದ್ದರು.