*ಕುಕಡೊಳ್ಳಿ ಸರ್ಕಾರಿ ಶಾಲೆಗೆ 4 ಕೊಠಡಿ, ಮುಖ್ಯ ಮಂತ್ರಿಗಳ ವಿಶೇಷ ಅನುದಾನ ಕಲ್ಪಿಸುವಂತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಮನವಿ ಮಾಡಿಕೊಂಡ ಕುಕಡೊಳ್ಳಿ ಗ್ರಾಮಸ್ಥರು* ಕುಕಡೊಳ್ಳಿ ಸರ್ಕಾರಿ ಶಾಲೆಗೆ 4 ಕೊಠಡಿ, ಮುಖ್ಯ ಮಂತ್ರಿಗಳ ವಿಶೇಷ ಅನುದಾನ ಕಲ್ಪಿಸುವಂತೆ ಮನವಿ..
ಮಾನ್ಯ ಸಚಿವರು ಹಾಗೂ ಬೆಳಗಾವಿ ಗ್ರಾಮೀಣ ಶಾಸಕರು ಆದ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್ ರವರಿಗೆ ಫೆಬ್ರವರಿ ಶನಿವಾರ 28ರಂದು ಮನವಿ ...
ಬೆಳಗಾವಿ ತಾಲೂಕಿನ ಗಡಿ ಗ್ರಾಮವಾದ ಕುಕಡೊಳ್ಳಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಗೆ ತುರ್ತಾಗಿ ನಾಲ್ಕೂ ಕೊಠಡಿ ಮತ್ತು ಶತಮಾನೋತ್ಸವ (100ವರ್ಷ)ಆಚರಿಸಿ ಕೊಂಡಿರುವ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗೆ ಮುಖ್ಯ ಮಂತ್ರಿಗಳಾದ ಸನ್ಮಾನ್ಯ ಸಿದ್ದರಾಮಯ್ಯ ಅವರ ವಿಶೇಷ ಅನುದಾನದಲ್ಲಿ ಶಾಲಾ ಅಭಿವೃದ್ದಿಗೆ, ಮಕ್ಕಳ ಸರ್ವಾಂಗೀಣ ಅಭಿವೃದ್ದಿಗೆ ಹಾಗೂ ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ ವಿಶೇಷ ಅನುದಾನವನ್ನು ಮಂಜೂರು ಮಾಡಿಸಬೇಕೆಂದು ಮತ್ತು _ನಮ್ಮ ಶಾಲೆಯಲ್ಲಿ ಉಭಯ ಮಾಧ್ಯಮ ತರಗತಿಗಳನ್ನು ಕಳೆದ ಮೂರು ವರ್ಷಗಳ ಹಿಂದೆಯೇ ಪಾಲಕರ ಸ್ವಯಂ ಒಪ್ಪಿಗೆಯ ಮೇರೆಗೆ ನಿಲ್ಲಿಸಲಾಗಿತ್ತು ಶಾಲಾ ತಂತ್ರಾಂಶವನ್ನು ಪರಿಸಿಲಿಸಿ ಮಕ್ಕಳ ಶೈಕ್ಷಣಿಕ ದೃಷ್ಟಿಯಿಂದ ಮಾನ್ಯ ಶಿಕ್ಷಣ ಸಚಿವರ ಗಮನಕ್ಕೆ ಸದರಿ ವಿಷಯವನ್ನು ಪ್ರಸ್ತಾಪಿಸಿ ಆಗುತ್ತಿರುವ ಸಮಸ್ಯೆಯನ್ನು ಕೂಡಲೆ ಪರಿಹರಿಸಲು ಮಾನ್ಯ ಶಾಸಕರಿಗೆ ಕುಕಡೊಳ್ಳಿ ಶಾಲಾ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರು ಸೇರಿದಂತೆ ಗ್ರಾಮದ ಗುರು ಹಿರಿಯರು ಮನವಿ ಮಾಡಿದರು.
ಇದೇ ವೇಳೆ ಶಾಲಾ ಮೇಲುಸ್ತುವಾರಿ ಸಮಿತಿ
ಅದ್ಯಕ್ಷರಾದ ಶ್ರೀ ಮಾರುತಿ ಸಾರಾವರಿ .
ಉಪಾಧ್ಯಕ್ಷರಾದ ಶ್ರೀಮತಿ ಬಂಗಾರೆವ್ವ .ಬ ನಾಯ್ಕರ,
ಶ್ರೀಮತಿ ಅರ್ಚನಾ ನ ಹುಡೇದ,
ಸಿದ್ದಪ್ಪ ಅಡಿಮನಿ,
ವಿಜಯ ವಡ್ಡಿನ ,
ರಮೇಶ ಮಾಯಪ್ಪಗೋಳ,
ವೀರನಗೌಡ ಪಾಟೀಲ.
ಪುಂಡಲಿಕ ಬೈರೋಜಿ,
ಸಹದೇವ ಬೈರೋಜಿ,
ಕುಮಾರ ತಟ್ಟಿಮನಿ,
ಯಲ್ಲಪ್ಪ ಬೈರೋಜಿ,
ಮಾರುತಿ ಕುಜ್ಜಿ,
ಅಡಿವೆಪ್ಪ ಚಿಕ್ಕಮಠ,
ಶಿವಪ್ಪ ಲಕಮೋಜಿ
ನಾಗೇಶ ಗಾಡಿಕೊಪ್ಪ ಸೇರಿದಂತೆ ಗ್ರಾಮಸ್ಥರು ಮನವಿ ಸಲ್ಲಿಸಿದರು. ವರದಿ:ಶಿವಾನಂದ ಕಿಲ್ಲೇದಾರ